ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬೇಕಾದ ಹಲವಾರು ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್ 31, 2021 ರ ಹಿಂದಿನ ಗಡುವಿನಿಂದ ಸೆಪ್ಟೆಂಬರ್ 30, 2021 ರವರೆಗೆ ವಿಸ್ತರಿಸಿದೆ. ಆ ಮೂಲಕ ಡೆಡ್ ಲೈನ್ ಬಗ್ಗೆ ಚಿಂತಿತರಾಗಿದ್ದ ತೆರಿಗೆ ಪಾವತಿದಾರರು ಈಗ ನಿಟ್ಟುಸಿರು ಬಿಡುವಂತಾಗಿದೆ.
ಆದಾಯ ತೆರಿಗೆ ಇಲಾಖೆ (Income Tax department) ಯ ಅಧಿಕೃತ ಪ್ರಕಟಣೆ ಪ್ರಕಾರ, "ವಿವಾಡ್ ಸೆ ವಿಶ್ವಾಸ್ ಕಾಯಿದೆಯಡಿ ಘೋಷಣೆದಾರರಿಂದ ಪಾವತಿ ಮಾಡಲು ಪೂರ್ವಾಪೇಕ್ಷಿತವಾದ ನಮೂನೆ ಸಂಖ್ಯೆ 3 ರ ವಿತರಣೆಯಲ್ಲಿ ಮತ್ತು ತಿದ್ದುಪಡಿಯಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ, ಕೊನೆಯ ದಿನಾಂಕವನ್ನು 2021 ರ ಸೆಪ್ಟೆಂಬರ್ 30 ರವರೆಗೆ(ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ). " ವಿಸ್ತರಿಸಲು ನಿರ್ಧರಿಸಲಾಗಿದೆ
ಇದನ್ನೂ ಓದಿ: PAN Card ಕಳೆದುಹೋದರೆ ಚಿಂತೆ ಬೇಡ, ಈ ವೆಬ್ ಸೈಟ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಬಹುದು
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಗಡುವಿನ ವಿಸ್ತರಣೆಯಲ್ಲಿ ಇತ್ತೀಚಿನ ಬದಲಾವಣೆಗಳನ್ನು ನೇರ ತೆರಿಗೆ ವಿವಾಡ್ ಸೆ ವಿಶ್ವಾಸ್ ಆಕ್ಟ್ 2020 ರ ಸೆಕ್ಷನ್ 3 ರ ಅಡಿಯಲ್ಲಿ ಮಾಡಲಾಗಿದೆ ಎಂದು ಇಲಾಖೆ ಸೂಚಿಸಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಐಟಿಆರ್ ಸಲ್ಲಿಸುವಲ್ಲಿನ ಅಸಮರ್ಥತೆಯನ್ನು ಉಲ್ಲೇಖಿಸಿ ಹಲವಾರು ತೆರಿಗೆದಾರರು ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳ ಕುರಿತು ದೂರು ನೀಡಿದ ನಂತರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕದ ವಿಸ್ತರಣೆ ಬಂದಿದೆ.
ಇದನ್ನೂ ಓದಿ: SBI Alert! ಬ್ಯಾಂಕ್ ಗೆ ಸಂಬಂಧಿಸಿದ ಈ ಎರಡು ಕೆಲಸಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಇಲ್ದಿದ್ರೆ ಖಾತೆ ಬಂದ್ !
ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳನ್ನು ಗಮನಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರನ್ನು ಕರೆಸಿದ್ದರು. ಗಮನಾರ್ಹವಾಗಿ, ಆದಾಯ ತೆರಿಗೆ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವ ಒಪ್ಪಂದವನ್ನು ಸರ್ಕಾರವು ಇನ್ಫೋಸಿಸ್‌ಗೆ ನೀಡಿತ್ತು.
ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಲು ಹಣಕಾಸು ಸಚಿವರು ಸೆಪ್ಟೆಂಬರ್ 15 ರವರೆಗೆ ಇನ್ಫೋಸಿಸ್‌ಗೆ ಸಮಯ ನೀಡಿದ್ದಾರೆ.ಹೊಸ ಆದಾಯ ತೆರಿಗೆ ಪೋರ್ಟಲ್‌ನ ಪ್ರಸ್ತುತ ಕಾರ್ಯವೈಖರಿಯೊಂದಿಗೆ ತೆರಿಗೆದಾರರು ಪ್ರಸ್ತುತ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ತಂಡವು 2021 ರ ಸೆಪ್ಟೆಂಬರ್ 15 ರೊಳಗೆ ಪರಿಹರಿಸಬೇಕೆಂದು ಅವರು ಈಗ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : SBI ಗ್ರಾಹಕರಿಗೊಂದು ಸಂತಸದ ಸುದ್ದಿ, ಕಾರ್ ಹಾಗೂ ಗೋಲ್ಡ್ ಲೋನ್ ಮೇಲೆ ಸಿಗುತ್ತಿದೆ ಈ ಅದ್ಭುತ ಕೊಡುಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