Indian Railways : ಕೊರೋನಾಗೆ 1,952 ರೈಲ್ವೆ ಸಿಬ್ಬಂದಿಗಳು ಬಲಿ : ರೈಲ್ವೆ ಇಲಾಖೆ

ಕೋವಿಡ್ ಭಾರತೀಯ ರೈಲ್ವೆ ಇಲಾಖೆ ಮೇಲೆ ದುರಂತ ಪರಿಣಾಮ ಬೀರಿದ್ದು

Last Updated : May 11, 2021, 02:22 PM IST
  • ಕೋವಿಡ್ ಭಾರತೀಯ ರೈಲ್ವೆ ಇಲಾಖೆ ಮೇಲೆ ದುರಂತ ಪರಿಣಾಮ ಬೀರಿದ್ದು
  • ಕೋವಿಡ್ 19 ಸೋಂಕಿನಿಂದ 1,952 ಉದ್ಯೋಗಿಗಳನ್ನು ಕಳೆದುಕೊಂಡಿದೆ
  • ದೇಶದ ಅತೀ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲು ಸಂಚಾರ ವ್ಯವಸ್ಥೆ
Indian Railways : ಕೊರೋನಾಗೆ 1,952 ರೈಲ್ವೆ ಸಿಬ್ಬಂದಿಗಳು ಬಲಿ : ರೈಲ್ವೆ ಇಲಾಖೆ title=

ನವದೆಹಲಿ: 2020ರಲ್ಲಿ ಆರಂಭವಾದ ಕೋವಿಡ್ ಸೋಂಕು ಭಾರತೀಯ ರೈಲ್ವೆ ಇಲಾಖೆ ಮೇಲೆ ದುರಂತ ಪರಿಣಾಮ ಬೀರಿದ್ದು, ಕೋವಿಡ್ 19 ಸೋಂಕಿನಿಂದ 1,952 ಉದ್ಯೋಗಿಗಳನ್ನು ಕಳೆದುಕೊಂಡಿರುವುದಾಗಿ ತಿಳಿಸಿದೆ. ದೇಶದ ಅತೀ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲು ಸಂಚಾರ ವ್ಯವಸ್ಥೆಯಲ್ಲಿ ದಿನಂಪ್ರತಿ ಒಂದು ಸಾವಿರ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗುತ್ತಿದೆ ಎಂದು ರೈಲ್ವೆ ಮಂಡಳಿ ಹೇಳಿದೆ.

ರೈಲ್ವೆ(Indian Railways) ಕೂಡಾ ಯಾವುದೇ ರಾಜ್ಯ ಅಥವಾ ಪ್ರದೇಶಕ್ಕಿಂತ ಭಿನ್ನವಾಗಿಲ್ಲ. ಯಾಕೆಂದರೆ ನಾವು ಕೂಡಾ ಕೋವಿಡ್ 19 ಸೋಂಕಿಗೆ ಒಳಗಾಗುತ್ತೇವೆ. ನಮ್ಮದು ವಾಣಿಜ್ಯ ಉದ್ದೇಶದ ಸಾರಿಗೆ ವ್ಯವಸ್ಥೆ. ನಾವು ಸರಕು ಮತ್ತು ಜನರನ್ನು ಸಾಗಿಸುತ್ತೇವೆ. ಹೀಗೆ ದಿನಂಪ್ರತಿ ಒಂದು ಸಾವಿರ ಕೋವಿಡ್ 19 ಸೋಂಕು ಪ್ರಕರಣ ವರದಿಯಾಗುತ್ತಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ದಾರೆ.
ರೈಲ್ವೆ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿಯೇ ಅತೀ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇಲಾಖೆಯಾಗಿದ್ದು, ಅಂದಾಜು 13 ಲಕ್ಷ ಉದ್ಯೋಗಿಗಳು ಇರುವುದಾಗಿ ವಿವರಿಸಿದೆ. ನಮ್ಮಲ್ಲಿ ಆಸ್ಪತ್ರೆಗಳಿವೆ, ನಾವು ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ, ರೈಲ್ವೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಸಿದ್ದಪಡಿಸುತ್ತಿದ್ದೇವೆ.

ಇದನ್ನೂ ಓದಿ : Sanjeevani App ಲಾಂಚ್ ಮಾಡಿದ Snapdeal ; Covid 19 ರೋಗಿಗಳಿಗೆ ಇಲ್ಲಿ ಸುಲಭವಾಗಿ ಸಿಗಲಿದೆ ಪ್ಲಾಸ್ಮಾ

ಈ ನಿಟ್ಟಿನಲ್ಲಿ ನಾವು ನಮ್ಮ ಸಿಬಂದಿಗಳ ಸುರಕ್ಷತೆ ಬಗ್ಗೆ ಒತ್ತು ನೀಡುತ್ತಿದ್ದೇವೆ ಎಂದು ಹೇಳಿದರು. ಆದರೂ ಕಳೆದ ವರ್ಷ ಮಾರ್ಚ್ ನಿಂದ ಈವರೆಗೆ ಕೋವಿಡ್(Covid-19) ಸೋಂಕಿನಿಂದ 1,952 ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Good News: ವ್ಯಾಕ್ಸಿನ್ ಹಾಕಿಸಿಕೊಂಡ್ರಾ? ಇಲ್ಲ ಎಂದಾದರೆ ಮೊದಲು ಈ ಮಾಹಿತಿ ತಿಳಿದುಕೊಂಡು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News