ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ವರದಿಯ ಪ್ರಕಾರ, ರಷ್ಯಾ ಭಾರತಕ್ಕೆ ಜಗತ್ತಿನ ಅತಿದೊಡ್ಡ ಆಯುಧ ಪೂರೈಕೆದಾರನಾಗಿ ಮುಂದುವರಿದಿದ್ದು, ಭಾರತದ ಆಮದಿನ 45% ಆಯುಧಗಳನ್ನು ಪೂರೈಸಿದೆ. ಭಾರತ ಫ್ರಾನ್ಸ್‌ನಿಂದ 29% ಮತ್ತು ಅಮೆರಿಕಾದಿಂದ 11% ಆಯುಧಗಳನ್ನು ಆಮದು ಮಾಡಿಕೊಂಡಿದೆ. ಇವುಗಳನ್ನು ಹೊರತುಪಡಿಸಿ, ಭಾರತ ದಕ್ಷಿಣ ಕೊರಿಯಾ, ಇಸ್ರೇಲ್, ಹಾಗೂ ದಕ್ಷಿಣ ಆಫ್ರಿಕಾಗಳಿಂದ ಆಯುಧ ಆಮದು ಮಾಡಿಕೊಂಡಿದೆ.  

Written by - Girish Linganna | Edited by - Yashaswini V | Last Updated : Mar 14, 2023, 01:15 PM IST
  • ರಷ್ಯಾ ಭಾರತಕ್ಕೆ ಜಗತ್ತಿನ ಅತಿದೊಡ್ಡ ಆಯುಧ ಪೂರೈಕೆದಾರನಾಗಿ ಮುಂದುವರಿದಿದ್ದು, ಭಾರತದ ಆಮದಿನ 45% ಆಯುಧಗಳನ್ನು ಪೂರೈಸಿದೆ.
  • ಭಾರತ ಫ್ರಾನ್ಸ್‌ನಿಂದ 29% ಮತ್ತು ಅಮೆರಿಕಾದಿಂದ 11% ಆಯುಧಗಳನ್ನು ಆಮದು ಮಾಡಿಕೊಂಡಿದೆ.
  • ಇವುಗಳನ್ನು ಹೊರತುಪಡಿಸಿ, ಭಾರತ ದಕ್ಷಿಣ ಕೊರಿಯಾ, ಇಸ್ರೇಲ್, ಹಾಗೂ ದಕ್ಷಿಣ ಆಫ್ರಿಕಾಗಳಿಂದ ಆಯುಧ ಆಮದು ಮಾಡಿಕೊಂಡಿದೆ.
ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ title=

ನವದೆಹಲಿ: ಭಾರತ ಮತ್ತೊಮ್ಮೆ ಜಗತ್ತಿನ ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಭಾರತ ವಿವಿಧ ಮಿಲಿಟರಿ ಉಪಕರಣಗಳ ಜಾಗತಿಕ ಆಮದಿನ 11%ರಷ್ಟು ಆಮದು ಮಾಡಿಕೊಳ್ಳುತ್ತಿದೆ. ಸ್ವೀಡನ್ ಮೂಲದ ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪ್ರಿ) ಸೋಮವಾರ ಪ್ರಕಟಿಸಿದ ವರದಿಯ ಪ್ರಕಾರ, ಕತಾರ್, ಆಸ್ಟ್ರೇಲಿಯಾ, ಚೀನಾ ಹಾಗೂ ಸೌದಿ ಅರೇಬಿಯಾಗಳು ಜಾಗತಿಕ ಆಯುಧ ಆಮದಿನಲ್ಲಿ ನಾಲ್ಕನೇ ಸ್ಥಾನದಲ್ಲಿವೆ.

ಮೂರನೇ ಸ್ಥಾನದಲ್ಲಿ ರಷ್ಯಾ (16%), ಫ್ರಾನ್ಸ್ (11%) ಹಾಗೂ ಅಮೆರಿಕಾ (40%) ಗಳು ಜಾಗತಿಕ ಪಾಲು ಹೊಂದಿವೆ. ಸಿಪ್ರಿ ಬಿಡುಗಡೆಗೊಳಿಸಿದ ಈ ವರದಿ 2018-2022ರ ನಡುವಿನ ಐದು ವರ್ಷಗಳ ಅವಧಿಯದಾಗಿದ್ದು, 'ಟ್ರೆಂಡ್ಸ್ ಇನ್ ಇಂಟರ್‌ನ್ಯಾಷನಲ್ ಆರ್ಮ್ಸ್ ಟ್ರಾನ್ಸ್‌ಫರ್' ಎಂಬ ಹೆಸರಿನಲ್ಲಿ ಪ್ರಕಟವಾಗಿದೆ.

