ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ 370 ನೇ ವಿಧಿಯನ್ನು ಭಾರತ ಸರ್ಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಈಗ ಮುಂಜಾಗ್ರತಾ ಕ್ರಮವಾಗಿ ಭಾರತೀಯ ನೌಕಾಪಡೆ ತನ್ನ ಎಲ್ಲಾ ನೆಲೆಗಳು ಮತ್ತು ಯುದ್ಧನೌಕೆಗಳನ್ನು ಹೆಚ್ಚಿನ ಎಚ್ಚರಿಕೆಗೆ ಒಳಪಡಿಸಿದೆ ಎನ್ನಲಾಗಿದೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಯಾವುದೇ ಸಂದರ್ಭದಲ್ಲಿ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆಯಿಂದಾಗಿ ಭಾರತ ಸರ್ಕಾರ ಜಾಗರೂಕತೆ ವಹಿಸುತ್ತಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಈಗ ಪೂರ್ವ ಮತ್ತು ಪಶ್ಚಿಮ ಸಮುದ್ರ ತೀರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದಲ್ಲದೆ, ಅಧಿಕಾರಿಗಳು ನಿರ್ಣಾಯಕ ಹಂತಗಳಲ್ಲಿ ಮತ್ತು ಕರಾವಳಿಯ ರಾಡಾರ್ ಮೂಲಕ ಕಣ್ಗಾವಲು ಇಡುತ್ತಿದ್ದಾರೆ.
ಇತ್ತೀಚೆಗೆ ಭಯೋತ್ಪಾದಕ ಗುಂಪಿನ ಜೈಶ್-ಎ-ಮೊಹಮ್ಮದ್ ಮಸೂದ್ ಅಜಗರ್ ಅವರ ಸಹೋದರ ರೌಫ್ ಅಜ್ಘರ್ ಅವರಂತಹ ಭಯೋತ್ಪಾದಕ ಗುಂಪುಗಳನ್ನು ಪಿಒಕೆಗೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಗುಪ್ತಚರ ವರದಿ ಮಾಡಿದೆ. ಈ ಹಿನ್ನಲೆಯಲ್ಲಿ ಈಗ 20 ಮೀಟರ್ಗಿಂತ ಚಿಕ್ಕದಾದ ದೋಣಿಗಳಿಗೆ 'ಸ್ನೇಹಿತ ಅಥವಾ ವೈರಿ' ವ್ಯವಸ್ಥೆಯಲ್ಲಿ ಹೊಂದಿಕೊಳ್ಳಲು ನೌಕಾಪಡೆ ಸರ್ಕಾರವನ್ನು ಕೇಳಿದೆ ಎಂದು ವರದಿ ತಿಳಿಸಿದೆ.
26/11 ಭಯೋತ್ಪಾದಕ ದಾಳಿಯ ಸಮಯದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಭಾರತೀಯ ದೋಣಿಯನ್ನು ಮಧ್ಯ ಸಮುದ್ರವನ್ನು ಅಪಹರಿಸಿ ಭಾರತೀಯ ತೀರವನ್ನು ತಲುಪಿದ್ದರು.ಈ ಹಿನ್ನಲೆಯಲ್ಲಿ ಈಗ ಭಾರತೀಯ ನೌಕಾಪಡೆ ಸಮುದ್ರ ತೀರದುದ್ದಕ್ಕೂ ನಿಗಾವಹಿಸಿದೆ.