ಭಾರತವನ್ನು ಜಗತ್ತಿನ ನಿರಾಶ್ರಿತರ ರಾಜಧಾನಿಯನ್ನಾಗಿ ಮಾಡಲು ಸಾಧ್ಯವಿಲ್ಲ- ಕೇಂದ್ರ ಸರ್ಕಾರ

ಭಾರತವನ್ನು ಜಗತ್ತಿನ ನಿರಾಶ್ರಿತರ ರಾಜಧಾನಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಶುಕ್ರವಾರದ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ರಾಷ್ಟ್ರೀಯ ನಾಗರಿಕ ನೋಂದಣಿ ವಿಸ್ತರಿಸುವ ವಿಚಾರವಾಗಿ ಮನವಿ ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ತಿಳಿಸಿದೆ.

Last Updated : Jul 19, 2019, 02:04 PM IST
ಭಾರತವನ್ನು ಜಗತ್ತಿನ ನಿರಾಶ್ರಿತರ ರಾಜಧಾನಿಯನ್ನಾಗಿ ಮಾಡಲು ಸಾಧ್ಯವಿಲ್ಲ- ಕೇಂದ್ರ ಸರ್ಕಾರ  title=

ನವದೆಹಲಿ: ಭಾರತವನ್ನು ಜಗತ್ತಿನ ನಿರಾಶ್ರಿತರ ರಾಜಧಾನಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಶುಕ್ರವಾರದ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ರಾಷ್ಟ್ರೀಯ ನಾಗರಿಕ ನೋಂದಣಿ ವಿಸ್ತರಿಸುವ ವಿಚಾರವಾಗಿ ಮನವಿ ಬಂದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ತಿಳಿಸಿದೆ.

ಕೇಂದ್ರ ಸರ್ಕಾರ ಹಾಗೂ ಅಸ್ಸಾಂ ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ಮತ್ತು ಹಿರಿಯ ಸುಪ್ರೀಂಕೋರ್ಟ್ ವಕೀಲ ತುಷಾರ್ ಮೆಹ್ತಾ, ಅವರು ಲಕ್ಷಾಂತರ ಜನರನ್ನು ಅಸ್ಸಾಂನ ರಾಷ್ಟ್ರೀಯ ನಾಗರಿಕ ನೋಂದಣಿ ಕರಡು ಪಟ್ಟಿಯಲ್ಲಿ ಯಲ್ಲಿ ತಪ್ಪಾಗಿ ಸೇರಿಸಲಾಗಿದೆ ಎಂದು ಸುಪ್ರೀಂಗೆ ತಿಳಿಸಿದರು.

ಲಕ್ಷಾಂತರ ಅಕ್ರಮ ವಲಸೆಗಾರರನ್ನು ಸ್ಥಳೀಯ ಅಧಿಕಾರಿಗಳ ಸಹಕಾರದಿಂದಾಗಿ ಎನ್ ಆರ್ ಸಿ ಪಟ್ಟಿಯಲ್ಲಿ ಸೇರಿಸಿರುವ ಸಾಧ್ಯತೆ ಇದೆ. ಆದ್ದರಿಂದ ಅಕ್ರಮ ವಲಸೆಗಾರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದ್ದರಿಂದ ಭಾರತವನ್ನು ಜಗತ್ತಿನ ನಿರಾಶ್ರಿತರ ರಾಜಧಾನಿಯನ್ನಾಗಿ ಮಾಡಲು ಸಾಧ್ಯವಿಲ್ಲ' ಎಂದು ತುಷಾರ್ ಮೆಹ್ತಾ ತಿಳಿಸಿದರು.  

ಈಗ ಈ ವಿಚಾರವಾಗಿ ಮುಂದಿನ ವಿಚಾರಣೆ ಜುಲೈ 23 ಕ್ಕೆ ನಡೆಯಲಿದೆ ಎನ್ನಲಾಗಿದೆ. ಅಸ್ಸಾಂದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ಸುಪ್ರೀಂ ಕೋರ್ಟ್ ನ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ. ಈಗ ಪಟ್ಟಿ ಇದೆ ಜುಲೈ 31 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

 

Trending News