ಈ ವರದಿ 2013-2017, 2018-2022, ಹೀಗೆ ಐದು ವರ್ಷಗಳ ಅವಧಿಗಳನ್ನು ಹೋಲಿಸಿದ್ದು, ಭಾರತದ ಆಯುಧ ಆಮದಿನ ಜಾಗತಿಕ ಪಾಲಿನಲ್ಲಿ ಕಡಿತವಾಗಿದೆ ಎಂದು ಸೂಚಿಸಿತ್ತು. "ಈ ಕಡಿತದ ಹೊರತಾಗಿಯೂ, ಭಾರತ 2018-22ರ ಅವಧಿಯಲ್ಲಿ ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರವಾಗಿದ್ದು, ಈ ಅವಧಿಯಲ್ಲಿ ಜಾಗತಿಕ ಆಯುಧ ಆಮದಿನ 11% ಪಾಲು ಹೊಂದಿತ್ತು" ಎಂದು ವರದಿ ತಿಳಿಸಿದೆ.

ಇದನ್ನೂ ಓದಿ- China : ಅಮೆರಿಕಾದಿಂದ ನಿರ್ಬಂಧ ಹೇರಲ್ಪಟ್ಟ ಏರೋಸ್ಪೇಸ್ ತಜ್ಞ ಈಗ ಚೀನಾದ ನೂತನ ರಕ್ಷಣಾ ಮುಖ್ಯಸ್ಥ!

ಈ ವರದಿಯ ಪ್ರಕಾರ, ರಷ್ಯಾ ಭಾರತಕ್ಕೆ ಜಗತ್ತಿನ ಅತಿದೊಡ್ಡ ಆಯುಧ ಪೂರೈಕೆದಾರನಾಗಿ ಮುಂದುವರಿದಿದ್ದು, ಭಾರತದ ಆಮದಿನ 45% ಆಯುಧಗಳನ್ನು ಪೂರೈಸಿದೆ. ಭಾರತ ಫ್ರಾನ್ಸ್‌ನಿಂದ 29% ಮತ್ತು ಅಮೆರಿಕಾದಿಂದ 11% ಆಯುಧಗಳನ್ನು ಆಮದು ಮಾಡಿಕೊಂಡಿದೆ. ಇವುಗಳನ್ನು ಹೊರತುಪಡಿಸಿ, ಭಾರತ ದಕ್ಷಿಣ ಕೊರಿಯಾ, ಇಸ್ರೇಲ್, ಹಾಗೂ ದಕ್ಷಿಣ ಆಫ್ರಿಕಾಗಳಿಂದ ಆಯುಧ ಆಮದು ಮಾಡಿಕೊಂಡಿದೆ.

Import Of Arms: Source SIPRI 2023

Import Of Arms: Source SIPRI 2023

ಈ ವರದಿ ಐದು ವರ್ಷಗಳ ಎರಡು ಅವಧಿಯಲ್ಲಿ ಭಾರತೀಯ ಆಯುಧ ಮಾರುಕಟ್ಟೆಯಲ್ಲಿ ರಷ್ಯಾದ ಪಾಲನ್ನು ಹೋಲಿಸಿ ನೋಡಿದ್ದು, 2013-2017ರ ಅವಧಿಯಲ್ಲಿ ರಷ್ಯಾ ಭಾರತದ ಅತಿದೊಡ್ಡ ಆಯುಧ ಪೂರೈಕೆದಾರ ರಾಷ್ಟ್ರವಾಗಿತ್ತು. ಆದರೆ 2018-2022ರ ಅವಧಿಯಲ್ಲಿ ಈ ಆಮದು 64%ದಿಂದ 45%ಕ್ಕೆ ಇಳಿಕೆ ಕಂಡಿತು.

2022ರಲ್ಲಿ ಉಕ್ರೇನ್ ಜಗತ್ತಿನ ಮೂರನೇ ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರ:
ಸಿಪ್ರಿ ಆರ್ಮ್ಸ್ ಟ್ರಾನ್ಸ್‌ಫರ್ ಪ್ರೋಗ್ರಾಮ್‌ನ ಹಿರಿಯ ಸಂಶೋಧಕರಾದ ಪೀಟರ್ ಡಿ ವೇಜ಼್‌ಮ್ಯಾನ್ ಅವರ ಪ್ರಕಾರ, ಯುದ್ಧ ವಿಮಾನಗಳು ಮತ್ತು ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಉಕ್ರೇನಿಗೆ ಪೂರೈಸಿದರೆ, ಅದರಿಂದ ಯುದ್ಧದ ತೀವ್ರತೆ ಇನ್ನಷ್ಟು ಹೆಚ್ಚಾಗಬಹುದೆಂದು ನ್ಯಾಟೋ ಸದಸ್ಯ ರಾಷ್ಟ್ರಗಳು ಉಕ್ರೇನಿನ ಬೇಡಿಕೆಯನ್ನು 2022ರಲ್ಲಿ ತಿರಸ್ಕರಿಸಿವೆ. ಅದೇ ಅವಧಿಯಲ್ಲಿ, ನ್ಯಾಟೋ ರಾಷ್ಟ್ರಗಳು ಯುದ್ಧಪೀಡಿತ ಇತರ ರಾಷ್ಟ್ರಗಳಿಗೆ ಅಂತಹ ಆಯುಧಗಳನ್ನು ಪೂರೈಕೆ ಮಾಡಿದ್ದು, ವಿಶೇಷವಾಗಿ ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾಗೆ ರಫ್ತು ಮಾಡಿವೆ.

