3 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ತಲುಪಿದ ಸರ್ಕಾರಿ ಉದ್ಯೋಗಗಳ ನೇಮಕಾತಿ

ಸರ್ಕಾರಿ ಉದ್ಯೋಗಗಳಿಗೆ ನೇಮಕವು 2020-21ರ ಹಣಕಾಸು ವರ್ಷದಲ್ಲಿ (ಎಫ್‌ವೈ 21)  ಮೂರು ವರ್ಷಗಳಲ್ಲಿ ಕನಿಷ್ಠ ಮಟ್ಟವನ್ನು ತಲುಪಿದೆ.

Last Updated : May 26, 2021, 07:19 AM IST
3 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ತಲುಪಿದ ಸರ್ಕಾರಿ ಉದ್ಯೋಗಗಳ ನೇಮಕಾತಿ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಸರ್ಕಾರಿ ಉದ್ಯೋಗಗಳಿಗೆ ನೇಮಕವು 2020-21ರ ಹಣಕಾಸು ವರ್ಷದಲ್ಲಿ (ಎಫ್‌ವೈ 21)  ಮೂರು ವರ್ಷಗಳಲ್ಲಿ ಕನಿಷ್ಠ ಮಟ್ಟವನ್ನು ತಲುಪಿದೆ.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು 27% ರಷ್ಟು ಕಡಿಮೆ ಜನರನ್ನು ನೇಮಿಸಿಕೊಂಡರೆ, ರಾಜ್ಯಗಳು 21% ರಷ್ಟು ಕಡಿಮೆ ಜನರನ್ನು ನೇಮಿಸಿಕೊಂಡಿವೆ ಎಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್) ವೇತನದಾರರ ಅಂಕಿ ಅಂಶಗಳು ಹೇಳುತ್ತಿವೆ.ಹಣಕಾಸು ವರ್ಷ- 20 ರಲ್ಲಿ ಕೇಂದ್ರ ಸರ್ಕಾರವು ಸುಮಾರು 119,000 ಜನರನ್ನು ಶಾಶ್ವತ ಪಟ್ಟಿಯಲ್ಲಿ ನೇಮಕ ಮಾಡಿತು, ಆದರೆ ಹಣಕಾಸು ವರ್ಷ- 21 ರಲ್ಲಿ ಈ ಸಂಖ್ಯೆ 87,423 ಕ್ಕೆ ಇಳಿದಿದೆ.

ಇದನ್ನೂ ಓದಿ-ಕೊರೊನಾ ಲಸಿಕೆಯಿಂದ ತೊಂದರೆ ಆದಲ್ಲಿ ಪರಿಹಾರ ನೀಡುವುದಾಗಿ ಹೇಳಿದ ಈ ಕಂಪನಿ..!

ಅಂತೆಯೇ, ರಾಜ್ಯಗಳು ಹಣಕಾಸು ವರ್ಷ- 21 ರಲ್ಲಿ 389,052 ಜನರನ್ನು ನೇಮಿಸಿಕೊಂಡಿದ್ದು, ಇದು ಹಿಂದಿನ ವರ್ಷಕ್ಕಿಂತ ಸುಮಾರು 107,000 ರಷ್ಟು ಕಡಿಮೆಯಾಗಿದೆ.ಸಾಂಕ್ರಾಮಿಕ ರೋಗದ ಮಧ್ಯದಲ್ಲಿ ನೇಮಕ ಮಾಡುವುದನ್ನು ಖಾಸಗಿ ವಲಯ ಮಾತ್ರವಲ್ಲ, ಸರ್ಕಾರದ ಮಟ್ಟದಲ್ಲಿಯೂ ಕುಂಠಿತಗೊಂಡಿದೆ ಎನ್ನುವುದನ್ನು ಈ ಅಂಕಿ ಅಂಶಗಳು ಸೂಚಿಸುತ್ತವೆ.

ಸರ್ಕಾರದ ನೇಮಕಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಮತ್ತು ಈ ಪ್ರವೃತ್ತಿ ಮುಂದುವರಿಯುತ್ತದೆ ಏಕೆಂದರೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮತ್ತು ರಾಜ್ಯಗಳಲ್ಲಿನ ಇಲಾಖೆಗಳು ಶಾಶ್ವತ ಸ್ಥಾನಗಳನ್ನು ಕಡಿಮೆಗೊಳಿಸುತ್ತಿವೆ ಮತ್ತು ಹೆಚ್ಚಾಗಿ ಗುತ್ತಿಗೆ ಉದ್ಯೋಗದ ಮೇಲೆ ಅವಲಂಬಿತವಾಗುತ್ತದೆ.ಖಾಯಂ ನೌಕರರ ಬದಲಾಗಿ ಮಲ್ಟಿ-ಟಾಸ್ಕಿಂಗ್ ಗುತ್ತಿಗೆ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಭಾರತೀಯ ಸಾರ್ವಜನಿಕ ಸೇವಾ ನೌಕರರ ಒಕ್ಕೂಟದ (ಐಪಿಎಸ್‌ಇಎಫ್) ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್ ಹೇಳಿದ್ದಾರೆ.

ಇದನ್ನು ಓದಿ-Facebook Bug: ಹಲವು Instagram ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News