FASTag ಇನ್ನೂ ಅಳವಡಿಸಿಕೊಂಡಿಲ್ಲವೇ.. ಟೆನ್ಶನ್ ಬೇಡ.. ಇನ್ನೂ ಟೈಂ ಇದೆ

ಫಾಸ್ಟ್ ಟ್ಯಾಗ್ ಅಳವಡಿಸಲು ವಿಧಿಸಲಾಗಿದ್ದ ಡೆಎ್ ಲೈನನ್ನು ಸರ್ಕಾರ ಫೆಬ್ರವರಿ 15ರವರೆಗೆ ವಿಸ್ತರಿಸಿದೆ. 

Written by - Zee Kannada News Desk | Last Updated : Dec 31, 2020, 02:54 PM IST
  • ಫಾಸ್ಟ್ ಟ್ಯಾಗ್ ಅಳವಡಿಕೆಗೆ ವಿಧಿಸಲಾಗಿದ್ದ ಡೆಡ್ ಲೈನ್ ಮತ್ತೆ ವಿಸ್ತರಿಸಲಾಗಿದೆ
  • ಫೆಬ್ರವರಿ 15 ರ ತನಕ ಫಾಸ್ಟ್ ಟ್ಯಾಗ್ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ.
  • ಹಿಂದಿನ ಆದೇಶದಂತೆ, ಜನವರಿ 1 ರಿಂದ ಫಾಸ್ಟಟ್ಯಾಗ್ ಕಡ್ಡಾಯವಾಗಿತ್ತು
FASTag ಇನ್ನೂ ಅಳವಡಿಸಿಕೊಂಡಿಲ್ಲವೇ.. ಟೆನ್ಶನ್ ಬೇಡ.. ಇನ್ನೂ ಟೈಂ ಇದೆ title=
ಫಾಸ್ಟ್ ಟ್ಯಾಗ್ ಅಳಡಿಕೆ ವಿಧಿಸಲಾಗಿದ್ದ ಡೆಡ್ ಲೈನನ್ನು ಫೆಬ್ರವರಿ 15ರ ತನಕ ವಿಸ್ತರಿಸಿದ ಕೇಂದ್ರ ಸರ್ಕಾರ (file photoe)

ನವದೆಹಲಿ : ಫಾಸ್ಟ್ ಟ್ಯಾಗ್ (FasTag) ಅಳವಡಿಕೆಗೆ ವಿಧಿಸಲಾಗಿದ್ದ ಡೆಡ್ ಲೈನ್ (deadline)ಮತ್ತೆ ವಿಸ್ತರಿಸಲಾಗಿದೆ .  ಫೆಬ್ರವರಿ 15  ರ ತನಕ ಫಾಸ್ಟ್ ಟ್ಯಾಗ್ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಹಿಂದಿನ ಆದೇಶದಂತೆ, ಜನವರಿ 1 ರಿಂದ ಫಾಸ್ಟಟ್ಯಾಗ್ ಕಡ್ಡಾಯವಾಗಿತ್ತು. ಫಾಸ್ಟ್ ಟ್ಯಾಗ್ ಇಲ್ಲದ ವಾಹನಕ್ಕೆ ಟೋಲ್ ಗೇಟ್ ನಲ್ಲಿ ಅಧಿಕ ಶುಲ್ಕ ವಸೂಲು ಮಾಡಲು ಈ ಹಿಂದೆ ನಿರ್ಧರಿಸಲಾಗಿತ್ತು. ಭೂಸಾರಿಗೆ ಇಲಾಖೆ  ಈ ಸಂಬಂಧ ಇಂದು ಹೊಸ ಆದೇಶವನ್ನು ಹೊರಡಿಸಿದೆ. 

