ಬಾಗ್‌ಪತ್‌ನಲ್ಲಿ ವಾಯುಪಡೆ ವಿಮಾನ ಪತನ

ಸಮಯ ಪ್ರಜ್ಞೆಯಿಂದ ಪೈಲಟ್‌ಗಳಿಬ್ಬರು ಪಾರು.

Last Updated : Oct 5, 2018, 11:22 AM IST
ಬಾಗ್‌ಪತ್‌ನಲ್ಲಿ ವಾಯುಪಡೆ  ವಿಮಾನ  ಪತನ title=

ಬಾಗ್‌ಪತ್‌: ಉತ್ತರಪ್ರದೇಶದ ಬಾಗ್‌ಪತ್‌ನಲ್ಲಿ ವಾಯುಪಡೆ  ವಿಮಾನ ಪತನಗೊಂಡಿದ್ದು, ಸಮಯ ಪ್ರಜ್ಞೆಯಿಂದ ಪೈಲಟ್‌ಗಳಿಬ್ಬರು ಪಾರಾಗಿದ್ದಾರೆ. ವಾಯುಸೇನಾ ದಿವಸ್ ಆಚರಣೆಗಾಗಿ ತಯಾರಿನಡೆಸುತ್ತಿದ್ದ ವೇಳೆ ವಾಯುಸೇನೆಯ ಸಣ್ಣ ವಿಮಾನ ಎಂಎಲ್ 130 ಅಪಘಾತಕ್ಕೀಡಾಗಿದೆ. 

ಈ ಘಟನೆ ಬಾಂಗ್ಪಾಟ್, ಬಿನಾಲಿನಲ್ಲಿ ರಾಂಚಡ್ನ ಅರಣ್ಯದಲ್ಲಿ ನಡೆಯಿತು. ವಿಮಾನ ಪತನವಾಗುವುದು ಖಚಿತವಾಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಪೈಲಟ್‌ಗಳು ಜನಸಂದಣಿಯಿರುವ ಪ್ರದೇಶದತ್ತ ತೆರಳದಂತೆ ಮಾಡಿ ಖಾಲಿ ಪ್ರದೇಶತ್ತ ತಿರುಗಿಸಿ ಕೆಳಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆಡಳಿತವು ಸ್ಥಳದಲ್ಲಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿತು.

ಈ ಅಪಘಾತವು ಇಂದು ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ಸಂಭವಿಸಿದ್ದು, ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್ ಗಳು ಸುರಕ್ಷಿತರಾಗಿದ್ದಾರೆ ಎಂದು ಇಲಾಖೆ ಘೋಷಿಸಿದೆ. ಪೊಲೀಸರ ತಂಡ ಸ್ಥಳವನ್ನು ತಲುಪಿದೆ. ಅಪಘಾತಕ್ಕೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.
 

Trending News