‘ಗುಟ್ಕಾ’ ಕಲೆ ಸ್ವಚ್ಛಗೊಳಿಸಲು ಭಾರತೀಯ ರೈಲ್ವೆ ವರ್ಷಕ್ಕೆ 12,000 ಕೋಟಿ ರೂ. ಖರ್ಚು ಮಾಡುತ್ತದೆ..!

ರೈಲ್ವೆ ಪ್ರಯಾಣದ ವೇಳೆ ನಿಲ್ದಾಣಗಳಲ್ಲಿ, ರೈಲ್ವೆ ಬೋಗಿಗಳಲ್ಲಿ ಉಗುಳುವ ಜನರ ಕಾಟ ತಪ್ಪಿಸಲು ಹೊಸ ಪರಿಹಾರ ಕಂಡುಕೊಳ್ಳಲಾಗಿದೆ.

Written by - Puttaraj K Alur | Last Updated : Oct 11, 2021, 04:48 PM IST
  • ಗುಟ್ಕಾ ಕಲೆ ಸ್ವಚ್ಛಗೊಳಿಸಲು ರೈಲ್ವೆ ಇಲಾಖೆಯಿಂದ ವರ್ಷಕ್ಕೆ 12 ಸಾವಿರ ಕೋಟಿ ರೂ. ಖರ್ಚು
  • ರೈಲ್ವೆ ನಿಲ್ದಾಣಗಳಲ್ಲಿ ಉಗುಳುವ ಕಾಟ ತಪ್ಪಿಸಲು ಭಾರತೀಯ ರೈಲ್ವೆಯಿಂದ ಹೊಸ ಯೋಜನೆ
  • ದೇಶದ 42 ನಿಲ್ದಾಣಗಳಲ್ಲಿ ಉಗುಳುವ ಕಿಯೋಸ್ಕ್‌ ಗಳನ್ನು ಸ್ಥಾಪಿಸಲು ಚಿಂತನೆ
‘ಗುಟ್ಕಾ’ ಕಲೆ ಸ್ವಚ್ಛಗೊಳಿಸಲು ಭಾರತೀಯ ರೈಲ್ವೆ ವರ್ಷಕ್ಕೆ 12,000 ಕೋಟಿ ರೂ. ಖರ್ಚು ಮಾಡುತ್ತದೆ..!  title=
ಭಾರತೀಯ ರೈಲ್ವೆ ಇಲಾಖೆ ಹೊಸ ಯೋಜನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ(Swachh Bharat Mission)ಯೋಜನೆಯು ದೇಶದಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಜನರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿತ್ತು. ನಾವು ವಾಸಿಸುವ ಸ್ಥಳ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಎಷ್ಟೋ ಹೇಳಿದರೂ ನಮ್ಮ ಜನರು ಕೇಳುತ್ತಿಲ್ಲ. ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಉಗುಳುವ ಜನರ ನಡವಳಿಕೆಯಲ್ಲಿ ಬದಲಾವಣೆ ತರುವುದು ಇಂದಿಗೂ ಕಷ್ಟದಾಯಕವಾಗಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ಉಗುಳುವ ಜನರಿಂದ ಅಪಾರ ಪ್ರಮಾಣದ ಹಾನಿಯುಂಟಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ಹೌದು, ಈ ಕುರಿತು ಆಶ್ಚರ್ಯಕರ ಮತ್ತು ಅಚ್ಚರಿದಾಯಕ ವಿಷಯ ಹೊರಬಿದ್ದಿದೆ. ಅದೇನೆಂದರೆ ಭಾರತೀಯ ರೈಲ್ವೆ(Indian Railways) ಇಲಾಖೆ ‘ಗುಟ್ಕಾ’ ಕಲೆಗಳನ್ನು ಸ್ವಚ್ಛಗೊಳಿಸಲು ಪ್ರತಿವರ್ಷ ಸುಮಾರು 12,000 ಕೋಟಿ ರೂ.ನಷ್ಟು ಹಣ ಖರ್ಚು ಮಾಡುತ್ತದೆಯಂತೆ. ಇದನ್ನು ನೀವು ನಂಬಲೇಬೇಕು. ಕೇವಲ ಗುಟ್ಕಾ ಕಲೆಗಳನ್ನು ಸಚ್ಛಗೊಳಿಸಲು ದೇಶದ ರೈಲ್ವೆ ಇಲಾಖೆ ಇಷ್ಟೊಂದು ಹಣವನ್ನು ಖರ್ಚು ಮಾಡುತ್ತಿದೆ.

