Vistadome Coach Train: ಗಂಟೆಗೆ 180 ಕಿ.ಮೀ ವೇಗದಲ್ಲಿ ಓಡಿದ ವಿಸ್ಟಾಡಾಮ್ ಬೋಗಿ ಹೊಂದಿದ ರೈಲು

Vistadom Coach Train: ಭಾರತೀಯ ರೈಲ್ವೆ ಈ ವರ್ಷದ ಕೊನೆಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ. 2020 ಅಂತ್ಯವಾಗುವ ಮೊದಲು ವಿಸ್ಟಾಡೋಮ್ ಕೋಚ್ ಗಳನ್ನು ಹೊಂದಿರುವ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿದೆ.

Written by - Nitin Tabib | Last Updated : Dec 29, 2020, 06:57 PM IST
  • ಗಂಟೆಗೆ 180 ಕಿಮೀ ವೇಗದಲ್ಲಿ ಧಾವಿಸಿದ ವಿಸ್ಟಾಡಾಮ್ ಕೋಚ್ ಹೊಂದಿರುವ ರೈಲು.
  • ಭಾರತೀಯ ರೇಲ್ವೆ ಇಲಾಖೆಯಿಂದ ಯಶಸ್ವಿ ಪರೀಕ್ಷೆ ಎಂದ ಪಿಯೂಷ್ ಗೋಯಲ್,
  • ಈ ಕೋಚ್ ಆಗಮನದಿಂದ ರೈಲು ಇಲಾಖೆಯಲ್ಲಿಯೂ ಉತ್ಸಾಹ ಹೆಚ್ಚಾಗಿದೆ.
Vistadome Coach Train: ಗಂಟೆಗೆ 180 ಕಿ.ಮೀ ವೇಗದಲ್ಲಿ ಓಡಿದ ವಿಸ್ಟಾಡಾಮ್ ಬೋಗಿ ಹೊಂದಿದ ರೈಲು title=
Vistadome Coach Train (Courtesy-Twitter)

ನವದೆಹಲಿ: Vistadom Coach Train - ಭಾರತೀಯ ರೈಲ್ವೆ ಈ ವರ್ಷದ ಕೊನೆಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ. 2020 ಅಂತ್ಯವಾಗುವ ಮೊದಲು ವಿಸ್ಟಾಡೋಮ್ ಕೋಚ್ ಗಳನ್ನು ಹೊಂದಿರುವ ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿದೆ. ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ರೈಲು ವಿಶೇಷ ವಿಸ್ಟಾಡೋಮ್ ಟೂರಿಸ್ಟ್ ಕೋಚ್ ನಿಂದ ತಯಾರಿಸಲ್ಪಟ್ಟಿದೆ ಮತ್ತು ಅದರ ವೇಗವೂ ತುಂಬಾ ವೇಗವಾಗಿದೆ. ಪ್ರಸ್ತುತ ಈ ರೈಲಿನ ಪ್ರಯೋಗವೂ ಪೂರ್ಣಗೊಂಡಿದೆ.

ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಪಿಯೂಷ್ ಗೋಯೆಲ್ 
ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಕೇಂದ್ರ ರೇಲ್ವೆ ಖಾತೆ ಸಚಿವ ಪಿಯೂಷ್ ಗೋಯೆಲ್ "ಹೊಸದಾಗಿ ವಿನ್ಯಾಸಗೊಳಿಸಲಾಗಿರುವ  ವಿಸ್ಟಾಡೊಮ್ ಟೂರಿಸ್ಟ್ ಬೋಗಿಗಳು ಗಂಟೆಗೆ 180 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅವುಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಕೋಚ್ ಗಳು ಪ್ರಯಾಣಿಕರ ಪ್ರಯಾಣ ಸ್ಮರಣೀಯವಾಗಿಸುತ್ತದೆ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದರಿಂದ ಉತ್ತೇಜನ ಸಿಗಲಿದೆ" ಎಂದು ಹೇಳಿದ್ದಾರೆ.

ಇದನ್ನು ಓದಿ- Indian Railways: ಇನ್ಮುಂದೆ ಕೇವಲ ಚಾಟ್ ಮಾಡಿ IRCTC ಟಿಕೆಟ್ ಕಾಯ್ದಿರಿಸಿ... ಹೇಗೆ? ಇಲ್ಲಿದೆ ವಿವರ

ವೇಗದ ದೃಷ್ಟಿಯಿಂದ, ಈ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಮನಾಗಿದೆ. ಇದು ಪ್ರಯೋಗದ ಸಮಯದಲ್ಲಿ ಗಂಟೆಗೆ 180 ಕಿ.ಮೀ ವೇಗವನ್ನು ಸಾಧಿಸಿದೆ. ಈ ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಈ ಮೊದಲು ಟಾಲ್ಗೊ ರೈಲು ಭಾರತೀಯ ಪಟ್ಟಿಗಳ ಮೇಲೆ 180 ವೇಗದಲ್ಲಿ ಚಲಿಸಿತ್ತು. ಆದರೆ ಇದು ಸ್ಪೇನ್‌ನಿಂದ ಬಂದ ರೈಲಾಗಿತ್ತು. ಇದಲ್ಲದೆ, ಗತಿಮಾನ್ ಎಕ್ಸ್‌ಪ್ರೆಸ್ ದೆಹಲಿ ಮತ್ತು ಝಾನ್ಸಿ ನಡುವೆ ಗರಿಷ್ಠ 160 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ.

ಇದನ್ನು ಓದಿ- Kashi Yatre: ದೆಹಲಿ-ವಾರಣಾಸಿ ನಡುವೆ ಸಂಚರಿಸಲಿದೆ ಬುಲೆಟ್ ಟ್ರೈನ್

ಈ ಕೋಚ್ ಆಗಮನದಿಂದ ರೈಲು ಇಲಾಖೆ (Indian Railways) ಯಲ್ಲಿಯೂ ಉತ್ಸಾಹ ಹೆಚ್ಚಾಗಿದೆ. ರೇಲ್ವೆ ಬಿಡುಗಡೆ ಮಾಡಿರುವ ಭಾವಚಿತ್ರಗಳನ್ನು ನೋಡಿದರೆ, ಈ ರೈಲು ಮೊದಲ ನೋಟದಲ್ಲೇ ಜನರನ್ನು ಆಕರ್ಷಿಸಲಿದೆ. ಇದರಲ್ಲಿ ಯಾತ್ರಿಗಳ ಸೌಕರ್ಯಕ್ಕೆ ಹೆಚ್ಚಿನ ಗಮನ ನೀಡಲಾಗಿದೆ.

ಇದನ್ನು ಓದಿ- Ticket ಕಾಯ್ದಿರಿಸುವ ಪದ್ಧತಿಯಲ್ಲಿ ಬದಲಾವಣೆ ತಂದ Indian Railways, ಯಾತ್ರಿಗಳಿಗೆ ಲಾಭ, Railways ನೀಡಿದ ಮಾಹಿತಿ ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News