ಜೆಟ್ ಏರ್ವೇಸ್ ಲೇವಾದೇವಿದಾರರ ಎಲ್ಲ ಕರಾರುಗಳಿಗೆ ಒಪ್ಪಿಗೆ ನೀಡಲಾಗಿದೆ -ನರೇಶ್ ಗೋಯಲ್

ಜೆಟ್ ಏರ್ವೇಸ್ ನ ಪ್ರವರ್ತಕ ಮತ್ತು ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಬುಧವಾರದಂದು ಏರ್ಲೈನ್ ನಿಗದಿತ ಬಿಡುಗಡೆ ಹಣವನ್ನು ಖಾತ್ರಿಪಡಿಸಿಕೊಳ್ಳಲು ಲೇವಾದೇವಿದಾರರಿಂದ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಬಿಕ್ಕಟ್ಟಿನ ಹಿಡಿತದ ಋಣಭಾರ ಪರಿಹಾರಕ್ಕೆ ಒಳಗಾಗುತ್ತದೆ ಮತ್ತು1,500 ಕೋಟಿ ರೂಪಾಯಿಗಳ ಹಣವನ್ನು ಮರುಪಾವತಿ ಮಾಡಬಹುದು ಎನ್ನಲಾಗಿದೆ.

Last Updated : Apr 4, 2019, 12:51 PM IST
ಜೆಟ್ ಏರ್ವೇಸ್ ಲೇವಾದೇವಿದಾರರ ಎಲ್ಲ ಕರಾರುಗಳಿಗೆ ಒಪ್ಪಿಗೆ ನೀಡಲಾಗಿದೆ -ನರೇಶ್ ಗೋಯಲ್  title=
file photo

ನವದೆಹಲಿ: ಜೆಟ್ ಏರ್ವೇಸ್ ನ ಪ್ರವರ್ತಕ ಮತ್ತು ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಬುಧವಾರದಂದು ಏರ್ಲೈನ್ ನಿಗದಿತ ಬಿಡುಗಡೆ ಹಣವನ್ನು ಖಾತ್ರಿಪಡಿಸಿಕೊಳ್ಳಲು ಲೇವಾದೇವಿದಾರರಿಂದ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಬಿಕ್ಕಟ್ಟಿನ ಹಿಡಿತದ ಋಣಭಾರ ಪರಿಹಾರಕ್ಕೆ ಒಳಗಾಗುತ್ತದೆ ಮತ್ತು1,500 ಕೋಟಿ ರೂಪಾಯಿಗಳ ಹಣವನ್ನು ಮರುಪಾವತಿ ಮಾಡಬಹುದು ಎನ್ನಲಾಗಿದೆ.

ವಿಮಾನಯಾನದ ಭವಿಷ್ಯವು ಆತಂಕದ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಭಾರತೀಯ ಸಾಲದಾತರ ಒಕ್ಕೂಟಕ್ಕೆ ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಗೊಯಲ್ ಹೇಳಿದ್ದಾರೆ.

"ನಾನು ಎಲ್ಲ ಅವರ ಸಮಯಾಧಾರಿತ ನಿಯಮಾವಳಿಗೆ ಒಪ್ಪಿಗೆ ನೀಡಿದ್ದೇನೆ. ಜೆಟ್ ಏರ್ವೇಸ್ಗೆ ಸುಸ್ಥಿರ ಭವಿಷ್ಯವನ್ನು ಭದ್ರಪಡಿಸುವ ಸಲುವಾಗಿ ಲೇವಾದೇವಿದಾರರ ಸಾಕಷ್ಟು ಹಣವನ್ನು ಬಿಡುಗಡೆ ಮಾಡುವಂತೆ ನಾನು 'ರೆಸಲ್ಯೂಶನ್ ಪ್ಲಾನ್' ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಿ ಹಾಕಿದ್ದೇನೆ" ಎಂದು ಗೋಯಲ್ ಹೇಳಿದರು.ಗುತ್ತಿಗೆ ಬಾಡಿಗೆಗಳ ಪಾವತಿಯಿಲ್ಲದ ಕಾರಣ ವಿಮಾನಯಾನ ಸಂಸ್ಥೆಯು15 ವಿಮಾನಗಳ ಹಾರಾಟವನ್ನು ನಿಲ್ಲಿಸಿದ ನಂತರ ಅವರ ಈ ಹೇಳಿಕೆ ಬಂದಿದೆ.

ಮಾರ್ಚ್ 25 ರಂದು ಏರ್ಲೈನ್ಸ್ ಮಂಡಳಿಯಿಂದ ಅನುಮೋದಿಸಲಾದ ಋಣಭಾರ ಪರಿಹಾರ ಯೋಜನೆಯಡಿ ಸಾಲದಾತರಿಂದ 1,500 ಕೋಟಿ ರೂ. ಹಣವನ್ನು ಇಕ್ವಿಟಿಗೆ ಪರಿವರ್ತಿಸುವ ನಿಧಿ ಇರುತ್ತದೆ. ಅಲ್ಲದೆ, ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಮಂಡಳಿಯಿಂದ ಹೊರಕ್ಕೆ ಬಂದಿದ್ದಾರೆ.ಈಗ ಗೋಯಲ್ ಅವರ ಪಾಲು ಶೇ 25ಕ್ಕೆ ಇಳಿಯುತ್ತದೆ ಮತ್ತು ಇತಿಹಾದ್ನ ಶೇ 12 ರಷ್ಟು ಕಡಿಮೆಯಾಗಲಿದೆ ಎನ್ನಲಾಗಿದೆ.

Trending News