PM Modi Visit: 7 ಪಟ್ಟಣಗಳು, 8 ಕಾರ್ಯಕ್ರಮಗಳು 36 ಗಂಟೆಗಳಲ್ಲಿ ಪ್ರಧಾನಿ ಮೋದಿ 5300 ಕಿಮೀ ಯಾತ್ರೆ!

PM Modi Latest News: ಪ್ರಧಾನಿ ಮೋದಿ ಏಪ್ರಿಲ್ 24 ಮತ್ತು 25 ರಂದು ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಧಾನಿಯವರ ಕಾರ್ಯಕ್ರಮವು ದೆಹಲಿಯಿಂದ ಪ್ರಾರಂಭವಾಗಲಿದ್ದು, ಮಧ್ಯಪ್ರದೇಶದ ಮೂಲಕ, ಅವರ ಪ್ರಯಾಣವು ದಕ್ಷಿಣ ಭಾರತದ ಕೇರಳಕ್ಕೆ ಸಾಗಲಿದೆ, ನಂತರ ಅವರು ಪಶ್ಚಿಮ ಭಾಗದ ಕೇಂದ್ರಾಡಳಿತ ಪ್ರದೇಶಕ್ಕೆ ತೆರಳಲಿದ್ದು, ಅಂತಿಮವಾಗಿ ಪ್ರಧಾನಿ ದೆಹಲಿಗೆ ಹಿಂದಿರುಗಲಿದ್ದಾರೆ.  

Written by - Nitin Tabib | Last Updated : Apr 22, 2023, 05:47 PM IST
  • ಈ ಪವರ್ ಪ್ಯಾಕ್ಡ್ ಶೆಡ್ಯೂಲ್‌ನಲ್ಲಿ ಪ್ರಧಾನಿಯವರು ಒಟ್ಟು ಸುಮಾರು 5300 ಕಿ.ಮೀಗಳಷ್ಟು ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.
  • ನಾವು ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದವನ್ನು ನೋಡಿದರೆ, ಅದು 3200 ಕಿಲೋಮೀಟರ್ ಗಳಾಗಿದೆ.
  • ಗಮನಾರ್ಹವಾಗಿ, ಪ್ರಧಾನಿ ಮೋದಿಯವರ ಈ ಭೇಟಿಯು ಸುಮಾರು 36 ಗಂಟೆಗಳಲ್ಲಿ ಕೊನೆಗೊಳ್ಳಲಿದೆ.
PM Modi Visit: 7 ಪಟ್ಟಣಗಳು, 8 ಕಾರ್ಯಕ್ರಮಗಳು 36 ಗಂಟೆಗಳಲ್ಲಿ ಪ್ರಧಾನಿ ಮೋದಿ 5300 ಕಿಮೀ ಯಾತ್ರೆ! title=

PM Modi Visit 7 Different Cities: ಏಪ್ರಿಲ್ 24 ರಂದು ಬೆಳಗ್ಗೆ ಪ್ರಧಾನಿ ಮೋದಿ ತಮ್ಮ ಪ್ರಯಾಣ ಆರಂಭಿಸಲಿದ್ದಾರೆ. ಪ್ರಧಾನಿಯವರ ಈ ಪ್ರಯಾಣ ದೆಹಲಿಯಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಅವರು 7 ವಿವಿಧ ನಗರಗಳಲ್ಲಿ 8 ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿ ಅವರು ರಾಜಧಾನಿ ದೆಹಲಿಯಿಂದ ಸುಮಾರು ಸುಮಾರು 500 ಕಿ.ಮೀ. ದೂರದಲ್ಲಿರುವ ಖಜುರಾಹೊಗೆ ಪ್ರಯಾಣಿಸಲಿದ್ದು, ಬಳಿಕ ಖಜುರಾಹೊದಿಂದ ರೇವಾಗೆ ತೆರಳಿ ಅಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಾದ ನಂತರ ಪ್ರಧಾನಿ ಮೋದಿ ಅವರು ರೌಂಡ್ ಟ್ರಿಪ್ ಪ್ರಯಾಣದಲ್ಲಿ ಸುಮಾರು 280 ಕಿಮೀ ದೂರವನ್ನು ಕ್ರಮಿಸಲಿದ್ದಾರೆ ಮತ್ತು ನಂತರ ಖಜುರಾಹೊಗೆ ಹಿಂತಿರುಗಲಿದ್ದಾರೆ. ಯುವಂ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಲು ಖಜುರಾಹೊದಿಂದ, ಪ್ರಧಾನಿ ಮೋದಿ ಅವರು ಸುಮಾರು 1700 ಕಿಮೀ ವೈಮಾನಿಕ ದೂರವನ್ನು ಕ್ರಮಿಸುವ ಮೂಲಕ ಕೊಚ್ಚಿಗೆ ತಲುಪಲಿದ್ದಾರೆ.

