ನವದೆಹಲಿ: ಇತ್ತೀಚಿಗೆ ಅರುಣಾಚಲ ಪ್ರದೇಶದ ಗಡಿ ಉಲ್ಲಂಘನೆ ಮಾಡಿದ್ದ ಚೀನಾದ ಸೈನಿಕರು ಡೋಕ್ಲಾಮ್ ಪ್ರದೇಶದಲ್ಲಿ ವ್ಯಾಪಕವಾಗಿ ಸೈನಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೋಮವಾರದಂದು ತಿಳಿಸಿದ್ದಾರೆ.
ದೊಕ್ಲಾಂ ವಿಚಾರವಾಗಿ ಎರಡು ದಿನಗಳ ಹಿಂದೆ ಸಭೆ ನಡೆದಿತ್ತು ಎಂದರು. ಅಲ್ಲದೆ ಸಿಕ್ಕಿಂ ವಲಯದ ಭಾರತ-ಚೀನಾ ಗಡಿಯಲ್ಲಿ ಸುಮಾರು 73 ದಿನಗಳ ಕಾಲ ಚೀನಾ ಮತ್ತು ಭಾರತದ ನಡುವೆ ಗಡಿಯ ವಿಚಾರವಾಗಿ ಶೀತಲ ಸಮರವೆರ್ಪಟ್ಟಿತ್ತು.
ಈಗ ಉಭಯದೇಶಗಳ ನಡುವೆ ಸಂಧಾನಕ್ಕಾಗಿ ಮಾತುಕತೆ ನಡೆದಿತ್ತು, ಅದರ ಭಾಗವಾಗಿ ಡೋಕ್ಲಾಮ್ ದಲ್ಲಿ ಚೀನಾದ ಸೈನಿಕರ ಉಪಸ್ತಿತಿ ಇಳಿಕೆಯಾಗಿದೆ. ಡಿಸೆಂಬರ್ 26 ರಂದು 2017 ಚೀನಾ ದೇಶವು ಇಂಡೋ-ಟಿಬೆಟಿಯನ್ ಗಡಿ ಪ್ರದೇಶದ ಹತ್ತಿರ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು ಆಗ ಭಾರತಿಯ ಸೈನಿಕರು ಅಲ್ಲಿನ ಕಾರ್ಮಿಕರನ್ನು ಹಿಂದಕ್ಕೆ ಕಳುಹಿಸಿ ಅಲ್ಲಿನ ಕಟ್ಟಡ ರಸ್ತೆ ನಿರ್ಮಾಣದ ಸಾಮಗ್ರಿಗಳನ್ನು ವಶಪಡಿಸಿಕೊಂಡಿತ್ತು.