Indian Railways : ರೈಲು ಪ್ರಯಾಣಿಕರ ಗಮನಕ್ಕೆ! ಪ್ರಯಾಣಿಕರಿಗೆ ಗುಡ್ ನ್ಯೂಸ್ ಪ್ರಕಟಿಸಿದ ರೈಲು ಇಲಾಖೆ

Indian Railways Update: ರೈಲುಗಳಲ್ಲಿ ಕಾಯ್ದಿರಿಸದ ಕೋಚ್‌ಗಳನ್ನು ಮರುಸ್ಥಾಪಿಸಲು ರೈಲ್ವೆ ಇಲಾಖೆ ನಿರ್ಧರಿಸಿದ ನಂತರ, ಇದೀಗ ರೈಲುಗಳಲ್ಲಿ ಹಾಸಿಗೆ-ಹೊದಿಕೆಗಳ ಸೌಲಭ್ಯವನ್ನು ಮತ್ತೆ ಆರಂಭಿಸಲಾಗುವುದು ಎಂದು ಇಲಾಖೆ ಘೋಷಿಸಿದೆ. ಈ ಸಂಬಂಧ ರೈಲ್ವೆ ಮಂಡಳಿಯಿಂದ ಎಲ್ಲ ರೈಲ್ವೆ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ಆದೇಶ ನೀಡಲಾಗಿದೆ.  

Written by - Nitin Tabib | Last Updated : Mar 10, 2022, 08:13 PM IST
  • ರೈಲು ಯಾತ್ರೆಯ ವೇಳೆ ಮತ್ತೆ ಸಿಗಲಿವೆ ಹಾಸಿಗೆ-ಹೊದಿಕೆ,
  • AC ಕೋಚ್ ಗಳಲ್ಲಿ ಹೊದಿಕೆ ಹಾಗೂ ಲಿನನ್ ಸೇವೆ ಪುನರಾರಂಭ,
  • ಕೊವಿಡ್ ಕಾರಣ ರೇಲ್ವೆ ಸಚಿವಾಲಯ ಈ ಸೇವೆಯನ್ನು ಸ್ಥಗಿತಗೊಳಿಸಿತ್ತು.
Indian Railways : ರೈಲು ಪ್ರಯಾಣಿಕರ ಗಮನಕ್ಕೆ!  ಪ್ರಯಾಣಿಕರಿಗೆ ಗುಡ್ ನ್ಯೂಸ್ ಪ್ರಕಟಿಸಿದ ರೈಲು ಇಲಾಖೆ title=
Indian Railways (File Photo)

ನವದೆಹಲಿ: Indian Railways Latest News - ರೈಲ್ವೇ ಪ್ರಯಾಣಿಕರಿಗೆ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ದೂರದ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ಹೊದಿಕೆಗಳು ಮತ್ತು ಹಾಸಿಗೆಗಳನ್ನು ಒದಗಿಸುವ ಸೌಲಭ್ಯವನ್ನು ಪುನರಾರಂಭಿಸಲು ರೈಲ್ವೆ ಸಚಿವಾಲಯ (Ministry Of Railways) ನಿರ್ಧರಿಸಿದೆ. ರೈಲ್ವೇಯ ಪರವಾಗಿ, ರೈಲುಗಳ AC ಕೋಚ್‌ಗಳಲ್ಲಿ ಹೊದಿಕೆಗಳು ಮತ್ತು ಲಿನಿನ್ (Blanket And Linen Service) ಒದಗಿಸುವ ಸೇವೆಯನ್ನು ಮರುಸ್ಥಾಪಿಸಲಾಗಿದೆ.

ತಕ್ಷಣವೇ ಹಾಸಿಗೆ-ಹೊದಿಕೆ ಸೇವೆ ಆರಂಭಿಸಲು ಆದೇಶ
ರೈಲ್ವೆ ಒದಗಿಸುತ್ತಿದ್ದ ಈ ಸೌಲಭ್ಯವನ್ನು ಕೋವಿಡ್‌ನಿಂದಾಗಿ 2020 ರಲ್ಲಿ ಸ್ಥಗಿತಗೊಳಿಸಲಾಗಿತ್ತು. ತಕ್ಷಣವೇ ಜಾರಿಗೆ ಬರುವಂತೆ ಎಸಿ ಕೋಚ್‌ನೊಳಗೆ ಲಿನಿನ್, ಬ್ಲಾಂಕೆಟ್‌ಗಳು ಮತ್ತು ಕರ್ಟನ್‌ಗಳ ಪೂರೈಕೆಯನ್ನು ಪ್ರಾರಂಭಿಸಬೇಕು ಎಂದು ರೈಲ್ವೆ ಮಂಡಳಿಯು ಎಲ್ಲಾ ರೈಲ್ವೆ ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ನೀಡಿರುವ ಆದೇಶದಲ್ಲಿ ತಿಳಿಸಿದೆ.

