COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಭಾರತದಲ್ಲಿ COVID-19 ವಿರುದ್ಧ ತುರ್ತು ಬಳಕೆಗಾಗಿ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಎಂಬ ಎರಡು ಲಸಿಕೆಗಳನ್ನು ಡಿಜಿಸಿಐ ಭಾನುವಾರ ಅನುಮೋದಿಸಿದೆ.

Written by - Yashaswini V | Last Updated : Jan 5, 2021, 02:57 PM IST
  • ಭಾರತದಲ್ಲಿ ಕೋವಿಡ್ 19 ವಿರುದ್ಧ ತುರ್ತು ಬಳಕೆಗಾಗಿ ಎರಡು ಲಸಿಕೆಗಳನ್ನು ಡಿಸಿಜಿಐ ಭಾನುವಾರ ಅನುಮೋದಿಸಿದೆ
  • ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡನ್ನೂ ಎರಡು ಡೋಸ್ ನೀಡಲಾಗುತ್ತದೆ
  • ಈ ಲಸಿಕೆಗಳನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬಹುದು
COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ title=
Covishield and Covaxin

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಭಾನುವಾರ (ಜನವರಿ 3) ಎರಡು ಲಸಿಕೆಗಳನ್ನು ಅನುಮೋದಿಸಿದೆ. ಭಾರತದಲ್ಲಿ ಕೋವಿಡ್ 19 ವಿರುದ್ಧದ ತುರ್ತು ಬಳಕೆಗಾಗಿ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಅನ್ನು ಅನುಮೋದಿಸಲಾಗಿದೆ.

ಡಿಜಿಸಿಐ ಪ್ರಕಾರ ಕೋವಿಶೀಲ್ಡ್ (Covishield) ಮತ್ತು ಕೊವಾಕ್ಸಿನ್ (Covaxin) ಎರಡನ್ನೂ ಎರಡು  ಡೋಸ್ ನೀಡಬೇಕಾಗಿದೆ ಮತ್ತು ಈ ಲಸಿಕೆಗಳನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬಹುದು. ಹೆಚ್ಚಿನ ಅಪಾಯದ ಗುಂಪುಗಳನ್ನು ಈಗಾಗಲೇ ಕೇಂದ್ರವು ಗುರುತಿಸಿದೆ ಮತ್ತು ಈ ಗುಂಪುಗಳ ಜನರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.

ಮೊದಲ ಗುಂಪಿನಲ್ಲಿ ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರು ಸೇರಿದ್ದರೆ, 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಮತ್ತು ಕೊಮೊರ್ಬಿಡಿಟಿ ಹೊಂದಿರುವ ವ್ಯಕ್ತಿಗಳನ್ನು ಎರಡನೇ ಗುಂಪಿನಲ್ಲಿ ಸೇರಿಸಲಾಗಿದೆ. ಈ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.

ಇದನ್ನೂ ಓದಿ : ಮೊದಲ ಡೋಸ್ Vaccine ಬಳಿಕ ಎರಡನೇ ಡೋಸ್ ಹಾಕುವ ಹೊತ್ತಿಗೆ ಸ್ಟಾಕ್ ಕೊನೆಗೊಂಡರೆ, ಮುಂದೆ?

ಗಮನಾರ್ಹವಾಗಿ ಕೋವಿಡ್ 19 ಲಸಿಕೆ (Covid 19 Vaccine) ಪಡೆಯಲು ನೋಂದಣಿ ಕಡ್ಡಾಯವಾಗಿದೆ. ಒಮ್ಮೆ ನೀವು ನಿಮ್ಮನ್ನು ನೋಂದಾಯಿಸಿಕೊಂಡರೆ ನೀವು ಸೆಷನ್ ಸೈಟ್ ಮತ್ತು ಸಮಯದ ಮಾಹಿತಿಯನ್ನು ಸ್ವೀಕರಿಸುತ್ತೀರಿ. ಸೆಷನ್ ಸೈಟ್ ನಲ್ಲಿ ನೋಂದಣಿ ಮತ್ತು ಪರಿಶೀಲನೆ ಎರಡಕ್ಕೂ ಫೋಟೋ ಐಡಿ ಕಡ್ಡಾಯವಾಗಿದೆ.

ಆನ್‌ಲೈನ್ ನೋಂದಣಿಯ ನಂತರ ನಿಗದಿತ ದಿನಾಂಕ, ಸ್ಥಳ ಮತ್ತು ವ್ಯಾಕ್ಸಿನೇಷನ್ ಸಮಯದ ಬಗ್ಗೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ನೀವು SMS ಸ್ವೀಕರಿಸುತ್ತೀರಿ.

ಕರೋನಾ ಲಸಿಕೆಯ ಸರಿಯಾದ ಪ್ರಮಾಣವನ್ನು ಪಡೆದ ನಂತರ ಫಲಾನುಭವಿಯು ಅವನ / ಅವಳ ಮೊಬೈಲ್ ಸಂಖ್ಯೆಯಲ್ಲಿ SMS ಸ್ವೀಕರಿಸುತ್ತಾರೆ. ಎಲ್ಲಾ ಪ್ರಮಾಣದ ಲಸಿಕೆಗಳ ಆಡಳಿತದ ನಂತರ ಕ್ಯೂಆರ್ ಕೋಡ್ ಆಧಾರಿತ ಪ್ರಮಾಣಪತ್ರವನ್ನು ಫಲಾನುಭವಿಯೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಇದನ್ನೂ ಓದಿ : BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO

ಅರ್ಹ ಫಲಾನುಭವಿಗಳ ನೋಂದಣಿಗೆ ಅಗತ್ಯವಾದ ದಾಖಲೆಗಳು:

ನೋಂದಣಿ ಸಮಯದಲ್ಲಿ ನೀವು ಫೋಟೋದೊಂದಿಗೆ ಕೆಳಗೆ ತಿಳಿಸಿದ ಯಾವುದೇ ID ಯನ್ನು ತೋರಿಸಬಹುದು:

- ಆಧಾರ್ / ಚಾಲನಾ ಪರವಾನಗಿ (Driving license)/ ಮತದಾರರ ಗುರುತಿನ ಚೀಟಿ / ಪಾನ್ ಕಾರ್ಡ್ / ಪಾಸ್‌ಪೋರ್ಟ್ / ಜಾಬ್ ಕಾರ್ಡ್ / ಪಿಂಚಣಿ ದಾಖಲೆ
- ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA)
- ಸಂಸದರು / ಶಾಸಕರು / ಎಂಎಲ್‌ಸಿಗಳಿಗೆ ಅಧಿಕೃತ ಗುರುತಿನ ಚೀಟಿ ನೀಡಲಾಗುತ್ತದೆ
- ಬ್ಯಾಂಕ್ / ಅಂಚೆ ಕಚೇರಿ ನೀಡುವ ಪಾಸ್‌ಬುಕ್‌ಗಳು
- ಕೇಂದ್ರ / ರಾಜ್ಯ ಸರ್ಕಾರ / ಸಾರ್ವಜನಿಕ ಲಿಮಿಟೆಡ್ ಕಂಪನಿಗಳು ನೀಡುವ ಸೇವಾ ಗುರುತಿನ ಚೀಟಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News