ಗಾಂಧಿ ಕುಟುಂಬದವರಲ್ಲದೇ ಅನ್ಯರು ಅಧ್ಯಕ್ಷರಾದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ- ನಟವರ್ ಸಿಂಗ್

ಗಾಂಧಿ ಕುಟುಂಬದವರಲ್ಲದೆ ಅನ್ಯರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದೆ ಆದಲ್ಲಿ 24 ಗಂಟೆಯೊಳಗೆ ಪಕ್ಷ ವಿಭಜನೆಯಾಗಲಿದೆ ಎಂದು ಮಾಜಿ ಕೇಂದ್ರ ಮಂತ್ರಿ ನಟವರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

Last Updated : Jul 22, 2019, 01:27 PM IST
ಗಾಂಧಿ ಕುಟುಂಬದವರಲ್ಲದೇ ಅನ್ಯರು ಅಧ್ಯಕ್ಷರಾದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ- ನಟವರ್ ಸಿಂಗ್ title=

ನವದೆಹಲಿ: ಗಾಂಧಿ ಕುಟುಂಬದವರಲ್ಲದೆ ಅನ್ಯರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದೆ ಆದಲ್ಲಿ 24 ಗಂಟೆಯೊಳಗೆ ಪಕ್ಷ ವಿಭಜನೆಯಾಗಲಿದೆ ಎಂದು ಮಾಜಿ ಕೇಂದ್ರ ಮಂತ್ರಿ ನಟವರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

'134 ವರ್ಷ ಹಳೆಯ ಪಕ್ಷಕ್ಕೆ ಅಧ್ಯಕ್ಷರಿಲ್ಲವೆನ್ನುವುದು ದುರಾದೃಷ್ಟಕರ ಸಂಗತಿ. ಗಾಂಧಿ ಕುಟುಂಬದ ಹೊರತು ಅನ್ಯರು ಅಧ್ಯಕ್ಷರಾದಲ್ಲಿ 24 ಗಂಟೆಯೊಳಗೆ ಪಕ್ಷವು ವಿಭಜನೆಯಾಗುತ್ತದೆ' ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ನ ಉನ್ನತ ಹುದ್ದೆ ಅಲಂಕರಿಸಲು ಪ್ರಿಯಾಂಕಾ ಗಾಂಧಿ ಸೂಕ್ತ ವ್ಯಕ್ತಿ ಎಂದು ಅವರು ಹೇಳಿದರು. ಇತ್ತೀಚಿಗೆ ಸೋನಭದ್ರ ಸಂತ್ರಸ್ತರನ್ನು ಭೇಟಿ ಮಾಡಲು ಪ್ರಿಯಾಂಕಾ ತೋರಿದ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಂಗ್ 'ಉತ್ತರ ಪ್ರದೇಶದ ಆ ಹಳ್ಳಿಯಲ್ಲಿ ಅವರು ಏನು ಮಾಡಿದರೆನ್ನುವುದಕ್ಕೆ ಪ್ರತ್ಯಕ್ಷದರ್ಶಿಗಳಾಗಿದ್ದಿರಿ. ಅದು ನಿಜಕ್ಕೂ ಅದ್ಬುತ, ಅಲ್ಲಿಯೇ ಉಳಿದು ಅವರು ತಾವು ಸಾಧಿಸಬೇಕಾಗಿರುವುದನ್ನು ಅವರು ಸಾಧಿಸಿದರು' ಎಂದು ಪ್ರಶಂಶಿಸಿದರು.

ಪ್ರಿಯಾಂಕಾ ಗಾಂಧಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು 'ಇದು ಪ್ರಿಯಾಂಕಾ ಗಾಂಧಿಯವರ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಅವರ ಸಹೋದರ ರಾಹುಲ್ ಗಾಂಧಿ ಕುಟುಂಬದಿಂದ ಯಾರು ಅಧ್ಯಕ್ಷರಾಗುವುದು ಬೇಡ ಎಂದು ಹೇಳಿದ್ದಾರೆ. ಈಗ ಕುಟುಂಬ ಆ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ' ಎಂದು ಅವರು ಹೇಳಿದರು.

ಇತ್ತೀಚಿಗೆ ಲಾಲ್ ಬಹದೂರ್ ಶಾಸ್ತ್ರಿ ಪುತ್ರ ಅನಿಲ್ ಶಾಸ್ತ್ರಿ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Trending News