ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳಿಗೆ ನೇಮಕಾತಿ..!10+2 ಪಾಸ್ ಆಗಿದ್ದರೆ ಸುವರ್ಣಾವಕಾಶ

ಭಾರತೀಯ ನೌಕಾಸೇನೆ ಅರ್ಟಿಫಿಶಿಯಲ್ ಅಪ್ರೆಂಟಿಸ್  ಮತ್ತು ಸಿನಿಯರ್ ಸೆಕೆಂಡರಿ ರಿಕ್ರೂಟರ್ಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.  ಯೋಗ್ಯ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Written by - Ranjitha R K | Last Updated : Apr 26, 2021, 11:40 AM IST
  • ನೌಕಾಸೇನೆ ಅರ್ಟಿಫಿಶಿಯಲ್ ಅಪ್ರೆಂಟಿಸ್ ಮತ್ತು ಸಿನಿಯರ್ ಸೆಕೆಂಡರಿ ರಿಕ್ರೂಟರ್ಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.
  • 2500 ಹುದ್ದೆಗಳಿಗೆ ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು.
  • ನಿಮಗೆ ಆಸಕ್ತಿ ಇದ್ದರೆ ಈ ವರದಿಯಲ್ಲಿ ನೇಮಕಾತಿಯ ಎಲ್ಲಾ ಮಾಹಿತಿ ಇದೆ
ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳಿಗೆ ನೇಮಕಾತಿ..!10+2 ಪಾಸ್ ಆಗಿದ್ದರೆ ಸುವರ್ಣಾವಕಾಶ title=
ನೌಕಾಪಡೆ ಸೇರಲು ಸುವರ್ಣಾವಕಾಶ (file photo)

ನವದೆಹಲಿ : ಭಾರತೀಯ ನೌಕಾಸೇನೆ ಅರ್ಟಿಫಿಶಿಯಲ್ ಅಪ್ರೆಂಟಿಸ್ (AA) ಮತ್ತು ಸಿನಿಯರ್ ಸೆಕೆಂಡರಿ ರಿಕ್ರೂಟರ್ಸ್ (SSR) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.  ಯೋಗ್ಯ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತಿಯುಳ್ಳ ಅಭ್ಯರ್ಥಿಗಳು ನೌಕಾಸೇನೆಯ ಅಧಿಕೃತ ವೆಬ್ ಸೈಟ್ joinindiannavy.gov.in ವಿಸಿಟ್ ಮಾಡಿ  ಅಪ್ಲೈ ಮಾಡಬಹುದು.  

ಪ್ರಮುಖ ದಿನಗಳು :
1. ಅರ್ಜಿ ಸಲ್ಲಿಕೆ ಆರಂಭದ ದಿನ 26,  ಏಪ್ರಿಲ್ 2021 (ಇಂದಿನಿಂದಲೇ ಆರಂಭ)
2. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 30 ಏಪ್ರಿಲ್ 2021

ಇದನ್ನೂ ಓದಿ : ಪ್ರಯಾಣಿಕರಿಗೆ ತೊಂದರೆಯಾಗದಂತೆ ರೈಲ್ವೆ ಭರ್ಜರಿ ತಯಾರಿ : 2 ತಿಂಗಳವರೆಗಿನ ಪ್ಲಾನ್ ರೆಡಿ

ಖಾಲಿ ಇರುವ ಹುದ್ದೆಗಳ ಸಂಖ್ಯೆ:
1. ಅರ್ಟಿಫಿಶಿಯಲ್ ಅಪ್ರೆಂಟಿಸ್ 500 ಹುದ್ದೆ
2. ಸೀನಿಯರ್ ಸೆಕೆಂಡರಿ ರಿಕ್ರೂಟರ್ಸ್ 2000 ಹುದ್ದೆ

ಅರ್ಹತೆಗಳು:
ಅರ್ಟಿಫಿಶಿಯಲ್ ಅಪ್ರೆಂಟಿಸ್  ಹುದ್ದೆಗಳಿಗೆ ವಿದ್ಯಾರ್ಹತೆಗಳು: 
ಅಭ್ಯರ್ಥಿಯು ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಕೆಮೆಸ್ಟ್ರಿ/ಜೀವ ವಿಜ್ಞಾನ/ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಶೇ. 60 ಕ್ಕಿಂತಲೂ ಅಧಿಕ ಅಂಕಗಳೊಂದಿಗೆ 10+2 ಪರೀಕ್ಷೆಯನ್ನು ಪಾಸ್ ಮಾಡಿರಬೇಕು. 

ಎಸ್ ಎಸ್ ಆರ್ (SSR) ಹುದ್ದೆಗಳಿಗೆ ವಿದ್ಯಾರ್ಹತೆ : ಅಭ್ಯರ್ಥಿಯು ಗಣಿತ (Maths) ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಕೆಮೆಸ್ಟ್ರಿ/ಜೀವ ವಿಜ್ಞಾನ/ಕಂಪ್ಯೂಟರ್ ವಿಜ್ಞಾನ (Computer Science) ವಿಷಯದಲ್ಲಿ ಶೇ. 60 ಕ್ಕಿಂತಲೂ ಅಧಿಕ ಅಂಕಗಳೊಂದಿಗೆ 10+2 ಪರೀಕ್ಷೆಯನ್ನು ಪಾಸ್ ಮಾಡಿರಬೇಕು. 

ಇದನ್ನೂ ಓದಿ : ಹೀಗೆ ಮಾಡಿ ನೋಡಿ, ಮೊಬೈಲಿನಲ್ಲಿ ನೆಟ್ ಸ್ಪೀಡ್ ಹೆಚ್ಚಾಗುತ್ತದೆ

ವಯೋಮಿತಿ : 
ಅಭ್ಯರ್ಥಿಯು 1, ಫೆಬ್ರವರಿ 2001 ಮತ್ತು 31 ಜುಲೈ 2004ರ ನಡುವೆ ಜನಿಸಿರಬೇಕು. 

ಆಯ್ಕೆ ಪ್ರಕ್ರಿಯೆ:
ಹತ್ತು ಸಾವಿರ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Exam) ಹಾಗೂ ಪಿಎಫ್ ಟಿ ಗಾಗಿ ಕರೆಯಲಾಗುವುದು. 10+2 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ  ಶೇಕಡಾವಾರು ಗಣಿತದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ (Short list) ಮಾಡಲಾಗುವುದು.  ಬೇರೆ ಬೇರೆ ರಾಜ್ಯಗಳಲ್ಲಿ ಕಟ್ ಆಪ್ ಮಾರ್ಕ್ ಬೇರೆ ಬೇರೆ ಆಗಿರುತ್ತದೆ.  

ಇದನ್ನೂ ಓದಿ : Mobile ATM Van: ಕರೋನಾ ಯುಗದಲ್ಲಿ ಈ ಬ್ಯಾಂಕಿನ ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಲಿದೆ ಮೊಬೈಲ್ ಎಟಿಎಂ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News