ಭಾರತ-ಪಾಕ್ ಪಂದ್ಯದ ನಡುವೆ ರಮ್ಯಾ ಬಂದದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಟ್ವೀಟ್ ವಾರ್

ಬುಧವಾರದಂದು ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಕೇದಾರ್ ಜಾಧವ್ ಪಾಕಿಸ್ತಾನ ತಂಡದ ಮೂರು ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡವನ್ನು 162 ರನ್ಗಳಿಗೆ ಕಟ್ಟಿಹಾಕಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

Last Updated : Sep 21, 2018, 12:43 PM IST
ಭಾರತ-ಪಾಕ್ ಪಂದ್ಯದ ನಡುವೆ ರಮ್ಯಾ ಬಂದದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಟ್ವೀಟ್ ವಾರ್ title=

ನವದೆಹಲಿ: ಬುಧವಾರದಂದು ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಕೇದಾರ್ ಜಾಧವ್ ಪಾಕಿಸ್ತಾನ ತಂಡದ ಮೂರು ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡವನ್ನು 162 ರನ್ಗಳಿಗೆ ಕಟ್ಟಿಹಾಕಿ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಕ್ರಿಕೆಟ್ ವಾರ್ ಮುಗಿದ ನಂತರ ಕ್ರೀಡಾಂಗಣದಲ್ಲಿನ ಪ್ರದರ್ಶನ ಈಗ ರಾಜಕೀಯಕ್ಕೆ ಕಾಲಿಟ್ಟಿದೆ.ಅಷ್ಟಕ್ಕೂ ಏನಂತೀರಾ ಈ ವಾರ್. ಕೇದಾರ್ ಜಾದವ್ ಅವರ ಬೌಲಿಂಗ್ ಪ್ರದರ್ಶನವನ್ನು ಕಾಂಗ್ರೆಸ್ ನ ಸೋಶಿಯಲ್ ಮಿಡಿಯಾ ಮುಖ್ಯಸ್ಥೆ  ರಮ್ಯಾ ಪ್ರಸ್ತಾಪಿಸುತ್ತಾ" ಕೇದಾರ್ ಜಾದವ್ ಅವರ ಬೌಲಿಂಗ್ ವೇಗ ತುಂಬಾ ಕಡಿಮೆ ಇದೆ,ಆದರೆ ರೂಪಾಯಿ  ಮೌಲ್ಯದಷ್ಟು ಕಡಿಮೆ ಏನು ಇಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ತಕ್ಷಣ ಟ್ವೀಟ್ ಮೂಲಕ  ಪ್ರತಿಕ್ರಿಯೆ ನೀಡಿರುವ ಬಿಜೆಪಿ" ಕೇದಾರ್ ಬೌಲಿಂಗ್ ವೇಗದ ಬಗ್ಗೆ  ಅಷ್ಟು ಖಚಿತತೆ ಇಲ್ಲ ಆದರೆ ನಿಮ್ಮ ಐಕ್ಯೂ ಇಡೀ ಪಾಕಿಸ್ತಾನದ ತಂಡದ ಪ್ರದರ್ಶನಕ್ಕಿಂತ ಕಡಿಮೆ ಇದೆ ಎಂದು ಟ್ವೀಟ್ ಮಾಡಿದೆ. ಈ ಹಿಂದೆ  ರವಿಂದ್ರ ಜಡೇಜಾ 86 ರನ್ ಗಳಿಸಿದಾಗ ಎರಡನೇ ಅತ್ಯುತ್ತಮ ಸ್ಕೋರರ್. ಆದರೆ ಪೆಟ್ರೋಲ್ 87 ರ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಅವರು ವ್ಯಂಗವಾಡಿದ್ದರು. 

 

Trending News