2020 ರ ಅರ್ಥಿಕ ಬಜೆಟ್ ಮಂಡನೆಗೆ ಕೇವಲ 15 ದಿನಗಳು ಮಾತ್ರ ಬಾಕಿ ಉಳಿದಿವೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯ ವೇಳೆ ಇಡೀ ದೇಶದ ಗಮನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲಿರಲಿದೆ. ಏಕೆಂದರೆ, ಈ ಬಾರಿ ಯಾರಾದರೂ ಬಜೆಟ್‌ನಿಂದ ಹೆಚ್ಚಿನದನ್ನು ನೀರಿಕ್ಷೆ ಹೊಂದಿದ್ದಾರೆ ಎಂದರೆ, ಅದು ನೌಕರರ ವರ್ಗವಾಗಿದೆ. ಆದಾಯ ತೆರಿಗೆ ವಿನಾಯಿತಿ ಬಗ್ಗೆ ಸರ್ಕಾರದ ಮೇಲೆ ಸಾಕಷ್ಟು ಒತ್ತಡವಿದೆ. ಅಷ್ಟೇ ಅಲ್ಲ ಅಭಿವೃದ್ಧಿ ದರ ವೇಗ ನೀಡುವ ಉದ್ದೇಶದಿಂದ, ಸರ್ಕಾರವು ತೆರಿಗೆ ಪಾವತಿದಾರರಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಉದ್ಯಮ ಕ್ಷೇತ್ರದಲ್ಲಿ ಕಾರ್ಪೋರೆಟ್ ತೆರಿಗೆಯಿಂದ ವಿನಾಯ್ತಿ ನೀಡಿರುವ ಕೇಂದ್ರ ಸರ್ಕಾರ ಇದೀಗ ವೈಯಕ್ತಿಯ ಆದಾಯ ತೆರಿಗೆ ಪಾವತಿದಾರರಿಗೆ ಮುಂಬರುವ ಬಜೆಟ್ ನಲ್ಲಿ ಪರಿಹಾರ ನೀಡುವ ಕುರಿತು ಚಿಂತನೆ ನಡೆಸುತ್ತಿದೆ. ಅಷ್ಟೇ ಅಲ್ಲ 80 ಸಿ ಅಡಿಯಲ್ಲಿ ಮಾಡಲಾಗುವ ಹೂಡಿಕೆಯ ಮೇಲೂ ಕೂಡ ಸರ್ಕಾರ ತೆರಿಗೆ ವಿನಾಯ್ತಿಯ ಗಡಿಯನ್ನು ಸಹ 2.5 ಲಕ್ಷ ರೂ.ವರೆಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ. ಜೊತೆಗೆ NSC ಅಡಿ ಮಾಡಲಾಗುವ 50ಸಾವಿರ ರೂ.ಗಳ ವರೆಗಿನ ಹೂಡಿಕೆಗೆ ತೆರಿಗೆ ವಿನಾಯ್ತಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವೇಳೆ PPF ವ್ಯಾಪ್ತಿ ಹೆಚ್ಚಳದ ಕುರಿತು ಕೂಡ ಚಿಂತನೆ ನಡೆಸಲಿದೆ.
ಸಂಬಳ ಪಡೆದು ಟ್ಯಾಕ್ಸ್ ನೀಡುವವರ ನಿರೀಕ್ಷೆಗಳೇನು?
- 80 ಸಿ ಅಡಿಯಲ್ಲಿ ವಿನಾಯಿತಿ ಮಿತಿ 2.5 ಲಕ್ಷ ರೂ.ಗೆ ವಿಸ್ತರಣೆ ಸಾಧ್ಯತೆ.
- ಪ್ರಸ್ತುತ, 80 ಸಿ ಅಡಿಯಲ್ಲಿ ಹೂಡಿಕೆಯ ವಿನಾಯಿತಿ ಮಿತಿ 1.5 ಲಕ್ಷ ರೂ. ಇದೆ.
- 50 ಸಾವಿರವರೆಗಿನ NSC ಹೂಡಿಕೆಗೂ ಕೂಡ 80ಸಿ ಅಡಿ ತೆರಿಗೆ ವಿನಾಯ್ತಿ ಸಾಧ್ಯತೆ..
