Indian Railway Recruitment 2021: 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ

Indian Railway Recruitment 2021: ಈ ಲಿಂಕ್ ಮೂಲಕ ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು.

Written by - Yashaswini V | Last Updated : Jan 9, 2021, 11:50 AM IST
  • ನೈಋತ್ಯ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನ
  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9 ಜನವರಿ 2021
Indian Railway Recruitment 2021: 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ title=
Indian Railway Recruitment 2021

Indian Railway Recruitment 2021: ನೈಋತ್ಯ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು 1004 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಇಂದು ಅಂದರೆ ಜನವರಿ 9 ಕೊನೆ ದಿನವಾಗಿದೆ. ಈ ಹುದ್ದೆಗಳಿಗೆ ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು (Indian Railway Recruitment 2021) ಶೀಘ್ರದಲ್ಲೇ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್‌ಆರ್‌ಸಿ ಹುಬ್ಬಳ್ಳಿಯ (rrchubli.in) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 

ನೈಋತ್ಯ ರೈಲ್ವೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ (Maharashtra) ಮತ್ತು ಗೋವಾ, ಕರ್ನಾಟಕ ಮತ್ತು ಪಕ್ಕದ ಜಿಲ್ಲೆಗಳಲ್ಲಿನ ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದು. ಈ ಪ್ರದೇಶಗಳ ನಿವಾಸಿಗಳಿಗೆ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಇದಲ್ಲದೆ, ಅಭ್ಯರ್ಥಿಗಳು ಈ ಲಿಂಕ್ https://jobs.rrchubli.in/ActApprentice2020-21/ ಅನ್ನು ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಈ ಲಿಂಕ್ https://www.rrchubli.in/SWR%20-%20Act%20App ಮೂಲಕ ನೀವು ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಭಾರತೀಯ ರೈಲ್ವೆ ನೇಮಕಾತಿ 2021 ರ ಪ್ರಮುಖ ದಿನಾಂಕಗಳು :

  • ಅರ್ಜಿಯ ಆರಂಭಿಕ ದಿನಾಂಕ: ಡಿಸೆಂಬರ್ 10, 2020
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 9 ಜನವರಿ 2021

ಇದನ್ನೂ ಓದಿ : Good News: ಟಿಕೆಟ್ ರದ್ದತಿ Refund ನಿಯಮದಲ್ಲಿ ಬದಲಾವಣೆ

ಭಾರತೀಯ ರೈಲ್ವೆ ನೇಮಕಾತಿಗೆ ಅರ್ಹತಾ ಮಾನದಂಡ 2021 :
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಅಥವಾ ಅದರ ಸಮಾನ (10 + 2 ಪರೀಕ್ಷಾ ವ್ಯವಸ್ಥೆಯೊಂದಿಗೆ) ಮತ್ತು  NCVT / SCVT ನೀಡುವ ಅಧಿಸೂಚಿತ ವ್ಯಾಪಾರದಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು.  

ಭಾರತೀಯ ರೈಲ್ವೆ (Indian Railways) ನೇಮಕಾತಿ 2021 ರ ವಯಸ್ಸಿನ ಮಿತಿ :
ಅಭ್ಯರ್ಥಿಯ ವಯಸ್ಸಿನ ಮಿತಿ 15 ರಿಂದ 24 ವರ್ಷದೊಳಗಿರಬೇಕು.

ಭಾರತೀಯ ರೈಲ್ವೆ ನೇಮಕಾತಿ 2021 ರ ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳ ಆಯ್ಕೆ ಅರ್ಹತಾ ಪಟ್ಟಿಯನ್ನು ಆಧರಿಸಿರುತ್ತದೆ. ಅಪ್ರೆಂಟಿಸ್‌ಶಿಪ್ ಮಾಡಬೇಕಾದ ವ್ಯಾಪಾರದಲ್ಲಿ ಕನಿಷ್ಠ 50 ಪ್ರತಿಶತ + ಐಟಿಐ (ITI) ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್‌ನಲ್ಲಿನ ಶೇಕಡಾವಾರು ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.

ಇದನ್ನೂ ಓದಿ : Indian Railways: ತನ್ನ ಯಾತ್ರಿಗಳಿಗೆ ಮತ್ತೊಂದು ಉಡುಗೊರೆ ನೀಡಿದ ಭಾರತೀಯ ರೇಲ್ವೆ

ಭಾರತೀಯ ರೈಲ್ವೆ ನೇಮಕಾತಿ 2021 ಗೆ ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 / - ರೂ. ಆನ್‌ಲೈನ್ ಮೋಡ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News