ಇದನ್ನೂ ಓದಿ: Hero Dhamaka festive offer: ಬೈಕ್ ಖರೀದಿಸುವವರಿಗೆ ಸಿಗಲಿದೆ 12,500 ರೂ. ಲಾಭ

ಕೋವಿಡ್ -19(COVID-19) ಮಾರ್ಗಸೂಚಿಗಳ ಹೊರತಾಗಿಯೂ ವೈಯಕ್ತಿಕ ನೈರ್ಮಲ್ಯ ಮತ್ತು ಸುತ್ತಮುತ್ತಲಿನ ಶುಚಿತ್ವವನ್ನು ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡುತ್ತಿದ್ದರೂ, ಎಲ್ಲೆಂದರಲ್ಲಿ ಉಗುಳುವ ಅಭ್ಯಾಸ ರೂಢಿಸಿಕೊಂಡಿರುವ ಜನರು ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಂಡಿಲ್ಲ. ಹೀಗಾಗಿ ಈ ಸಮಸ್ಯೆ ಇನ್ನೂ ಹೆಚ್ಚು ಉಲ್ಬಣಗೊಳ್ಳುತ್ತಿದೆ.

ರೈಲ್ವೆ ಪ್ರಯಾಣದ ವೇಳೆ ನಿಲ್ದಾಣಗಳಲ್ಲಿ, ರೈಲ್ವೆ ಬೋಗಿಗಳಲ್ಲಿ ಉಗುಳುವ ಜನರ ಕಾಟ(Clean India initiative)ತಪ್ಪಿಸಲು ಹೊಸ ಪರಿಹಾರ ಕಂಡುಕೊಳ್ಳಲಾಗಿದೆ. ಸಹಪ್ರಯಾಣಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಯೊಂದನ್ನು ಭಾರತೀಯ ರೈಲ್ವೆ ಇಲಾಖೆ ರೂಪಿಸಿದೆ. ರೈಲ್ವೆ ನಿಲ್ದಾಣದ ಆವರಣದಲ್ಲಿ ಉಗುಳುವ ಕಿಯೋಸ್ಕ್‌(Spitter Kiosks) ಗಳನ್ನು ಸ್ಥಾಪಿಸುವ ಯೋಜನೆ ಇದಾಗಿದ್ದು, ಇದನ್ನು ಸಾಮಾನ್ಯ ಜನರು ಕೂಡ ಬಳಸಬಹುದಾಗಿದೆ.

ಇದನ್ನೂ ಓದಿ: PM Gati Shakti Yojana: ಶೀಘ್ರದಲ್ಲಿಯೇ ಪ್ರಧಾನಿ ಮೋದಿಯಿಂದ 'ಗತಿ ಶಕ್ತಿ ಯೋಜನೆ'ಗೆ ಚಾಲನೆ, ಏನಿದರ ವಿಶೇಷತೆ?

ದೇಶದ 42 ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆ ಇಂತಹ ಕಿಯೋಸ್ಕ್‌ ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಈ ಕಿಯೋಸ್ಕ್‌ ಗಳನ್ನು ಸ್ಪಿಟೂನ್ ಪೌಚ್‌ಗಳೊಂದಿಗೆ ಸಂಗ್ರಹಿಸಲಾಗುವುದು, ಇದಕ್ಕೆ 5 ರಿಂದ 10 ರೂ. ವೆಚ್ಚ ತಗುಲತ್ತದೆ.  ಜನರು ತಮ್ಮ ಕಲೆ ಸ್ವಚ್ಛಗೊಳಿಸುವಿಕೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುವ ಸ್ಪಿಟೂನ್‌(Spittoons)ಗಳನ್ನು ಬಳಸುತ್ತಾರೆ ಎಂದು ರೈಲ್ವೆ ಇಲಾಖೆ ಆಶಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News