ನಾನು ಸಂಘಿ ಭಯೋತ್ಪಾದನೆ ಹೇಳಿದ್ದೇನೆ ಹೊರತು ಹಿಂದೂ ಭಯೋತ್ಪಾದನೆ ಬಗ್ಗೆ ಅಲ್ಲ -ದಿಗ್ವಿಜಯ್ ಸಿಂಗ್

     

Last Updated : Jun 16, 2018, 01:21 PM IST
ನಾನು ಸಂಘಿ ಭಯೋತ್ಪಾದನೆ ಹೇಳಿದ್ದೇನೆ ಹೊರತು ಹಿಂದೂ ಭಯೋತ್ಪಾದನೆ ಬಗ್ಗೆ ಅಲ್ಲ -ದಿಗ್ವಿಜಯ್ ಸಿಂಗ್ title=

ಭೂಪಾಲ್: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ತಾವು ಸಂಘಿ ಭಯೋತ್ಪಾದನೆ ಪದವನ್ನು ಬಳಸಿದ್ದೇನೆ ಹೊರತು ಹಿಂದೂ ಭಯೋತ್ಪಾದನೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ದಿಗ್ವಿಜಯ ಸಿಂಗ್ 'ಹಿಂದೂ ಭಯೋತ್ಪಾದನೆ' ಎಂಬ ಪದವನ್ನು ಬಳಸಿದ ಬಗ್ಗೆ ತಪ್ಪು ಮಾಹಿತಿಯಿದೆ. ನಾನು ಯಾವಾಗಲೂ 'ಸಂಘ ಭಯೋತ್ಪಾದನೆ' ಪದವನ್ನು ಬಳಸಿದ್ದೇನೆ" ಎಂದು ತಿಳಿಸಿದರು.

"ಧರ್ಮದ ಆಧಾರದ ಮೇಲೆ ಯಾವುದೇ ಭಯೋತ್ಪಾದಕ ಚಟುವಟಿಕೆಯನ್ನು ವ್ಯಾಖ್ಯಾನಿಸಬಾರದು, ಯಾವುದೇ ಧರ್ಮವು ಭಯೋತ್ಪಾದನೆಯ ಬೆಂಬಲಿಗರಾಗಿರೋದಿಲ್ಲ" ಎಂದು ಸಿಂಗ್ ಹೇಳಿದರು.

ಸಂಘಿ ಭಯೋತ್ಪಾದನೆ ಬಗ್ಗೆ ತನ್ನ ನಿಲುವನ್ನು ಸ್ಪಷ್ಟ ಪಡಿಸುತ್ತಾ "ಸಂಘದ ಸಿದ್ಧಾಂತದಿಂದ ಪ್ರಭಾವಿತರಾದ ಜನರು, ಮಾಲೆಗಾಂವ್ ಸ್ಫೋಟ, ಮೆಕ್ಕಾ ಮಸೀದಿ ಸ್ಫೋಟ, ಸಂಜೋತಾ ಎಕ್ಸ್ಪ್ರೆಸ್ ಅಥವಾ ದರ್ಗಾ ಶರೀಫ್ ಸ್ಫೋಟದಂತಹ  ಬಾಂಬ್ ಸ್ಫೋಟಗಳು ನಡೆದಿವೆ" ಎಂದು ಸಿಂಗ್ ಹೇಳಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಆರೋಪಿಸಿ ಸಿಂಗ್, "ಹಿಂಸಾಚಾರ ಮತ್ತು ದ್ವೇಷವನ್ನು ಪ್ರಸಾರ ಮಾಡುವ ಮೂಲಕ ಮತ್ತಷ್ಟು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂದು ಸಿಂಗ್ ತಿಳಿಸಿದರು.

Trending News