ಸೌಲಭ್ಯಗಳನ್ನು ಹಂತಹಂತವಾಗಿ ಮರುಸ್ಥಾಪಿಸಲಾಗುತ್ತಿದೆ
ಕೋವಿಡ್-19 ಪ್ರಕರಣಗಳು ಹೆಚ್ಚಾದ ಹಿನ್ನೆಲೆ 2020 ರಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಸಿ ಕೋಚ್‌ಗಳಲ್ಲಿ (AC Coach) ನೀಡಲಾದ ಈ ಸೌಲಭ್ಯವನ್ನು ರೈಲ್ವೆ ಸ್ಥಗಿತಗೊಳಿಸಿತ್ತು ಎಂಬುದು ಇಲ್ಲಿ ಗಮನಾರ್ಹ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸರ್ಕಾರವು ಕ್ರಮೇಣ ಮರುಸ್ಥಾಪಿಸುತ್ತಿದೆ.

ಇದನ್ನೂ ಓದಿ-Uttara Pradesh ದಲ್ಲಿ ಭಾರಿ ಗರ್ಜಿಸಿದ್ದ Asaduddin Owaisi ಪಕ್ಷಕ್ಕೆ ಸಿಕ್ಕ ಮತಗಳೆಷ್ಟು?

ನೀವು ಕಾಯ್ದಿರಿಸದ ಕೋಚ್‌ನಲ್ಲಿಯೂ ಪ್ರಯಾಣಿಸಬಹುದು
ಇತ್ತೀಚೆಗೆ, ಮಾರ್ಚ್ 27 ರಿಂದ ಅಂತರರಾಷ್ಟ್ರೀಯ ವಿಮಾನಯಾನವನ್ನು ಪ್ರಾರಂಭಿಸಲು ಸರ್ಕಾರವು ಆದೇಶ ನೀಡಿದೆ. ಈ ಹಿಂದೆ ರೈಲಿನಲ್ಲಿ ಕಾಯ್ದಿರಿಸದ ಕೋಚ್‌ಗಳನ್ನು ಅಳವಡಿಸುವ ಮಹತ್ವದ ನಿರ್ಧಾರವನ್ನು ಮಂಡಳಿ ಕೈಗೊಂಡಿತ್ತು. ರೈಲ್ವೆಯ ಈ ಕ್ರಮದಿಂದ ಕೋಟ್ಯಂತರ ಪ್ರಯಾಣಿಕರು ಮೊದಲಿನಂತೆ ಅಗ್ಗದ ಟಿಕೆಟ್‌ನಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ. ಇದೀಗ ಎಸಿ ಕೋಚ್‌ಗಳಲ್ಲಿ ಲಿನಿನ್, ಬ್ಲಾಂಕೆಟ್ ಮತ್ತು ಕರ್ಟನ್‌ಗಳನ್ನು ಒದಗಿಸುವ ಆದೇಶದ ನಂತರ ಪ್ರಯಾಣಿಕರಿಗೆ ಸಾಕಷ್ಟು ನೆಮ್ಮದಿಯೇ ಸಿಕ್ಕಂತಾಗಿದೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ-Yogi Adityanath : ಯುಪಿಯಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ : ವಿಜಯೋತ್ಸವ ಆಚರಿಸಿದ ಸಿಎಂ ಯೋಗಿ 

ಕಂಬಳಿ, ಬೆಡ್ ಶೀಟ್ ಲಭ್ಯವಿಲ್ಲದ ಕಾರಣ ಪ್ರಯಾಣಿಕರು ಕಂಬಳಿ ಸಮೇತ ದೂರ ಪ್ರಯಾಣ ಕೈಗೊಳ್ಳಬೇಕಾಗುತ್ತಿತ್ತು. ಪ್ರಯಾಣಿಕರಿಗೆ ಆಹಾರ, ಹೊದಿಕೆ ಮತ್ತು ಲಿನಿನ್ ಸೇವೆ ಹೊರತುಪಡಿಸಿ, ಇತರ ಸೌಲಭ್ಯಗಳನ್ನು ಇನ್ನೂ ಪುನಃಸ್ಥಾಪಿಸಲಾಗಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News