- ಪಿಪಿಎಫ್ ಹೂಡಿಕೆ ಮಿತಿ 2.5 ಲಕ್ಷ ರೂ.ಗೆ ಹೆಚ್ಚಾಗುವ ಸಾಧ್ಯತೆ.
- ಪಿಪಿಎಫ್‌ನಲ್ಲಿ ಹೂಡಿಕೆಯ ಮೇಲಿನ ತೆರಿಗೆ ವಿನಾಯಿತಿ ಮಿತಿ 1.5 ಲಕ್ಷ ರೂ. ಆಗುವ ಸಾಧ್ಯತೆ
- ಎನ್‌ಪಿಎಸ್ ವಿನಾಯಿತಿ ಮಿತಿಯನ್ನು 50000 ರೂ.ಗಳಿಂದ 1 ಲಕ್ಷ ರೂ.ಗೆ ಏರಿಕೆಯಾಗುವ ಸಾಧ್ಯತೆ.
ತೆರಿಗೆ ನೀಡುವವರಿಗೆ ತೆರಿಗೆ ವಿನಾಯ್ತಿ ನೀಡುವುದು ಯಾಕೆ ಆವಶ್ಯಕ
- ಆರ್ಥಿಕ ಬಲವರ್ಧನೆಗೆ ಜನರ ಕೈಯಲ್ಲಿ ಹಣ ಬೇಕು.
- FY12 ರಲ್ಲಿ ಉಳಿತಾಯ ದರ ಶೇ.23.6ರಷ್ಟಿತ್ತು, ಆದರೆ FY18ರಲ್ಲಿ ಇದು ಶೇ.17.2ಕ್ಕೆ ಬಂದು ತಲುಪಿದೆ.
- ಉಳಿತಾಯದ ದರ ಸುಧಾರಿಸಲು ಉಳಿತಾಯದ ಮೇಲೆ ಇನ್ಸೆನ್ಟೀವ್ ನೀಡುವುದು ಅನಿವಾರ್ಯವಾಗಿದೆ.
- ಕಾರ್ಪೋರೆಟ್ ತೆರಿಗೆ ನೀಡುವವರಿಗೆ ಈಗಾಗಲೇ ನೆಮ್ಮದಿ ಸಿಕ್ಕಿದೆ, ಇದೀಗ ಸಂಬಳ ಪಡೆಯುವ ವರ್ಗದ ಸರದಿ.
ಮಧ್ಯಮವರ್ಗದವರ ನಿರೀಕ್ಷೆಗಳು
- 10 ಲಕ್ಷ ರೂ.ಗಳ ವರೆಗಿನ ಆದಾಯದ ಮೇಲೆ ಶೇ.10 ರಷ್ಟು ಟ್ಯಾಕ್ಸ್ ಸಾಧ್ಯತೆ.
- 80 ಸಿ ಅಡಿಯಲ್ಲಿ 2.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಸಾಧ್ಯತೆ.
- ಸದ್ಯ 5 ಲಕ್ಷ ರೂ. ವರೆಗಿನ ಟ್ಯಾಕ್ಸ್ ಗೆ ಒಳಪಡುವ ಆದಾಯದ ಮೇಲೆ ತೆರಿಗೆ ವಿನಾಯ್ತಿ ಇದೆ.
ಡೈರೆಕ್ಟ್ ಟ್ಯಾಕ್ಸ್ ಕೋಡ್
ಆದಾಯ ತೆರಿಗೆ ಕಾನೂನಿನಲ್ಲಿ ಸರಳತೆ ತರಲು ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಈ ತಂಡ ಆಗಸ್ಟ್ 2019ರಲ್ಲಿ ಕೇಂದ್ರ ವಿತ್ತ ಸಚಿವರಿಗೆ ತನ್ನ ವರದಿ ಸಲ್ಲಿಸಿದೆ. ಆದರೆ ಈ ವರದಿಯನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಈ ವರದಿಯ ಕೆಲ ಅಂಶಗಳನ್ನು ಈ ಬಾರಿಯ ಬಜೆಟ್ ನಲ್ಲಿ ಶಾಮೀಲುಗೊಳಿಸುವ ಸಾಧ್ಯತೆ ಇದೆ.