ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳಿಂದ ನೀವು ತೊಂದರೆಗೀಡಾಗಿದ್ದರೆ, ಅದರ ಬಗ್ಗೆ ಚಿಂತಿಸುವುದನ್ನು ಇದೀಗ ನಿಲ್ಲಿಸಿ. ದೇಶದ ಓಟು ಮೂರು ಔಷಧಿ ಕಂಪನಿಗಳು ಕರೋನಾ ವೈರಸ್ಗೆ ಲಸಿಕೆಗಳನ್ನು ಸಿದ್ಧಪಡಿಸಿವೆ.
ಅದರಲೂ ವಿಶೇಷ ಎಂದರೆ ಈ ಮೂರೂ ಲಸಿಕೆಗಳಿಗೆ ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮೋದನೆ ನೀಡಲಾಗಿದೆ. ಸಮರೋಪಾಧಿಯಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಲಸಿಕೆಯನ್ನು ತಯಾರಿಸಲು ಕೇಂದ್ರ ಸರ್ಕಾರ ಈ ಮೂರು ಕಂಪನಿಗಳಿಗೆ ಹೇಳಿತ್ತು.
ಈ ಕುರಿತು ಝೀ ನ್ಯೂಸ್ ಡಾಟ್ ಕಾಮ್ ಗೆ ಹೇಳಿಕೆ ನೀಡಿರುವ ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ (DGCI) ಡಾ.ವಿಜಿ ಸೋಮಾನಿ, ಕಳೆದ ವಾರವಷ್ಟೇ ದೇಶದ ಮೂರು ಕಂಪನಿಗಳಿಗೆ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುವ ಲಸಿಕೆಯೇ ಕ್ಲಿನಿಕಲ್ ಟ್ರಯಲ್ ಗೆ ಮಂಜೂರಾತಿ ನೀಡಿದೆ. ಅಷ್ಟೇ ಅಲ್ಲ ಲಸಿಕೆಗಳನ್ನು ಫಾಸ್ಟ್ ಟ್ರ್ಯಾಕ್ ಯೋಜನೆಯ ಅಡಿ ಸಿದ್ಧಪಡಿಸಲು ಸೂಚಿಸಲಾಗಿದ್ದು, ಕೊರೊನಾ ಸೊಂಕಿತರನ್ನು ಆದಷ್ಟು ರಕ್ಷಿಸಲು ಇದು ನೆರವಾಗಲಿ ಎಂದು ಹೇಳಲಾಗಿತ್ತು.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಭಾರತೀಯ ಕಂಪನಿಗಲಾಗಿರುವ ಗ್ಲೆನ್ ಮಾರ್ಕ್, ಕ್ಯಾಡಿಲಾ ಹೆಲ್ತ್ ಕೇರ್ ಹಾಗೋ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈ ಮೂರು ಕಂಪನಿಗಳು ಕೊರೊನಾ ವಿರುದ್ಧ ಹೋರಾಡುವ ಲಸಿಕೆಗಳನ್ನು ಈಗಾಗಲೇ ಸಿದ್ಧಪಡಿಸಿವೆ ಎಂದಿದ್ದಾರೆ. ಅಷ್ಟೇ ಅಲ್ಲ ಈ ಮೂರು ಕಂಪನಿಗಳ ಲಸಿಕೆಗಳು ಆರಂಭಿಕ ಹಂತದಲ್ಲಿ ಕೊರೊನಾ ವೈರಸ್ ವಿರುದ್ಧ ತುಂಬಾ ಪ್ರಭಾವಿ ಸಾಬೀತಾಗಿವೆ ಎಂದಿದ್ದಾರೆ. ಸದ್ಯ ದೇಶಾದ್ಯಂತ ಆಸ್ಪತ್ರೆಗಳನ್ನು ಗೊತ್ತುಪಡಿಸಿ ಈ ಲಸಿಕೆಗಳನ್ನು ರೋಗಿಗಳ ಮೇಲೆ ಪ್ರಯೋಗಿಸಿ ಪರಿಣಾಮಗಳನ್ನು ಕಂಡುಕೊಳ್ಳಲು ಸೂಚಿಸಲಾಗಿದೆ ಎಂದಿದ್ದಾರೆ. ಸುರಕ್ಷತೆಯ ಎಲ್ಲ ರೀತಿಯ ತನಿಖೆಗಳಲ್ಲಿ ಸಫಲವಾಗುವ ಕಂಪನಿಗೆ ದೇಶಾದ್ಯಂತ ಲಸಿಕೆ ತಯಾರಿಸಲು ಅನುಮತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಸೀರಮ್ (ಪುಣೆ) ಆಕ್ಸ್ಫರ್ಡ್ ವಿವಿಯಲ್ಲಿ ತಯಾರಿಸಲಾಗಿರುವ ಲಸಿಕೆ ChAdOx1 ಅನ್ನು ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲಿದೆ. ಇದನ್ನು ಹೊರತುಪಡಿಸಿ ಗ್ಲೆನ್ ಮಾರ್ಕ್, ಫಾವಿಪಿರಾವಿರ್ (Favipiravir) ಹೆಸರಿನ ಲಸಿಕೆ ತಯಾರಿಸಿದೆ. ಕ್ಯಾಡಿಲಾ ಹೆಲ್ತ್ ಕೇರ್ ಈ ವೈರಸ್ ಅನ್ನು ಮಟ್ಟಹಾಕಲು ALFA-2ಬಿ ಹೆಸರಿನ ಲಸಿಕೆ ಸಿದ್ಧಪಡಿಸಿದೆ. ಈ ವಾರದಲ್ಲಿ ಈ ಮೂರು ಲಸಿಕೆಗಳ ಟ್ರಯಲ್ ಆರಂಭಗೊಳ್ಳುವ ನಿರೀಕ್ಷೆ ಇದೆ.