IAF Plane Crash : ತೆಲಂಗಾಣದಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನ, ಇಬ್ಬರು ಪೈಲಟ್‌ಗಳು ಸಾವು

ಬೆಳಗ್ಗೆ 8.55ರ ಸುಮಾರಿಗೆ ವಿಮಾನ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ದಿಂಡುಗಲ್‌ನ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ವೇಳೆ ಈ ಅವಘಡ ಸಂಭವಿಸಿದೆ.  

Written by - Ranjitha R K | Last Updated : Dec 4, 2023, 12:53 PM IST
  • ತೆಲಂಗಾಣದಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನ
  • ವಿಮಾನದಲ್ಲಿ 2 ಪೈಲಟ್‌ಗಳಿದ್ದರು
  • ಘಟನೆಗೆ ರಕ್ಷಣಾ ಸಚಿವರ ಸಂತಾಪ
IAF Plane Crash : ತೆಲಂಗಾಣದಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನ, ಇಬ್ಬರು ಪೈಲಟ್‌ಗಳು ಸಾವು title=

IAF Plane Crash : ತೆಲಂಗಾಣದಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದೆ. ದುರ್ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಬೆಳಗ್ಗೆ 8.55ಕ್ಕೆ ಈ ಅವಘಡ ಸಂಭವಿಸಿದೆ. ಅಪಘಾತದ ಬಗ್ಗೆ ಭಾರತೀಯ ವಾಯುಪಡೆ ಮಾಹಿತಿ ನೀಡಿದೆ. ಇಂದು ಬೆಳಗ್ಗೆ ಪಿಸಿ 7 ಎಂಕೆ II ವಿಮಾನವು ವಾಡಿಕೆಯ ತರಬೇತಿ ವೇಳೆ ಅಪಘಾತಕ್ಕೀಡಾಗಿದೆ ಎಂದು ವಾಯುಪಡೆ ತಿಳಿಸಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್ ಗಳು ಗಂಭೀರವಾಗಿ ಗಾಯಗೊಂಡಿದ್ದು, ನಂತರ ಮೃತಪಟ್ಟಿದ್ದಾರೆ.

ವಿಮಾನದಲ್ಲಿ 2 ಪೈಲಟ್‌ಗಳಿದ್ದರು :
ಬೆಳಗ್ಗೆ 8.55ರ ಸುಮಾರಿಗೆ ವಿಮಾನ ಪತನಗೊಂಡಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ದಿಂಡುಗಲ್‌ನ ಏರ್ ಫೋರ್ಸ್ ಅಕಾಡೆಮಿ ತರಬೇತಿ ವೇಳೆ ಈ ಅವಘಡ ಸಂಭವಿಸಿದೆ. ಸತ್ತವರಲ್ಲಿ ಒಬ್ಬ ಇನ್ಸ್ಟ್ರಕ್ಟರ್  ಮತ್ತು ಕೆಡೆಟ್ ಸೇರಿದ್ದಾರೆ. ಪೊಲೀಸರ ಪ್ರಕಾರ, ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ವಿಮಾನದಲ್ಲಿ ಇಬ್ಬರು ಭಾರತೀಯ ವಾಯುಪಡೆ ಅಧಿಕಾರಿಗಳು ಇದ್ದರು. ಈ ಅಪಘಾತ ಸಂಭವಿಸಿದಾಗ ವಿಮಾನ ತೂಪ್ರಾನ್ ಪ್ರದೇಶದಲ್ಲಿತ್ತು. ಏರ್ ಫೋರ್ಸ್ ಅಕಾಡೆಮಿ ದುಂಡಿಗಲ್‌ನಿಂದ ವಿಮಾನ ಟೇಕಾಫ್ ಆಗಿತ್ತು.

ಇದನ್ನೂ ಓದಿ : ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್’ಗಢದಲ್ಲಿ ಕಾಂಗ್ರೆಸ್ ಹೀನಾಯ ಸೋಲು: ಈ ಜನಾದೇಶದ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

ಘಟನೆಗೆ ರಕ್ಷಣಾ ಸಚಿವರ ಸಂತಾಪ  : 
ಅಪಘಾತದ ಬಗ್ಗೆ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ಬೇಸರ ತಂದಿದೆ ಎಂದಿದ್ದಾರೆ. 

ಜೂನ್‌ನಲ್ಲಿಯೂ ಸಂಭವಿಸಿತ್ತು ಅಪಘಾತ  : 
ಇತ್ತೀಚೆಗೆ ವಾಯುಪಡೆಯ ವಿಮಾನಗಳ ಅಪಘಾತಗಳು ಹೆಚ್ಚಾಗುತ್ತಿವೆ. ಜೂನ್‌ನಲ್ಲಿ ಭಾರತೀಯ ವಾಯುಪಡೆಯ ಕಿರಣ್ ತರಬೇತಿ ವಿಮಾನವು ಕರ್ನಾಟಕದ ಚಾಮರಾಜನಗರದಲ್ಲಿ ಪತನಗೊಂಡಿತ್ತು. ಬಯಲುಸೀಮೆಯಲ್ಲಿ ಈ ಅವಘಡ ಸಂಭವಿಸಿದ್ದರಿಂದ  ಅನಾಹುತ ಸಂಭವಿಸಿರಲಿಲ್ಲ. ಪೈಲಟ್‌ಗೂ ಸಣ್ಣಪುಟ್ಟ ಗಾಯಗಳಾಗಿತ್ತು. 

ಇದನ್ನೂ ಓದಿ : Daily GK Quiz: ಭಾರತದಲ್ಲಿ ಎಷ್ಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ?

ಈ ವರ್ಷದ ಮೇ ತಿಂಗಳಲ್ಲಿ, ಭಾರತೀಯ ವಾಯುಪಡೆಯ ಮಿಗ್ -21 ಯುದ್ಧ ವಿಮಾನವು ರಾಜಸ್ಥಾನದ ಹನುಮಾನ್‌ಗಢ್ ಬಳಿ ಪತನಗೊಂಡಿತ್ತು.  ಮಾರ್ಚ್‌ನಲ್ಲಿ ಇಬ್ಬರು ಟ್ರೈನಿ ಪೈಲಟ್‌ಗಳಿದ್ದ ವಿಮಾನ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News