ಪತ್ನಿ ಸಂತಸಕ್ಕಾಗಿ ಪ್ರಿಯಕರನೊಂದಿಗೆ ಮದುವೆ ಮಾಡಿಸಲು ಮುಂದಾದ ಪತಿ!

ಈ ಪ್ರೇಮಕಥೆಯನ್ನು ಕೇಳಿದ ಕೌನ್ಸಲರ್ ಆಶ್ಚರ್ಯಚಕಿತರಾದರು. ಪತ್ನಿ ಸಂತೋಷಕ್ಕಾಗಿ ಪತಿ ವಿಚ್ಛೇದನಕ್ಕೆ ಸಿದ್ಧವಾಗಿರುವ ಮೊದಲ ಪ್ರಕರಣ ಇದಾಗಿದ್ದು, ಇದರಿಂದಾಗಿ ಪತ್ನಿ ತನ್ನ ಪ್ರೇಮಿಯೊಂದಿಗೆ ಬದುಕಲು ಸಾಧ್ಯ ಎಂದು ಅವರು ಹೇಳುತ್ತಾರೆ.  

Last Updated : Nov 26, 2019, 12:21 PM IST
ಪತ್ನಿ ಸಂತಸಕ್ಕಾಗಿ ಪ್ರಿಯಕರನೊಂದಿಗೆ ಮದುವೆ ಮಾಡಿಸಲು ಮುಂದಾದ ಪತಿ! title=
Representational image

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬಂದಿದೆ. ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಮಡದಿಯ ಸಂತೋಷಕ್ಕಾಗಿ ವಿಚ್ಛೇದನ ನೀಡಲು ನಿರ್ಧರಿಸಿದ್ದರಿಂದ ಪತ್ನಿ ತನ್ನ ಪ್ರಿಯಕರನೊಂದಿಗೆ ಸಂತೋಷದ ಜೀವನ ಆನಂದಿಸಲು ದಾರಿ ಮಾಡಿಕೊಟ್ಟಿದ್ದಾರೆ.

ಈ ಕಥೆಯು ರಾಜಧಾನಿಯ ಕೋಲಾರ್ ಕ್ಷೇತ್ರದ ನಿವಾಸಿಗಳಾದ ರಾಜೇಶ್ ಮತ್ತು ಕಲ್ಪನಾ (ಕಾಲ್ಪನಿಕ ಹೆಸರು) ದಂಪತಿಗಳಿಗೆ ಸಂಬಂಧಿಸಿದ್ದಾಗಿದೆ. ಪತ್ನಿ ಕಲ್ಪನಾ ಫ್ಯಾಷನ್ ಡಿಸೈನರ್ ಮತ್ತು ಪತಿ ರಾಜೇಶ್ ಸಾಫ್ಟ್‌ವೇರ್ ಎಂಜಿನಿಯರ್. ಇಬ್ಬರೂ ಏಳು ವರ್ಷಗಳ ಹಿಂದೆ ವಿವಾಹವಾದರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಇದ್ದಕ್ಕಿದ್ದಂತೆ ಗಂಡ ಮತ್ತು ಹೆಂಡತಿಯ ನಡುವೆ 'ಆ ವ್ಯಕ್ತಿ' (ಕಲ್ಪನಾಳ ಮೊದಲ ಪ್ರೇಮಿ) ಬಂದರು. ಪ್ರೇಮಿಯಿಂದಾಗಿ, ಗಂಡ ಮತ್ತು ಹೆಂಡತಿಯ ನಡುವಿನ ಅಂತರ ಹೆಚ್ಚಾಯಿತು. ಮಹಿಳೆ ತನ್ನ ಪ್ರೇಮಿಯ ಸಲುವಾಗಿ ಮನೆ ಬಿಡಲು ಸಿದ್ಧಳಾಗಿದ್ದಳು. ಸದ್ಯ ಈ ಪ್ರಕರಣ ಕುಟುಂಬ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಕಲ್ಪನಾ ಮದುವೆಗೆ ಮುಂಚಿತವಾಗಿ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಪ್ರೇಮಿ ಮತ್ತೊಂದು ಜಾತಿಯವನು ಎಂಬ ಕಾರಣಕ್ಕೆ ಕಲ್ಪನಾಳ ತಂದೆ ಅಂತರ್ಜಾತಿ ಮದುವೆಗೆ ಒಪ್ಪದ ಕಾರಣ ಆಕೆಯ ಇಚ್ಛೆಗೆ ವಿರುದ್ಧವಾಗಿ ರಾಜೇಶ್ ಜೊತೆ ಮದುವೆ ಮಾಡಿದ್ದರು. ಕ್ರೇಜಿ ಪ್ರೇಮಿ ಇನ್ನೂ ಮದುವೆಯಾಗಿರಲಿಲ್ಲ. ಮದುವೆಯ ನಂತರವೂ ಕಲ್ಪನಾ ತನ್ನ ಪ್ರೇಮಿಯೊಂದಿಗೆ ಸಂಬಂಧ ಹೊಂದಿದ್ದಳು. 

