ಉತ್ತರಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಇಂದಿನಿಂದ 5 ಪಟ್ಟು ಹೆಚ್ಚು ದಂಡ!

ಉತ್ತರ ಪ್ರದೇಶ ಕ್ಯಾಬಿನೆಟ್ ಇತ್ತೀಚೆಗೆ ಮೋಟಾರು ವಾಹನ  ಕಾಯಿದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.   

Last Updated : Jun 13, 2019, 09:38 AM IST
ಉತ್ತರಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ಇಂದಿನಿಂದ 5 ಪಟ್ಟು ಹೆಚ್ಚು ದಂಡ! title=

ನವದೆಹಲಿ/ನೋಯ್ಡಾ: ಉತ್ತರಪ್ರದೇಶದಲ್ಲಿ ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವುದು ಜನರಿಗೆ ಬಹಳ ಭಾರವಾಗಿರುತ್ತದೆ. ರಸ್ತೆ ಅಪಘಾತಗಳು ಮತ್ತು ಸಂಚಾರ ದಟ್ಟಣೆಯನ್ನು ತೊಡೆದುಹಾಕಲು ಉತ್ತರ ಪ್ರದೇಶ ಸರ್ಕಾರವು ಹೊಸ ಸಂಚಾರ ನಿಯಮಗಳ ಅಧಿಸೂಚನೆಯನ್ನು ಜಾರಿಗೊಳಿಸಿದೆ. 

ನೂತನ ನಿಯಮದ ಪ್ರಕಾರ, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರು ಈ ಹಿಂದಿಗಿಂತ 5 ಪಟ್ಟು ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ, ಇಂದಿನಿಂದ ಕೇವಲ ಅಪಘಾತಗಳ ಬಗ್ಗೆ ಮಾತ್ರವಲ್ಲ ಜನರು ತಮ್ಮ ಜೇಬಿನ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಉತ್ತರ ಪ್ರದೇಶ ಕ್ಯಾಬಿನೆಟ್ ಇತ್ತೀಚೆಗೆ ಮೋಟಾರು ವಾಹನ  ಕಾಯಿದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಮೋಟಾರು ವಾಹನ  ಕಾಯಿದೆ ಅನ್ವಯ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ದಂಡವನ್ನು ಹೆಚ್ಚಿಸುವ ಬಗ್ಗೆ ತಿದ್ದುಪಡಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ನೂತನ ತಿದ್ದುಪಡಿಯನ್ವಯ ಇಂದಿನಿಂದ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಭಾರೀ ದಂಡ ಬೀಳಲಿದೆ.

ಸಂಚಾರಿ ನಿಯಮ ಉಲ್ಲಂಘಿಸಿದರೆ ಇಂದಿನಿಂದ ಪಾವತಿಸಬೇಕಿರುವ ದಂಡ:

  • ಓವರ್ ಸ್ಪೀಡ್ ಡ್ರೈವಿಂಗ್ ಗೆ ಇದೀಗ 2000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ, ಅದು ಮೊದಲಿಗೆ ರೂ. 1000 ಇತ್ತು.
  • ಲ್ಮೆಟ್ ಅಥವಾ ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡುವವರಿಗೆ, 100 ರೂಪಾಯಿಗಳ ಬದಲಾಗಿ 500 ರೂ. ದಂಡ.
  • ಚಾಲನೆ ವೇಳೆ ಫೋನ್ನಲ್ಲಿ ಮಾತನಾಡುವ್ವವರಿಗೂ 5 ಪಟ್ಟು ದಂಡವನ್ನು ಹೆಚ್ಚಿಸಲಾಗಿದ್ದು, 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
  • ನೀವು ಒನ್ ವೇ ನಲ್ಲಿ ವಾಹನ ಚಲಾಯಿಸುತ್ತಿದ್ದರೆ ಈ ಮೊದಲಿಗೆ 500 ರೂ. ದಂಡ ಪಾವತಿಸಬೇಕಿತ್ತು, ಇದೀಗ 1000 ರೂ. ಪೆನಾಲ್ಟಿ ಕಟ್ಟಬೇಕು.

Trending News