ರಷ್ಯಾ - ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ, ಹಲವು ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕಾ ಉಕ್ರೇನಿಗೆ ಅಪಾರ ಪ್ರಮಾಣದಲ್ಲಿ ಮಿಲಿಟರಿ ಸಹಾಯವನ್ನು ಒದಗಿಸಿದ್ದು, 2022ರಲ್ಲಿ ಭಾರತ ಮತ್ತು ಕತಾರ್‌ಗಳ ಬಳಿಕ ಉಕ್ರೇನ್ ಮೂರನೇ ಅತಿದೊಡ್ಡ ಆಯುಧ ಆಮದುದಾರ ರಾಷ್ಟ್ರವಾಗಿದೆ. 2018-2022ರ ಐದು ವರ್ಷಗಳ ಅವಧಿಯಲ್ಲಿ ಉಕ್ರೇನ್ 14ನೇ ಸ್ಥಾನದಲ್ಲಿದೆ. ಅಂದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಉಕ್ರೇನ್ ಜಾಗತಿಕ ಆಯುಧ ಆಮದಿನ 2% ಪಡೆದುಕೊಂಡಿದೆ. 1991-2021ರ ಅವಧಿಯಲ್ಲಿ ಉಕ್ರೇನ್ ಹಲವು ಪ್ರಮುಖ ಆಯುಧಗಳನ್ನು ಆಮದು ಮಾಡಿಕೊಂಡಿದೆ.

ಇದನ್ನೂ ಓದಿ- ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣ: ಅಂತಾರಾಷ್ಟ್ರೀಯ ಪರಿಣಾಮಗಳು ಮತ್ತು ಬದಲಾಗುವ ಜಾಗತಿಕ ಚಿತ್ರಣಗಳು

ರಷ್ಯಾ - ಭಾರತ:
ಸಿಪ್ರಿ ವರದಿಯ ಪ್ರಕಾರ, ರಷ್ಯಾ ಇಂದಿಗೂ ಭಾರತದ ಅತಿದೊಡ್ಡ ಆಯುಧ ಪೂರೈಕೆದಾರ ರಾಷ್ಟ್ರವಾಗಿದೆ. ಆದರೆ ಈಗ ಬೇರೆ ದೇಶಗಳೂ ಭಾರತಕ್ಕೆ ಆಯುಧ ಪೂರೈಸುತ್ತಿರುವುದರಿಂದ, ರಷ್ಯಾ ಈಗ ಸ್ಪರ್ಧೆ ಎದುರಿಸುತ್ತಿದೆ. ಅದರೊಡನೆ, ಭಾರತ ರಕ್ಷಣಾ ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನ ನಡೆಸುತ್ತಿದ್ದು, ಪ್ರಮುಖ ಆಯುಧ ಉಪಕರಣಗಳನ್ನು ತಂತ್ರಜ್ಞಾನ ವರ್ಗಾವಣೆಯ ಮೂಲಕ ದೇಶೀಯವಾಗಿ ಉತ್ಪಾದಿಸುವ ಪ್ರಯತ್ನ ನಡೆಸುತ್ತಿದೆ. ಅದರೊಡನೆ, ಈಗ ನಡೆಯುತ್ತಿರುವ ರಷ್ಯಾ - ಉಕ್ರೇನ್ ಯುದ್ಧ ರಷ್ಯಾದ ಆಯುಧ ರಫ್ತಿನ ಮೇಲೆ ಪರಿಣಾಮ ಬೀರಿದೆ.

ಭಾರತ - ಪಾಕಿಸ್ತಾನ - ಚೀನಾ
ಭಾರತ - ಚೀನಾಗಳ ಗಡಿಯಾದ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ಮತ್ತು ಭಾರತ ಪಾಕಿಸ್ತಾನದ ಗಡಿ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಗಳಲ್ಲಿ ನಡೆಯುತ್ತಿರುವ ಚಕಮಕಿಗಳ ಕಾರಣದಿಂದ ಭಾರತ ಹೆಚ್ಚಿನ ಆಯುಧ ಆಮದು ಮಾಡಿಕೊಳ್ಳುವಂತಾಗಿದೆ.

ಪಾಕಿಸ್ತಾನದ ಆಯುಧ ಆಮದು:
2013-2017 ಮತ್ತು 2018-2022ರ ಅವಧಿಯ ಮಧ್ಯ ಪಾಕಿಸ್ತಾನದ ಆಯುಧ ಆಮದು 14% ಹೆಚ್ಚಳ ಕಂಡಿದೆ. ಅಂದರೆ, ಪಾಕಿಸ್ತಾನ ಜಾಗತಿಕ ಆಯುಧ ಆಮದಿನಲ್ಲಿ 3.7% ಪಾಲು ಹೊಂದಿದೆ. 2018-2022ರ ಮಧ್ಯದಲ್ಲಿ ಚೀನಾ ಪಾಕಿಸ್ತಾನದ ಆಯುಧ ಆಮದಿನಲ್ಲಿ 77%ದಷ್ಟು ಪೂರೈಕೆ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News