Honda ಎಬಿಎಸ್ ಎಕ್ಸ್-ಬ್ಲೇಡ್ ಬೈಕ್ ಬಿಡುಗಡೆ; ವೈಶಿಷ್ಟ್ಯತೆಗಳೇನು ಗೊತ್ತೇ?

ಹೋಂಡಾ ಇಕೊ ಟೆಕ್ನಾಲಜಿ (ಎಚ್‌ಇಟಿ) ಪ್ರೇರಿತ 162.71 ಸಿಸಿ ಸಾಮರ್ಥ್ಯದ ಏರ್‌ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್‌-ಬ್ಲೇಡ್ ಬೈಕ್‌ 13.93ಬಿಎಚ್‌ಪಿ ಮತ್ತು 13.9ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 

Last Updated : Dec 8, 2018, 06:48 PM IST
Honda ಎಬಿಎಸ್ ಎಕ್ಸ್-ಬ್ಲೇಡ್ ಬೈಕ್ ಬಿಡುಗಡೆ; ವೈಶಿಷ್ಟ್ಯತೆಗಳೇನು ಗೊತ್ತೇ? title=

ನವದೆಹಲಿ: ದೇಶದ ಪ್ರತಿಷ್ಟಿತ ವಾಹನ ತಯಾರಿಕಾ ಕಂಪನಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತನ್ನ ನೂತನ ಪವರ್ ಪುಲ್ ಸ್ಪೋರ್ಟ್ಸ್ ಬೈಕ್ ಎಬಿಎಸ್ ಎಕ್ಸ್-ಬ್ಲೇಡ್(X-Blade ABS) ಅನ್ನು ಬಿಡುಗಡೆ ಮಾಡಿದೆ. ಮೇಟ್ ಮಾರ್ವೆಲ್ ಬ್ಯೂ ಮೆಟಾಲಿಕ್, ಪರ್ಲ ಇಗ್ನಿಯಸ್ ಬ್ಲ್ಯಾಕ್, ಮ್ಯಾಟೆ ಫ್ರೊಜೊನ್ ಸಿಲ್ವರ್, ಪರ್ಲ್ ಸ್ಪ್ಯಾರ್ಟನ್ ರೆಡ್, ಮ್ಯಾಟೆ ಮಾರ್ಷಲ್ ಗ್ರಿನ್ ಮೆಟಾಲಿಕ್ ಬಣ್ಣಗಳಲ್ಲಿ ಎಕ್ಸ್-ಬ್ಲೇಡ್ ಬೈಕ್ ಖರೀದಿಗೆ ಲಭ್ಯವಿದ್ದು, ದೆಹಲಿಯ ಎಕ್ಸ್ ಷೋರೂಂ ಬೆಲೆ 87,776 ರೂ.ಗಳಾಗಿವೆ.

ನೂತನ ಬೈಕ್ ಬಿಡುಗಡೆ ಮಾಡಿ ಮಾತನಾಡಿದ ಕಂಪನಿ ಸಿಇಒ ಮಿನೋರು ಕಾಟೋ, ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು 150 ರಿಂದ 180 ಸಿಸಿ ಬೈಕ್ ಸೆಗ್ಮೆಂಟ್'ನಲ್ಲಿ ಉತ್ತಮವಾದ X-Blade ಬೈಕನ್ನು ತಯಾರಿಸಲಾಗಿದೆ. ಅಷ್ಟೇ ಅಲ್ಲ, ಆಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸದೊಂದಿಗೆ ಬೈಕ್ ಅನ್ನು ಪ್ರಸ್ತುತಪಡಿಸಲಾಗಿದೆ ಎಂದಿದ್ದಾರೆ. 

ಆಧುನಿಕ ಉತ್ಪನ್ನಗಳು ಮತ್ತು ಅತ್ಯುತ್ತಮ ವಿನ್ಯಾಸಗಳೊಂದಿಗೆ ಭಾರತದಲ್ಲಿ ದ್ವಿಚಕ್ರ ವಾಹನಗಳ ಚಾಲನಾ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು  ಹೋಂಡಾ ಸಿಇಒ ಹೇಳಿದ್ದಾರೆ. ಹೊಸ ಎಬಿಎಸ್ ಆಧಾರಿತ ಎಕ್ಸ್-ಬ್ಲೇಡ್ ಬೆಕ್ ಉತ್ತಮ ಬ್ರೇಕಿಂಗ್ ಸಿಸ್ಟಂ ಮಾತ್ರವಲ್ಲದೆ, ಅಂಡರ್ ಕೌಲ್, ಫ್ರಂಟ್ ಫೋರ್ಕ್ಸ್ ಕವರ್ ಮತ್ತು ವ್ಹೀಲ್ ರಿಮ್ ಸ್ಟ್ರಿಪ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ನೂತನ ಗ್ರಾಫಿಕ್ಸ್ ವಿನ್ಯಾಸಗಳು, ಗೇರ್ ಶಿಫ್ಟರ್, ಯೂನಿಕ್ ವಿಭಜಿತ ಗ್ರಾಬ್ ರೈಲ್ ಮತ್ತು ಸ್ಟೈಲಿಷ್ ಅಲಾಯ್ ಚಕ್ರಗಳು ಎಕ್ಸ್-ಬ್ಲೇಡ್‌ನಲ್ಲಿ ಬೈಕಿಗೆ ಸ್ಪೋರ್ಟಿ ಲುಕ್ ನೀಡಿದೆ. ಅಷ್ಟೇ ಅಲ್ಲದೆ, ಹೋಂಡಾ ಇಕೊ ಟೆಕ್ನಾಲಜಿ (ಎಚ್‌ಇಟಿ) ಪ್ರೇರಿತ 162.71 ಸಿಸಿ ಸಾಮರ್ಥ್ಯದ ಏರ್‌ಕೂಲ್ಡ್ ಎಂಜಿನ್ ಹೊಂದಿರುವ ಎಕ್ಸ್‌-ಬ್ಲೇಡ್ ಬೈಕ್‌ 13.93ಬಿಎಚ್‌ಪಿ ಮತ್ತು 13.9ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 

ಆಲ್ ನ್ಯೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ಯೂಬ್‌ಲೆಸ್ ಚಕ್ರಗಳು ಮತ್ತು ಗೇರ್ ಪೊಜಿಷನ್ ಇಂಡಿಕೇಟರ್‌ಗಳು, 5-ಸ್ಪೀಡ್ ಗೇರ್‌ಬಾಕ್ಸ್ ಇರುವ ಈ ಬೈಕ್ ಫ್ರಂಟ್ ಡಿಸ್ಕ್ ಬ್ರೇಕ್ ಹೊಂದಿದೆ.

ಒಟ್ಟಾರೆ, ಆಧುನಿಕ, ಅತ್ಯಾಕರ್ಷಕ ವಿನ್ಯಾಸ, ಫ್ಯೂಚರಿಸ್ಟಿಕ್ ಎಲ್‌ಇಡಿ ಹೆಡ್‌ಲೈಟ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಸ್ಪೋರ್ಟಿ ಡ್ಯುಯಲ್ ಔಟ್ಲೆಟ್ ಸೌಲಭ್ಯ ಹೊಂದಿರುವ ಎಬಿಎಸ್ ಎಕ್ಸ್-ಬ್ಲೇಡ್ ಬೈಕ್ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಾವುದೇ ಅನುಮಾನವಿಲ್ಲ.
 

Trending News