ನವದೆಹಲಿ: ಪಾಕಿಸ್ತಾನ ಮತ್ತೆ ಗಡಿ ಉಲ್ಲಂಘನೆಗೆ ಯತ್ನಿಸಿದ್ದು, ಭಾರತೀಯ ವಾಯುಸೇನೆಗೆ ಹೆದರಿ ವಾಪಸ್ ಆಗಿವೆ ಎಂದು ಮೂಲಗಳು ತಿಳಿಸಿವೆ.
ಜಮ್ಮುವಿನ ಕೃಷ್ಣ ಘಾಟಿ ಕ್ಷೇತ್ರದ ನಿಯಂತ್ರಣ ರೇಖೆಯನ್ನು ದಾಟಿ ಪೂಂಚ್ ವಲಯದೊಳಗೆ ನುಸುಳಲು ಎರಡು ಪಾಕಿಸ್ತಾನಿ ಯುದ್ಧ ವಿಮಾನಗಳು ಪ್ರಯತ್ನಿಸಿವೆ. ಈ ಸಮಯದಲ್ಲಿ ಪಾಕಿಸ್ತಾನದ ಎರಡು ಯುದ್ಧ ವಿಮಾನಗಳ ಮೇಲೆ ಭಾರತೀಯ ವಾಯುಪಡೆ ವಿಮಾನಗಳು ದಾಳಿ ಮಾಡಿದ್ದು ಎರಡೂ ವಿಮಾನಗಳು ಹಿಂದಕ್ಕೆ ಹೋಗಿವೆ ಎನ್ನಲಾಗಿದೆ.
ಇದಕ್ಕೂ ಸುಮಾರು 15 ನಿಮಿಷಗಳ ಹಿಂದೆ ಕೃಷ್ಣ ಘಾಟಿಯಲ್ಲಿ ಪಾಕಿಸ್ತಾನ ಸೈನ್ಯವು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನೂ ನೀಡಿತ್ತು ಎಂದು ವರದಿಗಳು ತಿಳಿಸಿವೆ.
ಮತ್ತೊಂದೆಡೆ, ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಯಲ್ಲಿ ತುರ್ತು ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್, ಐಬಿ ಚೀಫ್ ಮತ್ತು ಆರ್ಮಿ ಮುಖ್ಯಸ್ಥ ಮತ್ತು ಏರ್ ಸ್ಟಾಫ್ನ ಮುಖ್ಯಸ್ಥರು ಸೇರಿದ್ದಾರೆ.