ಕರೋನಾ ತಡೆಯಲು ಸರ್ಕಾರದ ದೊಡ್ಡ ನಿರ್ಧಾರ, ಹೈಡ್ರಾಕ್ಸಿಕ್ಲೋರೋಕ್ವಿನ್ ಬದಲಿಗೆ ಈ ಔಷಧಿ ಬಳಕೆ

ಕರೋನಾವೈರಸ್ ಚಿಕಿತ್ಸೆಯಲ್ಲಿ ಈಗ ಹೈಡ್ರಾಕ್ಸಿಕ್ಲೋರೋಕ್ವಿನ್ ಬದಲಿಗೆ ಐವರ್ಮೆಕ್ಟಿನ್ ಮಾತ್ರೆಗಳನ್ನು ಬಳಸಲಾಗುತ್ತದೆ. ಐವರ್ಮೆಕ್ಟಿನ್ ಮಾತ್ರೆಗಳನ್ನು ದೇಶದ ಅನೇಕ ಆಸ್ಪತ್ರೆಗಳಲ್ಲಿ ಹಾಗೂ ಏಮ್ಸ್, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಮತ್ತು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ.

Last Updated : Aug 7, 2020, 10:50 AM IST
ಕರೋನಾ ತಡೆಯಲು ಸರ್ಕಾರದ ದೊಡ್ಡ ನಿರ್ಧಾರ, ಹೈಡ್ರಾಕ್ಸಿಕ್ಲೋರೋಕ್ವಿನ್ ಬದಲಿಗೆ  ಈ ಔಷಧಿ ಬಳಕೆ title=

ಲಕ್ನೋ: ಕರೋನವೈರಸ್ ಸೋಂಕಿನ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗಾಗಿ ಐವರ್ಮೆಕ್ಟಿನ್ ಟ್ಯಾಬ್ಲೆಟ್ ಅನ್ನು ಬಳಸಲು ಉತ್ತರ ಪ್ರದೇಶ ಸರ್ಕಾರ ನಿರ್ದೇಶನ ನೀಡಿದೆ.

ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ಬದಲಿಗೆ ಐವರ್ಮೆಕ್ಟಿನ್ ಮಾತ್ರೆಗಳನ್ನು ಬಳಸಲಾಗುತ್ತದೆ. ಕೋವಿಡ್ -19 (Covid 19) ಸೋಂಕಿತ ಜನರು ಮತ್ತು ಅವರ ಸಂಪರ್ಕದ ಜೊತೆಗೆ ಆರೋಗ್ಯ ಕಾರ್ಯಕರ್ತರಿಗೂ ಈ ಔಷಧಿಯನ್ನು ನೀಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Good News! ಕರೋನಾ ಲಸಿಕೆ ಮೊದಲ ಹಂತದಲ್ಲಿ ಯಶಸ್ವಿ, ನಾಳೆಯಿಂದ ಎರಡನೇ ಹಂತದ ಪ್ರಯೋಗ

ಐವರ್ಮೆಕ್ಟಿನ್ ಮಾತ್ರೆಗಳನ್ನು ದೇಶದ ಅನೇಕ ಆಸ್ಪತ್ರೆಗಳಲ್ಲಿ ಹಾಗೂ ಏಮ್ಸ್, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಮತ್ತು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಬಳಸಲಾಗುತ್ತಿದೆ.

ಸಂಭವನೀಯ ಸೋಂಕನ್ನು ತಪ್ಪಿಸಲು ಕರೋನಾ ಪಾಸಿಟಿವ್ ರೋಗಿಗಳೊಂದಿಗೆ ಸಂಪರ್ಕಕ್ಕೆ ಬರುವ ಜನರಿಗೆ ಈ ಔಷಧಿಯನ್ನು ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Good News: ಕೇವಲ 35 ರೂ.ಗೆ ಕೋವಿಡ್-19 ಚಿಕಿತ್ಸೆ, ಮಾರುಕಟ್ಟೆಗೆ ಬಂತು ಔಷಧ

ಆಗಸ್ಟ್ 4 ರಂದು ಉತ್ತರ ಪ್ರದೇಶದ (Uttar Pradesh) ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ವಿಭಾಗದ ಮಹಾನಿರ್ದೇಶಕರ ನೇತೃತ್ವದಲ್ಲಿ ತಾಂತ್ರಿಕ ತಜ್ಞರ ಸಭೆಯಲ್ಲಿ ಕರೋನದ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗಾಗಿ ಐವರ್ಮೆಕ್ಟಿನ್ ಟ್ಯಾಬ್ಲೆಟ್ ಬಳಕೆಯ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು ಮರುದಿನ ಅದನ್ನು ಬಳಸಲು ಸೂಚನೆಗಳನ್ನು ನೀಡಲಾಗಿದೆ.

Trending News