ಕರ್ನಾಲ್: ಹರಿಯಾಣದ ಘರೌಂಡಾದ ಹರಿಸಿಂಗ್ ಪುರ ಗ್ರಾಮದಲ್ಲಿ 5 ವರ್ಷದ ಬಾಲಕಿ ಶಿವಾನಿ ಬೋರ್‌ವೆಲ್‌ಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಅಮಾಯಕ ಶಿವಾನಿ 50-60 ಫಿಟ್ ಆಳದ ಬೋರ್‌ವೆಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಾಲಕಿ ಮಧ್ಯಾಹ್ನದಿಂದ ಕಾಣೆಯಾಗಿದ್ದಳು. ಬಳಿಕ ಆಕೆಯನ್ನು ಹುಡುಕುವಾಗ ಬಾಲಕಿ ಕೊಳವೆ ಬಾವಿಯಲ್ಲಿ ಬಿದ್ದಿರುವುದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಆಡಳಿತದ ಜೊತೆಗೆ ಎನ್‌ಡಿಆರ್‌ಎಫ್ ತಂಡ ಬಾಲಕಿಯನ್ನು ಉಳಿಸಲು ಪ್ರಯತ್ನಿಸುತ್ತಿದೆ. ಮಗುವಿಗೆ ಉಸಿರಾಡಲು ಆಮ್ಲಜನಕವನ್ನು ಒದಗಿಸಲಾಗುತ್ತಿದೆ.
Haryana: A 5-year-old girl fell into a 50-feet deep borewell, yesterday in Har Singh Pura village in Gharaunda of Karnal. Rescue operations underway. pic.twitter.com/KAUqnd1xPN
— ANI (@ANI) November 4, 2019
ಇತ್ತೀಚಿನ ಮಾಹಿತಿಯ ಪ್ರಕಾರ, ಶಿವಾನಿಯನ್ನು ಉಳಿಸಲು ಎನ್‌ಡಿಆರ್‌ಎಫ್ ಮಾಡಿದ ಮೊದಲ ಪ್ರಯತ್ನ ವಿಫಲವಾಯಿತು. ಪೈಪ್‌ನ ಕೆಳಗೆ ಒಂದು ಹಗ್ಗವನ್ನು ಹಾಕುವ ಮೂಲಕ ಶಿವಾನಿಯನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಈ ಪ್ರಯತ್ನ ಯಶಸ್ವಿಯಾಗಿಲ್ಲ. ಸಿಸಿಟಿವಿಯಲ್ಲಿ ಶಿವಾನಿಯ ಕಾಲು ಗೋಚರಿಸುತ್ತಿದ್ದು, ಈಗ ಎನ್‌ಡಿಆರ್‌ಎಫ್ ತಂಡ ಶಿವಾನಿಯನ್ನು ರಕ್ಷಿಸಲು ಇತರ ಆಯ್ಕೆಗಳನ್ನು ಪರಿಗಣಿಸುತ್ತಿದೆ.
ಹುಡುಗಿಯ ತಲೆ ಕೆಳಭಾಗದಲ್ಲಿದೆ, ಇದರಿಂದಾಗಿ ಆಕೆಯನ್ನು ಹೊರತೆಗೆಯಲು ತೊಂದರೆಯಾಗುತ್ತಿದೆ. ಕೊಳವೆಗಳ ಮೂಲಕ ಆಮ್ಲಜನಕವನ್ನು ಸಹ ನೀಡಲಾಗುತ್ತಿದೆಯಾದರೂ, ಬಾಲಕಿ ಶಿವಾನಿಯ ಸ್ಥಿತಿಯ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಹೇಳಲಾಗುತ್ತಿದೆ.