ನವದೆಹಲಿ: ತಮ್ಮನ್ನು ಬ್ಯಾಂಕ್ ಹಗರಣಗಳ ಪೋಸ್ಟರ್ ಬಾಯ್ ಮಾಡಲಾಗಿದೆ ಎಂದು ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ಬಾಕಿ ಇರಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ನೋವು ತೋಡಿಕೊಂಡಿದ್ದಾರೆ.
ಬಹಳ ದಿನಗಳ ನಂತರ ಮೌನ ಮುರಿದು ಟ್ವೀಟ್ ಮಾಡಿರುವ ವಿಜಯ್ ಮಲ್ಯ, ತಾವು ಸಾಲ ತೀರಿಸುವ ಬಗ್ಗೆ ಏಪ್ರಿಲ್ 15, 2016ರಂದು ಪ್ರಧಾನ ಮಂತ್ರಿ ಮತ್ತು ಹಣಕಾಸು ಮಂತ್ರಿಗಳಿಗೆ ಪತ್ರ ಬರೆದಿದ್ದೆ. ಆದರೆ ಪ್ರಧಾನಿಗಳು ತಮ್ಮ ಪತ್ರಕ್ಕೆ ಸ್ಪಂದಿಸಲಿಲ್ಲ. ಇದು ದುರಾದೃಷ್ಟವಶಾತ್ ತಮ್ಮ ಸುತ್ತ ಹಲವು ವಿವಾದಗಳು ಹುಟ್ಟಿಕೊಳ್ಳುವಂತೆ ಮಾಡಿತು. ಹಾಗಾಗಿ ಇದೀಗ ಆ ಪತ್ರವನ್ನು ಬಹಿರಂಗಪಡಿಸುತ್ತಿರುವುದಾಗಿ ಮಲ್ಯ ಹೇಳಿದ್ದಾರೆ.
ಕಿಂಗ್ಫಿಷರ್ ಏರ್ಲೈನ್ಸ್(ಕೆಎಫ್ಎ)ಗೆ 9 ಸಾವಿರ ಕೋಟಿ ರೂ. ಸಾಲ ಪಡೆದು ಪರಾರಿಯಾಗಿದ್ದಾನೆ ಎಂದು ರಾಜಕಾರಣಿಗಳು ಮತ್ತು ಮಾಧ್ಯಮಗಳು ನನ್ನನ್ನು ದೂಷಿಸಿವೆ. ಕೆಲವು ಸಾಲ ಬ್ಯಾಂಕುಗಳು ನನಗೆ ಉದ್ದೇಶಪೂರ್ವಕ ಡಿಫಾಲ್ಟರ್ ಎಂದು ಹೆಸರಿಸಿವೆ ಎಂದು ಪತ್ರದಲ್ಲಿ ಹೇಳಿದ್ದಾರೆ.
'ನಾನು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ತೀರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ರಾಜಕೀಯ ಪ್ರೇರೇಪಿತ ಬಾಹ್ಯ ಅಂಶಗಳು ಮಧ್ಯಪ್ರವೇಶಿಸಿದರೆ ನಾನು ಏನೂ ಮಾಡಲು ಸಾಧ್ಯವಿಲ್ಲ. ಅಲ್ಲದೆ ಪತ್ರದಲ್ಲಿ ನನ್ನನ್ನು ಬ್ಯಾಂಕ್ ಹಗರಣಗಳ ಪೋಸ್ಟರ್ ಬಾಯ್ ಮಾಡಲಾಗಿದೆ ಎಂದು ಮಲ್ಯ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.
After two years of silence, I have decided to issue a comprehensive press statement ... 1/5 pic.twitter.com/klbeh4rF8G
— Vijay Mallya (@TheVijayMallya) June 26, 2018
... 2/5 pic.twitter.com/L6XEANlokY
— Vijay Mallya (@TheVijayMallya) June 26, 2018