ಸದ್ಯದ ಸ್ಥಿತಿಯಲ್ಲಿ ದೇಶಾದ್ಯಂತ ಶೇ. 70 ರಿಂದ 80 ರಷ್ಟು ವಾಹನಗಳಲ್ಲಿ ಫಾಸ್ಟ್ ಟ್ಯಾಗ್ (FasTag) ಇದೆ.  ಪ್ರತಿಯೊಂದು ವಾಹನದಲ್ಲೂ ಫಾಸ್ಟ್ ಟ್ಯಾಗ್ ಅನಿವಾರ್ಯ ಮಾಡಲಾಗಿದೆ. ಫಾಸ್ಟ್ ಟ್ಯಾಗ್ ಹಾಕಿಸಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನವಾಗಿತ್ತು. 
ಈ ಸಂಬಂಧ ಭೂಸಾರಿಗೆ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI)ಪತ್ರ ಬರೆದಿದೆ. ಟೋಲ್ ಗಳನ್ನು ಕ್ಯಾಶ್ ಲೆಸ್  (cashless) ಮಾಡುವ ನಿಟ್ಟಿನಲ್ಲಿ ಕಾನೂನು ಅಗತ್ಯ ಕ್ರಮಗಳನ್ನು ಫೆಬ್ರವರಿ 15 ರ ಒಳಗೆ ಪೂರೈಸಿಕೊಳ್ಳುವಂತೆ ಅದು ಹೇಳಿದೆ. ಅದಕ್ಕೆ ಸಂಬಂಧಿಸಿದ ಯಾವುದೇ ಅಗತ್ಯ ವಿಚಾರಗಳನ್ನು ಭೂಸಾರಿಗೆ ಇಲಾಖೆಯಿಂದ ಪಡೆದುಕೊಳ್ಳಬಹುದಾಗಿದೆ ಎಂದು ಪತ್ರ ದಲ್ಲಿ ಹೇಳಲಾಗಿದೆ. 

ALSO  READ : ನಿಮ್ಮ FASTag ಮಾಹಿತಿ ತಿಳಿಯಲು ಈ ಒಂದು ಕೆಲಸ ಸಾಕು!

ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಒಂದು ಲೇನ್ ನ್ನು ಫಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನಗಳಿಗಾಗಿ ಮೀಸಲಾಗಿರಿಸಲಾಗಿದೆ.  ಫಾಸ್ಟ್ ಟ್ಯಾಗ್ ಅಳವಡಿಸದೇ ಇರುವ ವಾಹನ ಟೋಲ್ ಪ್ಲಾಜಾ (Toll plaza)ಪ್ರವೇಶಿಸಿದರೆ, ನಿಯಮಿತ ಶುಲ್ಕಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಫಾಸ್ಟ್ ಟ್ಯಾಗ್ ಅಳವಡಿಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

ಕ್ಯಾಶ್ ಕಾನೂನು ರೀತಿಯಲ್ಲಿ ಬಳಕೆಯಲ್ಲಿರುವ ವ್ಯವಹಾರ. ನಗದು ರೂಪದ ವ್ಯವಹಾರವನ್ನು ಪ್ರತಿಬಂಧಿಸಲು ಸಾಧ್ಯವಿಲ್ಲ.  ಇದನ್ನು ತಪ್ಪಿಸಲು ಇರುವ ಒಂದೇ ಉಪಾಯವೆಂದರೆ, ಮೋಟಾರು ವಾಹನ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. 

ALSO  READ : FASTag ಬಗೆಗಿನ ದೊಡ್ಡ ಚಿಂತನೆಯಿಂದ ಮುಕ್ತಿ, ಅಪ್ಲಿಕೇಶನ್ ಸ್ವತಃ ನೀಡಲಿದೆ ಈ ಮಾಹಿತಿ

ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯಿಂದ ಸಮಯ ವ್ಯರ್ಥವಾಗುವುದನ್ನು ತಡೆಯಲು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.  ಫಾಸ್ಟ್ ಟ್ಯಾಗ್ ಬಳಕೆಯಿಂದ ವಾಹನಗಳು ಟೋಲ್ ಪ್ಲಾಜಾದಲ್ಲಿ ನಿಲ್ಲಿಸಿ, ಪೇಮೆಂಟ್ ಮಾಡುವಅಗತ್ಯ ವಿರುವುದಿಲ್ಲ.  ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿರುವಂತೆಯೇ, ಫಾಸ್ಟ್ ಟ್ಯಾಗ್ ಮೂಲಕ ನಿಮ್ಮ ಟೋಲ್ ಶುಲ್ಕವನ್ನು ಕಡಿತ ಮಾಡಲಾಗುತ್ತದೆ. ಇದರಿಂದ ಸಾಕಷ್ಟು ಸಮಯದ ಉಳಿತಾಯ, ಅಲ್ಲದೆ ಕಿರಿಕಿರಿ ತಪ್ಪುತ್ತದೆ ಎಂಬುದು ಸಾರಿಗೆ ಅಧಿಕಾರಿಗಳ ನಿಲುವು.

ಬೇರೆ ಬೇರೆ ವಿಧಾನಗಳ ಮೂಲಕ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಬಹುದು. ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲದಿದ್ದರೆ, ನಿರಾಳವಾಗಿರಿ. ಇನ್ನೂ ಒಂದೂವರೆ ತಿಂಗಳು ಸಮಯ  ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News