ಅಸ್ಸಾಂ : ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ತಂತ್ರಜ್ಞರಾಗಿದ್ದ ಮತ್ತು ಪಕ್ಷದ ಹಿರಿಯ ನಯರಾಗಿದ್ದ ಹಿಮಂತ ಬಿಸ್ವ ಶರ್ಮಾ ಅವರು ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಅಸ್ಸಾಂನ ವಿಧಾನಸಭಾ ಆವರಣದಲ್ಲಿ ನಡೆದ ಹೊಸ ಶಾಸಕರ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶರ್ಮಾ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ(BJP) ಸತತ ಎರಡನೇ ಅವಧಿಗೆ ಅಸ್ಸಾಂನಲ್ಲಿ ಅಧಿಕಾರಕ್ಕೆ ಮರಳಿದೆ. ಇಂದು ಗೌಹಾಟಿಯಲ್ಲಿ ಈವರೆಗೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸರ್ಬಾನಂದ ಸೊನೊವಾಲ್(Sarbananda Sonowal) ಮತ್ತು ಪಕ್ಷದ ನಾಲ್ಕು ಕೇಂದ್ರೀಯ ಪರಿವೀಕ್ಷಕರ ಮುಂದೆ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸೊನೊವಾಲ್ ಅವರೇ ಸರ್ಮ ಹೆಸರನ್ನು ಸಿಎಂ ಸ್ಥಾನಕ್ಕಾಗಿ ಪ್ರಸ್ತಾಪಿಸಿದರೆ, ಉಳಿದವರೆಲ್ಲಾ ಅದನ್ನು ಬೆಂಬಲಿಸಿದರು ಎಂದು ಸಭೆಯ ನಂತರ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ಇದನ್ನೂ ಓದಿ : Delhi Lockdown : ರಾಷ್ಟ್ರ ರಾಜಧಾನಿಯಲ್ಲಿ ಮೇ 17ರ ವರೆಗೆ ಮತ್ತೆ ಲಾಕ್‌ಡೌನ್ ವಿಸ್ತರಣೆ..!
52 ವರ್ಷ ವಯಸ್ಸಿನ ಹಿಮಂತ್ ಬಿಸ್ವ ಶರ್ಮಾ(Himanta Biswa Sarma) ಅವರು ಜಲುಕ್ಬರಿ ವಿಧಾನಸಭಾ ಕ್ಷೇತ್ರದಿಂದ ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹಿಂದಿನ ಸೊನೊವಾಲ್ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿದ್ದರು. ನೂತನ ಸಿಎಂ ಸ್ಥಾನಕ್ಕೆ ಸರ್ಮ ಅವರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಬಿಜೆಪಿ ನಾಯಕರು ಈ ಮುನ್ನವೇ ಅನುಮೋದಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ : Surendra Singh : ಕೊರೋನಾ ಹರಡುವಿಕೆಯನ್ನ ತಡೆಯಲು ಗೋ ಮೂತ್ರ ಕುಡಿಯಿರಿ : ಬಿಜೆಪಿ ಶಾಸಕ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.