ಹಿಮ ಚಂಡಮಾರುತದಲ್ಲಿ ನಾಪತ್ತೆಯಾದ ಸೇನೆಯ ಗಸ್ತು ತಂಡ , ಮುಂದುವರೆದಿದೆ ಶೋಧ ಕಾರ್ಯಾಚರಣೆ

ಅರುಣಾಚಲ ಪ್ರದೇಶದಲ್ಲಿ ಹಿಮ ಚಂಡಮಾರುತದ  ನಂತರ ಭಾರತೀಯ ಸೇನೆಯ  ಗಸ್ತು ತಂಡ ನಾಪತ್ತೆಯಾಗಿದೆ.

Written by - Ranjitha R K | Last Updated : Feb 7, 2022, 04:03 PM IST
  • ಸೇನಾ ಘಟಕ ನಾಪತ್ತೆ
  • ಯೋಧರಿಗಾಗಿ ಮುಂದುವರಿದಿದೆ ಶೋಧ
  • ಹಿಮ ಚಂಡಮಾರುತದಲ್ಲಿ ಸಿಕ್ಕಿಬಿದ್ದಿರುವ ತಂಡ
ಹಿಮ ಚಂಡಮಾರುತದಲ್ಲಿ ನಾಪತ್ತೆಯಾದ ಸೇನೆಯ ಗಸ್ತು ತಂಡ ,  ಮುಂದುವರೆದಿದೆ ಶೋಧ ಕಾರ್ಯಾಚರಣೆ title=
ಸೇನಾ ಘಟಕ ನಾಪತ್ತೆ (photo zee news)

ನವದೆಹಲಿ : ಅರುಣಾಚಲ ಪ್ರದೇಶದಲ್ಲಿ ಹಿಮ ಚಂಡಮಾರುತದ (Snow Storm) ನಂತರ ಭಾರತೀಯ ಸೇನೆಯ (Indian Army) ಗಸ್ತು ತಂಡ ನಾಪತ್ತೆಯಾಗಿದೆ (Patrolling team missing). ಫೆಬ್ರವರಿ 6 ರಿಂದ ಈ ಘಟಕವು ಕಣ್ಮರೆಯಾಗಿದೆ ಎನ್ನಲಾಗಿದೆ. ಈ ತಂಡದಲ್ಲಿ ಕರ್ತವ್ಯ ನಿರ್ವಹಿಸುತಿದ್ದ  7 ಸೈನಿಕರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ.

ಮುಂದುವರಿದಿದೆ  ಶೋಧ  ಕಾರ್ಯ :
ಭಾರತೀಯ ಸೇನೆಯ (Indian Army Patrolling team missing) ಗಸ್ತು ತಂಡದೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗದಿದ್ದಾಗ, ತ್ವರಿತ ಪ್ರತಿಕ್ರಿಯೆಗಾಗಿ ತಕ್ಷಣ ತಜ್ಞರ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಆ ತಂಡದಲ್ಲಿ ಭಾಗಿಯಾಗಿರುವ ತಜ್ಞರು, ಕಾಣೆಯಾದ ತಂಡದ ಸದಸ್ಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ (Indian Army). 

ಇದನ್ನೂ ಓದಿ : ಕಾಶ್ಮೀರದ ಕುರಿತು ಪಾಕ್ ಡೀಲರ್‌ನ ವಿವಾದಾತ್ಮಕ ಪೋಸ್ಟ್‌: 'ಭಾರತ ನಮ್ಮ ಎರಡನೇ ಮನೆ' ಎಂದ Hyundai

ತವಾಂಗ್ ಮತ್ತು ಬೊಮ್ಡಿಲಾದಂತಹ ಎತ್ತರದ ಪ್ರದೇಶಗಳಲ್ಲಿ  ಪ್ರತಿ ವರ್ಷ ಹಿಮಪಾತವಾಗುತ್ತವೆ (Snow fall). ಸೇನೆಯ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದಾರೆ. ದ್ದಾರೆ. ಈ ಬಾರಿ 34 ವರ್ಷಗಳ ನಂತರ ಡೇರಿಯಾ ಬೆಟ್ಟದಲ್ಲಿ ಹಿಮಪಾತವಾಗಿದೆ. ಈ ಪ್ರದೇಶದಲ್ಲಿ ಕೊನೆಯ ಬಾರಿಗೆ ಹಿಮಪಾತವಾಗಿದ್ದು 1988 ರಲ್ಲಿ. ಭಾನುವಾರದ ಚಂಡಮಾರುತದ ನಂತರ, ಕಣ್ಮರೆಯಾದ ಯೋಧರಿಗಾಗಿ (Soldiers)ಶೋಧ ಕಾರ್ಯ ನಡೆಯುತ್ತಿದೆ. 

ಇದನ್ನೂ ಓದಿ : ICSE, ISC Result 2022: ಐಸಿಎಸ್ಇ ಹಾಗೂ ಐಎಸ್ ಸಿ ಸೆಮಿಸ್ಟರ್ 1 ಫಲಿತಾಂಶ ಪ್ರಕಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News