ನಮ್ಮ ರಾಜ್ಯದ ಸಂಸದರು ಎಷ್ಟು ಕ್ರಿಯಾಶೀಲರು ಎನ್ನುವುದನ್ನು ತಿಳಿಯಬೇಕೆ? ಇಲ್ಲಿ ನೋಡಿ

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ನಿಮ್ಮ ಕ್ಷೇತ್ರದ ಸಂಸದರು ಸದನದಲ್ಲಿ ಎಷ್ಟು ಕ್ರಿಯಾಶೀಲರಾಗಿದ್ದರು ಎನ್ನುವದರ ಕುರಿತ ಮಾಹಿತಿಯನ್ನು ಆಸೋಶಿಯನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ (ADR) ಸಂಸ್ಥೆ ತನ್ನ ವರದಿಯಲ್ಲಿ ಪ್ರಕಟಿಸಿದೆ.

Last Updated : Mar 28, 2019, 02:20 PM IST
ನಮ್ಮ ರಾಜ್ಯದ ಸಂಸದರು ಎಷ್ಟು ಕ್ರಿಯಾಶೀಲರು ಎನ್ನುವುದನ್ನು ತಿಳಿಯಬೇಕೆ? ಇಲ್ಲಿ ನೋಡಿ   title=

ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ನಿಮ್ಮ ಕ್ಷೇತ್ರದ ಸಂಸದರು ಸದನದಲ್ಲಿ ಎಷ್ಟು ಕ್ರಿಯಾಶೀಲರಾಗಿದ್ದರು ಎನ್ನುವದರ ಕುರಿತ ಮಾಹಿತಿಯನ್ನು ಆಸೋಶಿಯನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ (ADR) ಸಂಸ್ಥೆ ತನ್ನ ವರದಿಯಲ್ಲಿ ಪ್ರಕಟಿಸಿದೆ.

ರಾಜ್ಯವಾರು ಸಂಸದರ ಸದನದೊಳಗಿನ ಕಾರ್ಯಚಟುವಟಿಕೆಗಳ ಕುರಿತಾಗಿ "16th Lok Sabha Analysis of Performance of MPs"  ಎನ್ನುವ ವರದಿ ಗಮನ ಸೆಳೆದಿದೆ. ಇದರಲ್ಲಿ ಪ್ರಮುಖವಾಗಿ ಕ್ಷೇತ್ರವಾರು ಸಂಸದರ ಸದನದ ಹಾಜರಾತಿ ಹಾಗೂ ಸಂಸತ್ತಿನ ಐದು ವರ್ಷಗಳ ಅವಧಿಯಲ್ಲಿ ಅವರು ಕೇಳಿರುವ ಪ್ರಶ್ನೆಗಳ ಸಂಖ್ಯೆಯ ಬಗ್ಗೆ ವರದಿ ಸಂಕ್ಷಿಪ್ತ ಮಾಹಿತಿ ನೀಡಿದೆ.

ಸಂಸತ್ತಿನಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ ರಾಜ್ಯ ಸಂಸದರು: 

1) ಶೋಭಾ ಕರಂದ್ಲಾಜೆ- ಚಿಕ್ಕಮಗಳೂರು -ಬಿಜೆಪಿ -731

2) ಬಿ.ವಿ.ನಾಯಕ-ರಾಯಚೂರು-ಕಾಂಗ್ರೆಸ್ -688

3)ನಳಿನ್ ಕುಮಾರ್ ಕಟೀಲ್ -ದಕ್ಷಿಣ ಕನ್ನಡ -ಬಿಜೆಪಿ -685

4)ಪ್ರತಾಪ್ ಸಿಂಹ್-ಮೈಸೂರು-ಬಿಜೆಪಿ- 680

5) ಆರ್.ಧ್ರುವನಾರಾಯಣ್- ಚಾಮರಾಜನಗರ -ಕಾಂಗ್ರೆಸ್-650

6) ಡಿ.ಕೆ.ಸುರೇಶ-ಬೆಂಗಳೂರು ಗ್ರಾಮಾಂತರ-ಕಾಂಗ್ರೆಸ್ -647 

7) ಎಸ್.ಪಿ.ಮುದ್ದುಹನುಮೇಗೌಡ-ತುಮಕೂರು-ಕಾಂಗ್ರೆಸ್- 640

8) ಶಿವಕುಮಾರ್ ಉದಾಸಿ-ಹಾವೇರಿ-ಬಿಜೆಪಿ-460

9) ಪ್ರಹ್ಲಾದ ಜೋಷಿ -ಧಾರವಾಡ-ಬಿಜೆಪಿ-451

10) ಬಿ.ಎನ್.ಚಂದ್ರಪ್ಪ- ಚಿತ್ರದುರ್ಗ-ಕಾಂಗ್ರೆಸ್-336

ಸಂಸತ್ತಿನಲ್ಲಿ ಅತಿ ಕನಿಷ್ಠ ಪ್ರಶ್ನೆ ಕೇಳಿರುವ ರಾಜ್ಯದ ಸಂಸದರು: 

1) ಡಿ.ವಿ ಸದಾನಂದಗೌಡ-ಬೆಂಗಳೂರು ಉತ್ತರ-ಬಿಜೆಪಿ-0

2) ಎಚ್.ಡಿ.ದೇವೇಗೌಡ-ಹಾಸನ-ಜೆಡಿಎಸ್-0

3) ಕೆ.ಎಚ್.ಮುನಿಯಪ್ಪ-ಕೋಲಾರ್ -ಕಾಂಗ್ರೆಸ್-0

4) ವಿ.ಎಸ್.ಉಗ್ರಪ್ಪ-ಬಳ್ಳಾರಿ-ಕಾಂಗ್ರೆಸ್-0

5) ರಮೇಶ್ ಜಿಗಜಿಣಗಿ-ಬಿಜಾಪುರ್-ಬಿಜೆಪಿ-1 

6) ಪ್ರಕಾಶ ಹುಕ್ಕೇರಿ -ಚಿಕ್ಕೋಡಿ-ಕಾಂಗ್ರೆಸ್-3

Trending News