ನವದೆಹಲಿ: ಈ ವರ್ಷದ ಆರಂಭದಲ್ಲಿ ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಸೆಬಿ ಅಧ್ಯಕ್ಷೆ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಅದಾನಿ ಗ್ರೂಪ್ ಜೊತೆ ಕಡಲಾಚೆಯ ನಿಧಿಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ ಹಾಗಾಗಿ ಸೆಬಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿ ಸ್ಪೋಟಕ ವರದಿಯನ್ನು ಬಿಡುಗಡೆ ಮಾಡಿತ್ತು.
ಹಿಂಡೆನ್‌ಬರ್ಗ್ ಸಂಸ್ಥೆಯು ಅದಾನಿ ಗ್ರೂಪ್ ಅನ್ನು ಗುರಿಯಾಗಿಟ್ಟುಕೊಂಡು ಅದಾನಿ ಗ್ರೂಪ್ ನ ಆಂತರಿಕ ವ್ಯಾಪಾರ, ಷೇರು ಮಾರುಕಟ್ಟೆ ಉಲ್ಲಂಘನೆ ಮತ್ತು ಇತರ ಹಣಕಾಸು ಅಕ್ರಮಗಳನ್ನು ವರದಿಯಲ್ಲಿ, ಉಲ್ಲೇಖಿಸಿತ್ತು.
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯ ಜಾಣ ನಡೆ:
ಇದೀಗ ಈ ಆರೋಪಗಳ ಎರಡು ವರ್ಷಗಳ ನಂತರ, ಕೆಲವು ಪ್ರವರ್ತಕ ಗುಂಪು ಘಟಕಗಳನ್ನು ಸಾರ್ವಜನಿಕ ಷೇರುದಾರರು ಎಂದು ತಪ್ಪಾಗಿ ವರ್ಗೀಕರಿಸಲಾಗಿದೆ ಎಂದು ಆರೋಪಿಸಿ ಅದಾನಿ ಗ್ರೂಪ್‌ಗೆ ಸೆಬಿ ಶೋಕಾಸ್ ನೋಟಿಸ್ ನೀಡಿದೆ.
ಯುಎಸ್ ಪ್ರಾಬಲ್ಯದ ಹಣಕಾಸು ಮತ್ತು ವ್ಯಾಪಾರ ವ್ಯವಸ್ಥೆಯನ್ನು ಎದುರಿಸುವ ಉದ್ದೇಶದಿಂದ ವ್ಯಾಪಾರ ವಸಾಹತು ವೇದಿಕೆ ಮತ್ತು ಸಾಮಾನ್ಯ ಕರೆನ್ಸಿಯನ್ನು ಪ್ರಾರಂಭಿಸುವ ಬ್ರಿಕ್ಸ್ ಶೃಂಗಸಭೆಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.ಏತನ್ಮಧ್ಯೆ ಗೌತಮ್ ಅದಾನಿಯನ್ನು ಸುತ್ತುವರೆದಿರುವ ಹೊಸ ಸಮಸ್ಯೆಗಳ ನಡುವೆ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ರಷ್ಯಾ ಮತ್ತು ಚೀನಾ ಜೊತೆಗೆ ಭಾರತ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಟೆಕ್ ದೈತ್ಯ NVIDIA ನೊಂದಿಗೆ ಜಂಟಿ ಉದ್ಯಮವನ್ನು ಘೋಷಿಸುವ ಮೂಲಕ ಸದ್ದಿಲ್ಲದೆ ಸಮತೋಲನ ಕಾಪಾಡಿಕೊಳ್ಳುವ ಮೂಲಕ ಜಾಣೆ ನಡೆ ಇಟ್ಟಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯದ್ದೇ ಗೆಲುವು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ
ಈಗ ಭಾರತದ ಈ ನಡೆ ನಿಸ್ಸಂದೇಹವಾಗಿ ಅಮೇರಿಕಾವನ್ನು ಕೆರಳಿಸಿದೆ, ಆದರೆ ಅಂಬಾನಿ ಭಾರತದಲ್ಲಿ ಕೃತಕ ಬುದ್ದಿ ಮತ್ತೆ ಮೂಲಸೌಕರ್ಯವನ್ನು ನಿರ್ಮಿಸಲು NVIDIA ನೊಂದಿಗೆ ಪಾಲುದಾರಿಕೆ ಮಾಡುವ ಮೂಲಕ 'ಅತಿಕ್ರಮಣ'ವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.ಇದಕ್ಕೆ ಪೂರಕವಾಗಿ ಗುರುವಾರದಂದು ಭಾರತದ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಮುಖ ನಡೆಯ ಭಾಗವಾಗಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಮತ್ತು NVIDIA ಅತ್ಯಾಧುನಿಕ ಕೃತಕ ಬುದ್ದಿಗೆ ಸಂಬಂಧಿಸಿದ ಮೂಲಸೌಕರ್ಯವನ್ನು ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಮುಂಬೈನಲ್ಲಿ ನಡೆದ NVIDIA AI ಶೃಂಗಸಭೆ 2024 ರಲ್ಲಿ NVIDIA CEO, ಜೆನ್ಸನ್ ಹುವಾಂಗ್ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಎಲೋನ್ ಮಸ್ಕ್ ಎಂಟ್ರಿ.!
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯ ಜಿಯೋಗೆ ಟಕ್ಕರ್ ಕೊಡುವ ನಿಟ್ಟಿನಲ್ಲಿ ಈಗ ಭಾರತದ ಟೆಲಿಕಾಂ ವಲಯಕ್ಕೆ ಕಾಲಿಡಲು ಪ್ರಯತ್ನಿಸುತ್ತಿದ್ದಾರೆ.ಮಸ್ಕ್ ತನ್ನ ಉಪಗ್ರಹ ಆಧಾರಿತ ಮೊಬೈಲ್ ಟೆಲಿಫೋನಿ ಸೇವೆ 'ಸ್ಟಾರ್‌ಲಿಂಕ್' ಅನ್ನು ಭಾರತೀಯ ಕಂಪನಿಯ ಸಹಯೋಗದೊಂದಿಗೆ ಪ್ರಾರಂಭಿಸಲು ಯೋಜಿಸಿದ್ದಾರೆ ಇದಕ್ಕಾಗಿ ಅವರು ಭಾರತ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.