ಮೋದಿ ರಾಜಕೀಯ ಉದ್ದೇಶಕ್ಕಾಗಿ ತಮ್ಮನ್ನು ಹಿಂದುಳಿದ ಜಾತಿ ಪಟ್ಟಿಯಲ್ಲಿ ಸೇರಿಸಿದ್ದಾರೆ- ಮಾಯಾವತಿ

ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಬಿಎಸ್ಪಿ ನಾಯಕಿ ಮಾಯಾವತಿ ರಾಜಕೀಯ ಉದ್ದೇಶಕ್ಕಾಗಿ ಮೋದಿ ತಮ್ಮ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಪ್ರತಿಪಕ್ಷಗಳು ತಮ್ಮನ್ನು ನೀಚ್ ಎಂದು ಆರೋಪಿಸುತ್ತಿವೆ ಎಂದು ಹೇಳಿದ ಬೆನ್ನಲ್ಲೇ ಈಗ ಮಾಯಾವತಿ ಮೋದಿಗೆ ತಿರುಗೇಟು ನೀಡಿದ್ದಾರೆ.

Last Updated : Apr 28, 2019, 10:20 AM IST
ಮೋದಿ ರಾಜಕೀಯ ಉದ್ದೇಶಕ್ಕಾಗಿ ತಮ್ಮನ್ನು ಹಿಂದುಳಿದ ಜಾತಿ ಪಟ್ಟಿಯಲ್ಲಿ ಸೇರಿಸಿದ್ದಾರೆ- ಮಾಯಾವತಿ title=

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಬಿಎಸ್ಪಿ ನಾಯಕಿ ಮಾಯಾವತಿ ರಾಜಕೀಯ ಉದ್ದೇಶಕ್ಕಾಗಿ ಮೋದಿ ತಮ್ಮ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಪ್ರತಿಪಕ್ಷಗಳು ತಮ್ಮನ್ನು ನೀಚ್ ಎಂದು ಆರೋಪಿಸುತ್ತಿವೆ ಎಂದು ಹೇಳಿದ ಬೆನ್ನಲ್ಲೇ ಈಗ ಮಾಯಾವತಿ ಮೋದಿಗೆ ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ ಕನೌಜ್ ವೊಂದರಲ್ಲಿನ ರ್ಯಾಲಿಯಲ್ಲಿ "ಈ ದೇಶಕ್ಕೆ ನನ್ನ ವಿರೋಧಿಗಳು ವಿರೋಧ ವ್ಯಕ್ತಪಡಿಸುವವರೆಗೆ ನನ್ನ ಜಾತಿ ಯಾವುದೆಂದು ತಿಳಿದಿರಲಿಲ್ಲ...ಆದ್ದರಿಂದ ಅದಕ್ಕೆ ನಾನು ಮಾಯಾವತಿ ಮತ್ತು ಅಖಿಲೇಶ್ ಹಾಗೂ ಕಾಂಗ್ರೆಸ್ ಜನರು ಮತ್ತು ಮಹಾಮೈತ್ರಿಯವರು ನನ್ನ ಜಾತಿಯ ಬಗ್ಗೆ ಚರ್ಚೆ ನಡೆಸುತ್ತಿರುವ ಬಗ್ಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಿಂದುಳಿದ ಜಾತಿಯಲ್ಲಿ ಜನಿಸುವುದೆಂದರೆ ಈ ದೇಶದ ಸೇವೆ ಮಾಡಲು ಸಿಕ್ಕಂತ ಮಹತ್ತರ ಅವಕಾಶವೆಂದು ನಾನು ಪರಿಗಣಿಸುತ್ತೇನೆ " ಎಂದು ಹೇಳಿದ್ದರು. 

ಈಗ ಇದಕ್ಕೆ ತಿರುಗೇಟು ನೀಡಿರುವ ಮಾಯಾವತಿ " ಇಂದು ಕನೌಜ್ ನಲ್ಲಿ ಪ್ರಧಾನಿ ಮೋದಿ ಬೆಹನ್ ಜಿ ಮತ್ತು ಅಖಿಲೇಶ್ ಯಾದವ್ ರಂತೆ ತಮ್ಮನ್ನು ಹಿಂದುಳಿದ ಜಾತಿ ಸೇರಿದ ವ್ಯಕ್ತಿ ಎಂದು ತಿಳಿದಿದ್ದಾರೆ.ಈಗ ಬಿಜೆಪಿ ದಲಿತ ಹಿಂದುಳಿದ ಕಾರ್ಡ್ ಇನ್ಮುಂದೆ ಕಾರ್ಯನಿರ್ವಹಿಸುವುದಿಲ್ಲ" ಎಂದು ಹೇಳಿದರು. ಇನ್ನು ಮುಂದುವರೆದು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಗಳಿಸಲು ಪ್ರಧಾನಿ ಮೋದಿ ತಮ್ಮ ಮೇಲ್ಜಾತಿ ವರ್ಗವನ್ನು ಹಿಂದುಳಿದ ಜಾತಿಯಲ್ಲಿ ಸೇರಿಸಿದ್ದಾರೆ. ಮುಲಾಯಂ ಸಿಂಗ್ ಹಾಗೆ ಮೋದಿ ಹಿಂದುಳಿದ ಜಾತಿಗೆ ಸೇರಿಲ್ಲ "ಎಂದು ತಿಳಿಸಿದರು.

Trending News