ಹರ್ಯಾಣ:120 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಸ್ವಾಮಿ ಬಂಧನ

   

Last Updated : Jul 21, 2018, 01:41 PM IST
ಹರ್ಯಾಣ:120 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ ಸ್ವಾಮಿ ಬಂಧನ title=
Photo courtesy: ANI

ನವದೆಹಲಿ: ಶುಕ್ರವಾರಂದು ಹರ್ಯಾಣದ ಫತೇಬಾದ್ ನಲ್ಲಿ ಮಹಿಳೆಯೊಬ್ಬಳನ್ನು ಅತ್ಯಾಚಾರ  ಮಾಡಿದ ವೀಡಿಯೋವೊಂದು ಆನ್ ಲೈನ್ ನಲ್ಲಿ ವೈರಲ್ ಆದ ನಂತರ  ಈ ಘಟನೆಗೆ ಸಂಭಂದಪಟ್ಟ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೋಲೀಸರ ಹೇಳಿಕೆಯನ್ನು ದಾಖಲಿಸಿರುವ ಎಎನ್ಐ ಸುದ್ದಿ ಸಂಸ್ಥೆ " ನಾವು ಕೇಸ್ ನ್ನು ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದೇವೆ.ಸ್ವಾಮಿಯ ಸ್ಥಳದ ಮೇಲೆ ದಾಳಿ ಮಾಡಿ ಹಲವು ಅನುಮಾನಸ್ಪಾದ ವಸ್ತುಗಳನ್ನು ಸಹಿತ ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನಾಗಿರುವ ವ್ಯಕ್ತಿಯನ್ನು ಫತೇಬಾಧ್ ಪ್ರದೇಶದ ಬಾಬಾ ಬಾಲಕನಾಥ್ ದೇವಸ್ತಾನದ ಬಾಬಾ ಅಮರ್ ಪುರಿ ಎಂದು ಗುರುತಿಸಲಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯಂತೆ ಸುಮಾರು 120 ಮಹಿಳೆಯರನ್ನು ಇದುವರೆಗೂ ಅತ್ಯಾಚಾರವನ್ನು ಮಾಡಲಾಗಿದ್ದು. ಇದನ್ನು ವೀಡಿಯೋ ಮೂಲಕ ಸೆರೆಹಿಡಿಸು ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡಲು ಬಳಸಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಈಗ ಈ ವಿಡಿಯೋಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು  ತನಿಖೆಯನ್ನು ಮುಂದುವರೆಸಿದ್ದಾರೆ.
 

Trending News