ಮನೆಯಲ್ಲಿಯೇ ಕುಳಿತು PM ಕಿಸಾನ್ ಸಮ್ಮಾನ್ ನಿಧಿ ಯೋಜನೆ 2020ರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸುವುದು ಹೇಗೆ?

ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಇರುವ ಕೋಟ್ಯಂತರ ರೈತರಿಗಾಗಿ ಅನೇಕ ಪ್ರಯೋಜನ ನೀಡುವ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಗಳಲ್ಲಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದು ಮಹತ್ವದ ಯೋಜನೆಯಾಗಿದೆ.

Last Updated : Apr 29, 2020, 12:04 PM IST
ಮನೆಯಲ್ಲಿಯೇ ಕುಳಿತು PM ಕಿಸಾನ್ ಸಮ್ಮಾನ್ ನಿಧಿ ಯೋಜನೆ 2020ರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸುವುದು ಹೇಗೆ? title=

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಇರುವ ಕೋಟ್ಯಂತರ ರೈತರಿಗಾಗಿ ಅನೇಕ ಪ್ರಯೋಜನ ನೀಡುವ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಗಳಲ್ಲಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದು ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿ ಸರ್ಕಾರ ಪ್ರತಿ ವರ್ಷ 6000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ರೈತರ ಖಾತೆಗೆ ಸೇರಿಸಲಾಗುತ್ತದೆ.

ಒಂದು ವೇಳೆ ಈ ಯೋಜನೆಯ ಲಾಭ ಪಡೆಯಲು ನೀವೂ ಕೂಡ ಅರ್ಜಿ ಸಲ್ಲಿಸಿದ್ದರೆ ಮತ್ತು ಈಗ ನೀವು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಲು ಬಯಸೀದ್ದಲ್ಲಿ, ನಿಮಗಾಗಿ, ಸರ್ಕಾರ ಈಗ ಈ ಸೌಲಭ್ಯವನ್ನು ಆನ್‌ಲೈನ್‌ನಲ್ಲಿಯೂ ಒದಗಿಸಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2020 ರ ಹೊಸ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ pmkisan.gov.in ನಲ್ಲಿ ಪ್ರಕಟಿಸಲಾಗಿದ್ದು, ಅಲ್ಲಿಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಹೆಸರನ್ನು ಪರಿಶೀಲಿಸಬಹುದು.

ಒಂದು ವೇಳೆ ನೀವು ಸಲ್ಲಿಸಲಾಗಿರುವ ಅರ್ಜಿ ಯಾವುದೇ ಒಂದು ದಾಖಲೆಯ (ಅಂದರೆ ಆಧಾರ್, ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆ) ಕಾರಣ ನಿಂತು ಹೋಗಿದ್ದರೆ, ಅದನ್ನೂ ಕೂಡ ನೀವು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ. ಒಂದು ವೇಳೆ ನೀವೂ ಕೂಡ ಕೃಷಿಕರಾಗಿದ್ದು, ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದ್ದರೆ, ಈ ವೆಬ್ಸೈಟ್ ಸಹಾಯದಿಂದ ನೀವೂ ಕೂಡ ನಿಮ್ಮ ನೋಂದಣಿಯನ್ನು ಮಾಡಿ ಈ ಪಟ್ಟಿಗೆ ನಿಮ್ಮ ಹೆಸರನ್ನು ಸೇರಿಸಿಕೊಳ್ಳಬಹುದಾಗಿದೆ.

'ಫಾರ್ಮರ್ ಕಾರ್ನರ್' ಟ್ಯಾಬ್ ಅಡಿ ಹಲವು ಸೌಲಭ್ಯಗಳನ್ನು ನೀಡಲಾಗಿದೆ
ಇದಕ್ಕಾಗಿ ರೈತರು ಮೊದಲು pmkisan.gov.in ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು. ಬಳಿಕ ಅದರಲ್ಲಿ ನೀಡಲಾದ "ಫಾರ್ಮರ್ ಕಾರ್ನರ್" ಟ್ಯಾಬ್‌ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಈ ಟ್ಯಾಬ್‌ ಅಡಿ ರೈತರಿಗೆ ಪಿಎಂ ಕಿಸಾನ್ ಯೋಜನೆಯಲ್ಲಿ  ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಒಂದು ವೇಳೆ ನೀವು ಮೊದಲೇ ಅರ್ಜಿ ಸಲ್ಲಿಸಿದ್ದರೆ ಮತ್ತು ನಿಮ್ಮ ಆಧಾರ್ ಅನ್ನು ಸರಿಯಾಗಿ ಅಪ್‌ಲೋಡ್ ಮಾಡದೆ ಇದ್ದಲ್ಲಿ ಅಥವಾ ಕೆಲವು ಕಾರಣಗಳಿಂದಾಗಿ ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದ್ದಲ್ಲಿ . ಅದರ ಮಾಹಿತಿಯೂ ಕೂಡ ಇಲ್ಲಿ ಪರಿಶೀಲಿಸಬಹುದು.

ಈ ಯೋಜನೆಯ ಲಾಭವನ್ನು ಪಡೆದ ರೈತರ ಹೆಸರನ್ನು ರಾಜ್ಯ / ಜಿಲ್ಲಾವಾರು / ತಹಸಿಲ್ / ಗ್ರಾಮಗಳ ಆಧಾರದ ಮೇಲೆ ಇಲ್ಲಿ ಕಾಣಬಹುದು. ಇದರಲ್ಲಿ ಸರ್ಕಾರ ಎಲ್ಲಾ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಅಪ್‌ಲೋಡ್ ಮಾಡಿದೆ. ಇದು ಮಾತ್ರವಲ್ಲ, ನಿಮ್ಮ ಅಪ್ಲಿಕೇಶನ್‌ನ ಸ್ಥಿತಿ ಏನು? ಎಂಬುದನ್ನೂ ಕೂಡ ಪತ್ತೆ ಹಚ್ಚಬಹುದು, ರೈತರು ಆಧಾರ್ ಸಂಖ್ಯೆ / ಬ್ಯಾಂಕ್ ಖಾತೆ / ಮೊಬೈಲ್ ಸಂಖ್ಯೆ ಮೂಲಕವೂ ಈ ಬಗ್ಗೆ ತಿಳಿದುಕೊಳ್ಳಬಹುದು. ಇದಲ್ಲದೆ, ಪಿಎಂ ಕಿಸಾನ್ ಯೋಜನೆಯ ಬಗ್ಗೆ ಒಂದು ವೇಳೆ ನೀವು ಹೆಚ್ಚಿನ ಮಾಹಿತಿ ಪಡೆಯಲು ಬಯಸಿದ್ದಲ್ಲಿ ಅದಕ್ಕಾಗಿಯೂ ಕೂಡ ಇಲ್ಲಿ ಲಿಂಕ್ ನೀಡಲಾಗಿದೆ. ಈ ಲಿಂಕ್ ಬಳಸಿ ನೀವು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

Trending News