ಗಂಡ ಮತ್ತು ಹೆಂಡತಿಯ ನಡುವಿನ ಅಂತರವನ್ನು ಕಡಿಮೆ ಮಾಡಲು ಅವರಿಬ್ಬರ ಕೌನ್ಸಲಿಂಗ್ ನಡೆಸಲಾಯಿತು, ಆದರೆ ಈ ವಿಷಯವು ಕಾರ್ಯರೂಪಕ್ಕೆ ಬರಲಿಲ್ಲ. ಎಲ್ಲಾ ಪ್ರಯತ್ನಗಳ ನಂತರವೂ ಕಲ್ಪನಾ ತನ್ನೊಂದಿಗೆ ಸಂತೋಷವಾಗಿಲ್ಲ ಎಂದು ಪತಿ ರಾಜೇಶ್ ಕೌನ್ಸಲರ್ ಗೆ ತಿಳಿಸಿದರು. ಅವಳು ತನ್ನ ಪ್ರೇಮಿಯನ್ನು ಹೆಚ್ಚು ಪ್ರೀತಿಸುತ್ತಾಳೆ, ಅವನನ್ನು ಮರೆಯಲು ಆಕೆಗೆ ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಕಲ್ಪನಾ ಕೂಡ ತನ್ನ ಮೊದಲ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಕೌನ್ಸೆಲಿಂಗ್ ಸಮಯದಲ್ಲಿ ಒಪ್ಪಿಕೊಂಡಳು. ನಾನು ನನ್ನ ಪ್ರೇಮಿಯೊಂದಿಗೆ ಇರಲು ಬಯಸುತ್ತೇನೆ. ಒಂದು ವೇಳೆ ರಾಜೇಶ್(ಪತಿ) ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಳ್ಳಲು ಒಪ್ಪದಿದ್ದರೆ, ಮಕ್ಕಳನ್ನೂ ತಮ್ಮೊಂದಿಗೆ ಇರಿಸಿಕೊಳ್ಳುವುದಾಗಿ ಆಕೆ ತಿಳಿಸಿದ್ದರು.

ಕುಟುಂಬ ನ್ಯಾಯಾಲಯದಲ್ಲಿ ರಾಜೇಶ್ ತನ್ನ ಹೆಂಡತಿ ಕಲ್ಪನಾಳ ಸಂತೋಷಕ್ಕಾಗಿ ಆಕೆ ತನ್ನ ಪ್ರೇಮಿಯೊಂದಿಗೆ ಮದುವೆಯಾಗಿ ಸುಖವಾಗಿರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕಾಗಿ ತೊಡಕಾಗಿದ್ದ ತಮ್ಮ ವೈವಾಹಿಕ ಬಂಧನದಿಂದ ಆಕೆಗೆ ಮುಕ್ತಿ ದೊರೆಯುವಂತೆ ಮಾಡಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಕುರಿತು ಪ್ರಸ್ತಾಪಿಸಿದರು. 

ಕೌನ್ಸಿಲರ್ ಶೈಲ್ ಅವಸ್ಥಿಯೂ ಈ ಪ್ರೇಮಕಥೆಯನ್ನು ಕೇಳಿ ಆಶ್ಚರ್ಯಚಕಿತರಾದರು. ಪತಿ  ವಿಚ್ಛೇದನಕ್ಕೆ ಸಿದ್ಧವಾಗಿರುವ ಮೊದಲ ಪ್ರಕರಣ ಇದಾಗಿದ್ದು, ಇದರಿಂದಾಗಿ ಪತ್ನಿ ತನ್ನ ಪ್ರೇಮಿಯೊಂದಿಗೆ ಬದುಕಲು ಸಾಧ್ಯ ಎಂದು ಅವರು ಹೇಳುತ್ತಾರೆ. ಒಳ್ಳೆಯ ಹೃದಯದ ಪತಿಯು ತನ್ನ ಮಕ್ಕಳು ಆಕೆಗೆ ಹೊರೆಯಾಗುವುದು ಬೇಡ ಎಂದು ತಿಳಿಸಿ ಇಬ್ಬರು ಮಕ್ಕಳನ್ನೂ ಕೂಡ ತಾನೇ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.

Trending News