ಸಂಸತ್ತಿನ ಬಜೆಟ್ ಅಧಿವೇಶನ ಶುಕ್ರವಾರ (ಜನವರಿ 31) ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಆರ್ಥಿಕ ಸಮೀಕ್ಷೆಯನ್ನು ಸದನದಲ್ಲಿ ಮಂಡಿಸಲಿದ್ದಾರೆ. ಶನಿವಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಾಗುವುದು.
7th Pay Commission: ಕೇಂದ್ರ ನೌಕರರ ಮೂಲ(Basic) ಮತ್ತು ಪ್ರಿಯ ಭತ್ಯೆಗಳ(Dearness allowances) ಹೆಚ್ಚಳವನ್ನು ಸರ್ಕಾರ ಘೋಷಿಸಬಹುದು. 1.1 ಕೋಟಿಗೂ ಹೆಚ್ಚು ಕೇಂದ್ರ ನೌಕರರು ಇದರ ಲಾಭ ಪಡೆಯಬಹುದು.
ಆರ್ಥಿಕತೆ, ಹಣದುಬ್ಬರ ಮತ್ತು ಸಾಮಾನ್ಯ ಜನರ ನಿರೀಕ್ಷೆಗಳ ಮಧ್ಯೆ ಈ ಬಾರಿಯ ಬಜೆಟ್ ಅನ್ನು ಬಹಳ ಮುಖ್ಯವಾದ ಬಜೆಟ್ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಕಾರ್ಪೋರೇಟ್ಗಳಿಂದ ಹಿಡಿದು ಷೇರು ಮಾರುಕಟ್ಟೆಯವರೆಗೆ, ಜನಸಾಮಾನ್ಯರಿಂದ ಹಿಡಿದು ರೈತರವರೆಗೆ ಎಲ್ಲರ ದೃಷ್ಟಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರತ್ತ ನೆಟ್ಟಿದೆ.
ಉದ್ಯಮ ಕ್ಷೇತ್ರದಲ್ಲಿ ಕಾರ್ಪೋರೆಟ್ ತೆರಿಗೆಯಿಂದ ಪರಿಹಾರ ನೀಡಿರುವ ಕೇಂದ್ರ ಸರ್ಕಾರ ಇದೀಗ ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ಮುಂಬರುವ ಬಜೆಟ್ ನಲ್ಲಿ ಪರಿಹಾರ ನೀಡಲು ಹಾಗೂ ಪಿಪಿಎಫ್ ಹೂಡಿಕೆಯ ವ್ಯಾಪ್ತಿ ಹೆಚ್ಚಳದ ಕುರಿತು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.