ಇದನ್ನೂ ಓದಿ-ಚದುರಿಹೋಗಲಿದೆಯೇ ಮಹಾ ವಿಕಾಸ್ ಆಘಾಡಿ? ಭಾರಿ ಕುತೂಹಲಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ

ಮಾರನೇ ದಿನ ಬೆಳಗ್ಗೆ ಕೊಚ್ಚಿಯಿಂದ ತಿರುವನಂತಪುರಂ
ಮಾರನೇ ದಿನ ಬೆಳಗ್ಗೆ ಪ್ರಧಾನಿಯವರ ಈ ಭೇಟಿ ಮುಂದುವರಿಯಲಿದೆ. ಪ್ರಧಾನಿಯವರು ಕೊಚ್ಚಿಯಿಂದ ತಿರುವನಂತಪುರಕ್ಕೆ (ಕೊಚ್ಚಿಯಿಂದ ತಿರುವನಂತಪುರಕ್ಕೆ ಪ್ರಯಾಣ) ಸುಮಾರು 190 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಲಿದ್ದಾರೆ. ಇಲ್ಲಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಫ್ಲ್ಯಾಗ್ ಆಫ್ ಮಾಡಲಿದ್ದಾರೆ ಮತ್ತು ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ. ಇಲ್ಲಿಂದ ಸೂರತ್ ಮೂಲಕ ಸಿಲ್ವಾಸ್ಸಾಗೆ ತೆರಳಲಿದ್ದು, ಇದು ಸುಮಾರು 1570 ಕಿ.ಮೀ. ದೂರದಲ್ಲಿದೆ. ಅಲ್ಲಿ ಅವರು ನಮೋ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ನಂತರ ಅವರು ದೇವ್ಕಾ ಸೀಫ್ರಂಟ್ (ದೇವಕಾ ಸೀಫ್ರಂಟ್ ಉದ್ಘಾಟನೆ) ಉದ್ಘಾಟನೆಗೆ ದಮನ್‌ಗೆ ತೆರಳಲಿದ್ದಾರೆ, ನಂತರ ಅವರು ಸೂರತ್‌ಗೆ ಸುಮಾರು 110 ಕಿಲೋಮೀಟರ್ ದೂರ ಪ್ರಯಾಣಿಸಲಿದ್ದಾರೆ. ಸೂರತ್‌ನಿಂದ, ಪ್ರಧಾನಿ ಮೋದಿ ಅವರು ತಮ್ಮ ಪ್ರವಾಸಕ್ಕೆ ಇನ್ನೂ 940 ಕಿಲೋಮೀಟರ್ ಸೇರಿಸುವ ಮೂಲಕ ದೆಹಲಿಗೆ ಹಿಂದಿರುಗಲಿದ್ದಾರೆ.

ಇದನ್ನೂ ಓದಿ-Eid 2023: 'ಪ್ರಾಣ ಬೇಕಾದರೂ ಕೊಡುವೆ, ಆದರೆ ದೇಶ ವಿಭಜನೆಗೆ ಅವಕಾಶ ಕೊಡಲ್ಲ' ಮಮತಾ ಬ್ಯಾನರ್ಜಿ ಹೀಗೆ ಹೇಳಿದ್ದಾದರು ಏಕೆ?

ಪ್ರಧಾನಿಯವರ ಪವರ್ ಪ್ಯಾಕ್ ವೇಳಾಪಟ್ಟಿ
ಈ ಪವರ್ ಪ್ಯಾಕ್ಡ್ ಶೆಡ್ಯೂಲ್‌ನಲ್ಲಿ ಪ್ರಧಾನಿಯವರು ಒಟ್ಟು ಸುಮಾರು 5300 ಕಿ.ಮೀಗಳಷ್ಟು ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ನಾವು ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದವನ್ನು ನೋಡಿದರೆ, ಅದು 3200 ಕಿಲೋಮೀಟರ್ ಗಳಾಗಿದೆ. ಗಮನಾರ್ಹವಾಗಿ, ಪ್ರಧಾನಿ ಮೋದಿಯವರ ಈ ಭೇಟಿಯು ಸುಮಾರು 36 ಗಂಟೆಗಳಲ್ಲಿ ಕೊನೆಗೊಳ್ಳಲಿದೆ. ಈ ಭೇಟಿಯ ವೇಳೆ ಪ್ರಧಾನಿ ಮೋದಿ ತಮ್ಮ ಕಾರ್ಯಕ್ರಮಗಳ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News