ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ ಮೂರನೇ ದಿನವಾದ ಇಂದೂ ಸಹ ದಟ್ಟ ಹೊಗೆ ಆವರಿಸಿದೆ. ಅಲ್ಲದೆ ಇಲ್ಲಿನ ವಾಯುಗುಣ ಮಟ್ಟವು ಅಪಾಯಕಾರಿ ಹಂತವನ್ನು ತಲುಪಿದೆ.
Thick #smog seen at #Delhi's Dhaula Kuan area. pic.twitter.com/T33OlNVcqC
— ANI (@ANI) November 8, 2017
ಅಪಾಯಕಾರಿ ಮಾಲಿನ್ಯದ ಮಟ್ಟದಿಂದ ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಭಾರತೀಯ ವೈದ್ಯಕೀಯ ಸಂಘ (IMA) ಘೋಷಿಸಿರುವ ಹಿನ್ನೆಲೆಯಲ್ಲಿ, ಸೈಕ್ಲಿಂಗ್ ಮತ್ತು ಜಾಗಿಂಗ್ನಂತಹ ಹೊರಾಂಗಣ ದೈಹಿಕ ಚಟುವಟಿಕೆಗಳನ್ನು ತಪ್ಪಿಸಲು ತಜ್ಞರು ಸೂಚಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಲಯವು (ಎನ್ಜಿಟಿ) ಈ ಪರಿಸ್ಥಿತಿಯನ್ನು 'ತುರ್ತುಸ್ಥಿತಿ' ಎಂದು ಕರೆದಿದೆ.
ಈ ಮಧ್ಯೆ ದೆಹಲಿ ಸರ್ಕಾರವು ದೆಹಲಿಯಲ್ಲಿನ ಪ್ರಾಥಮಿಕ ಶಾಲಾ ಮಕ್ಕಳಿಗೆ ಬುಧವಾರ ಹಾಗೂ ಗಾಜಿಯಾಬಾದ್ ಪ್ರದೇಶದಲ್ಲಿರುವ ಶಾಲೆಗಳಿಗೆ ಬುಧವಾರ ಮತ್ತು ಗುರುವಾರ ಎರಡು ದಿನವೂ ರಜೆ ಘೋಷಿಸಲಾಗಿದೆ.