ನವದೆಹಲಿ: Pradhan Mantri Ujjwala Yojana ಅಡಿ ನೀವೂ ನಿಮ್ಮ ಹೆಸರನ್ನು ನೊಂದಾಯಿಸಲು ಬಯಸುತ್ತೀರಾ? ಹಾಗೆ ನೋಡಿದರೆ ಸರ್ಕಾರದ ಯಾವುದೇ ಯೋಜನೆಯಡಿ ಹೆಸರು ನೋಂದಣಿ ಮಾಡುವುದು ತುಂಬಾ ಸುಲಭವಾಗಿದೆ. ಹಾಗಾದರೆ ಬನ್ನಿ ಉಚಿತವಾಗಿ ನೀಡಲಾಗುವ LPG ಸಿಲಿಂಡರ್ ಲಾಭ ಹೇಗೆ ಪಡೆಯಬೇಕು ಎಂಬುದನ್ನು ತಿಳಿಯೋಣ ಬನ್ನಿ.
ಸುಲಭವಾಗಿದೆ ಪ್ರಕ್ರಿಯೆ
ಉಜ್ವಲಾ ಯೋಜನೆಗೆ ಹೆಸರು ನೋಂದಣಿ ಪ್ರಕ್ರಿಯೆ ತುಂಬಾ ಸುಲಭವಾಗಿದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಅಡಿ ಗ್ಯಾಸ್ ಕನೆಕ್ಷನ್ ಪಡೆಯಲು BPL ಕುಟುಂಬದ ಯಾವುದೇ ಮಹಿಳೆ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಸ್ವತಃ ಈ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ ನೋಂದಣಿ ಕೆಲಸ ಮಾಡಬಹುದಾಗಿದೆ.
ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆಗೆ ಬೇಕಾಗುವ ದಾಖಲೆಗಳು
ಬಿಪಿಎಲ್ ಕಾರ್ಡ್,
ಆಧಾರ್ ಕಾರ್ಡ್,
ಮೊಬೈಲ್ ಸಂಖ್ಯೆ
ಪಾಸ್ಪೋರ್ಟ್ ಸೈಜ್ ಭಾವಚಿತ್ರ
ವಯಸ್ಸಿನ ಪ್ರಮಾಣಪತ್ರ
ಬಿಪಿಎಲ್ ಪಟ್ಟಿಯಲ್ಲಿ ನಿಮ್ಮ ಹೆಸರು
ಬ್ಯಾಂಕ್ ಖಾತೆಯ ಫೋಟೋ ಕಾಪಿ
ರೇಶನ್ ಕಾರ್ಡ್ ಫೋಟೋ ಕಾಪಿ
ಉಜ್ವಲಾ ಯೋಜನೆಯ ಷರತ್ತುಗಳು
ಅರ್ಜಿ ಸಲ್ಲಿಸುವ ವ್ಯಕ್ತಿ ಓರ್ವ ಮಹಿಳೆಯಾಗಿರಬೇಕು
ಮಹಿಳೆಯ ವಯಸ್ಸು 18 ವರ್ಷಕ್ಕಿಂತ ಹೆಚ್ಚಾಗಿರಬೇಕು.
ಮಹಿಳೆ ಬಿಪಿಎಲ್ ಕುಟುಂಬಕ್ಕೆ ಸೇರಿರಬೇಕು.
ಮಹಿಳಾ ಅರ್ಜಿದಾರರ ಬಳಿ ಬಿಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಪಡಿತರ ಚೀಟಿ ಇರಬೇಕು.
ಅರ್ಜಿದಾರರ ಹೆಸರು ಅಥವಾ ಕುಟುಂಬದ ಯಾವುದೇ ಸದಸ್ಯನ ಹೆಸರು ಮೊದಲಿನಿಂದಲೇ LPG ಕನೆಕ್ಷನ್ ಪಟ್ಟಿಯಲ್ಲಿ ಇರಬಾರದು.
ಹೇಗೆ ಅರ್ಜಿ ಸಲ್ಲಿಸಬೇಕು?
ಮೊದಲು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
ನಿಮ್ಮ ಮುಂದೆ ತೆರೆದುಕೊಳ್ಳುವ ಹೋಂ ಪೇಜ್ ನಲ್ಲಿ ನಿಮಗೆ ಡೌನ್ ಲೋಡ್ ಫಾರ್ಮ್ಆಪ್ಶನ್ ಕಾಣಿಸಿಕೊಳ್ಳಲಿದೆ. ಅದನ್ನು ಬಳಸಿ ಅರ್ಜಿಯನ್ನು ಡೌನ್ ಲೋಡ್ ಮಾಡಿ.
ಅರ್ಜಿ ಡೌನ್ ಲೋಡ್ ಮಾಡಿದ ಬಳಿಕ, ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ನಿಮ್ಮ ಹತ್ತಿರದಲ್ಲಿರುವ LPG ಕೇಂದ್ರಕ್ಕೆ ಭೇಟಿ ನೀಡಿ ಸಲ್ಲಿಸಿ.
ಜೊತೆಗೆ ಕೇಳಲಾಗಿರುವ ಎಲ್ಲ ದಾಖಲೆಗಳನ್ನು ನೀಡಿ.
ದಾಖಲೆಗಳ ವೆರಿಫಿಕೆಶನ್ ಬಳಿಕ ನಿಮಗೆ LPG ಬ್ಯಾಸ್ ಕನೆಕ್ಷನ್ ಸಿಗಲಿದೆ.
ಯಾರಿಗೆ ಈ ಕನೆಕ್ಷನ್ ನೀಡಲಾಗುತ್ತದೆ?
ಪ್ರಧಾನಿ ಉಜ್ವಾಲಾ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಒದಗಿದಲಾಗುತ್ತದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಯೋಜನೆಯನ್ನು ನಡೆಸುತ್ತಿದೆ. 2011 ರ ಜನಗಣತಿಯಲ್ಲಿರುವ ಬಿಪಿಎಲ್ ಕುಟುಂಬಗಳು ಉಜ್ವಾಲಾ ಯೋಜನೆಯ ಲಾಭವನ್ನು ಪಡೆಯುತ್ತಿವೆ. ಇಂತಹ ಸುಮಾರು 8 ಕೋಟಿ ಕುಟುಂಬಗಳು ಇದರಿಂದ ಪ್ರಯೋಜನ ಪಡೆದಿವೆ. ಪಿಎಂಯುವೈ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 1 ಮೇ 2016 ರಂದು ಪ್ರಾರಂಭಿಸಿದ್ದರು.