ನವದೆಹಲಿ: ದೇಶದಲ್ಲಿ ಹಬ್ಬದ ಋತು ಮನೆಮಾಡಿದೆ. ದೀಪಾವಳಿ ಅಂಗವಾಗಿ ಜನರು ಒಂದೆಡೆಯಿಂದ ಮತ್ತೊಂದೆಡೆ ತೆರಳುವವರ ಸಂಖ್ಯೆಯೂ ಹೆಚ್ಚಾಗಿದೆ. ಬಸ್, ರೈಲು ನಿಲ್ದಾಣಗಳಲ್ಲೂ ಜನಸಂದಣಿ ಅಧಿಕವಾಗಿದೆ. ಇನ್ನು ಈ ವೇಳೆ ನೀರಿನ ಬೇಡಿಕೆಯೂ ಹೆಚ್ಚಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳುವವರು ಅಕ್ರಮ ನೀರಿನ ವ್ಯವಹಾರ ನಡೆಸುತ್ತಿದ್ದಾರೆ.
ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಯಾಣಿಕರಿಗೆ ಅಕ್ರಮ ನೀರನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಬಂದ ಕೂಡಲೇ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ದೆಹಲಿ ಪೂರ್ವದ ಡಿಎಸ್ಸಿ ಹರೀಶ್ ಪಪೋಲಾ ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ವಿಶೇಷ ತಂಡವನ್ನು ರಚಿಸಿ ವಾಟರ್ ಗೋಡೌನ್ ಮೇಲೆ ದಾಳಿ ನಡೆಸಿಸಲಾಗಿದೆ. ಈ ಸಂದರ್ಭದಲ್ಲಿ 2676 ಅಕ್ರಮ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಕ್ಕೆ ಪಡೆಯಲಾದ ಅಕ್ರಮ ನೀರಿನ ಬಾಟಲಿಗಳ ಅಂದಾಜು ಮೌಲ್ಯ ಸುಮಾರು 40 ಸಾವಿರ ರೂಪಾಯಿ. ಒಂದು ಬಾಟಲಿಯನ್ನು 140 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಅಕ್ರಮ ನೀರು ಮಾರಾಟ ಮಾಡಿದ್ದಕ್ಕಾಗಿ ಅಬಿದ್ ಮತ್ತು ಚಂದು ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಬ್ಬರ ವಿರುದ್ಧ ರೈಲ್ವೆ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ.
2019 ರ ಜೂನ್ ತಿಂಗಳಲ್ಲಿಯೂ ಆರ್‌ಪಿಎಫ್ ಡಿಜಿ ಅರುಣ್ ಕುಮಾರ್ ಅವರು ದೇಶದ ಎಲ್ಲಾ ನಿಲ್ದಾಣಗಳಲ್ಲಿ ಅಕ್ರಮ ನೀರು ಮಾರಾಟ ಮಾಡುವವರ ವಿರುದ್ಧ ಪ್ರಚಾರ ನಡೆಸಿದರು. ಇದನ್ನು 'ಆಪರೇಷನ್ ಬಾಯಾರಿಕೆ'(OPRATION THIRST) ಎಂದು ಹೆಸರಿಸಲಾಯಿತು. ಈ ಅಭಿಯಾನದಡಿಯಲ್ಲಿ ಅಕ್ರಮ ನೀರನ್ನು ಮಾರಾಟ ಮಾಡಿದ ಆರೋಪದ ಮೇಲೆ ದೇಶಾದ್ಯಂತ 800 ಜನರನ್ನು ಬಂಧಿಸಲಾಗಿದ್ದು, ಸುಮಾರು 732 ಪ್ರಕರಣಗಳನ್ನು ದಾಖಲಿಸುವ ಮೂಲಕ 48860 ನೀರಿನ ಬಾಟಲಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.