ಕರೋನಾವೈರಸ್ ನಡುವೆಯೂ ಈ ರಾಜ್ಯದಲ್ಲಿ ಜನವರಿ 1ರಿಂದ ತೆರೆಯಲಿವೆ ಶಾಲೆಗಳು

ಅನೇಕ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆದ ನಂತರ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಕರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಶಾಲೆಗಳು ಮತ್ತೆ ಮುಚ್ಚಲ್ಪಟ್ಟಿವೆ. 

Last Updated : Dec 1, 2020, 03:07 PM IST
  • ರಾಜ್ಯದಲ್ಲಿ ಕರೋನದ ಪರಿಸ್ಥಿತಿ ನಿಯಂತ್ರಣದಲ್ಲಿದೆ - ಶಿಕ್ಷಣ ಸಚಿವ ಹೇಮಂತ್ ವಿಶ್ವ ಶರ್ಮಾ
  • ಕರೋನಾ ಲಸಿಕೆ ಬರುವವರೆಗೂ ಶಾಲೆಗಳನ್ನು ತೆರೆಯದಿರಲು ದೆಹಲಿ ಸರ್ಕಾರದ ತೀರ್ಮಾನ
  • ಈ ರಾಜ್ಯಗಳಲ್ಲಿ ಶಾಲೆಗಳನ್ನು ಮತ್ತೆ ತೆರೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ
ಕರೋನಾವೈರಸ್ ನಡುವೆಯೂ ಈ ರಾಜ್ಯದಲ್ಲಿ ಜನವರಿ 1ರಿಂದ ತೆರೆಯಲಿವೆ ಶಾಲೆಗಳು title=
File Image

ನವದೆಹಲಿ: ಕೊರೊನಾವೈರಸ್ ಸೋಂಕಿನಿಂದಾಗಿ ಕಳೆದ 8 ತಿಂಗಳಿಂದ ಮುಚ್ಚಲ್ಪಟ್ಟ ಶಾಲೆಗಳನ್ನು ತೆರೆಯುವ ಬಗ್ಗೆ ಸರ್ಕಾರಗಳಲ್ಲಿ ಇನ್ನೂ ಗೊಂದಲವಿದೆ. ಅನೇಕ ರಾಜ್ಯಗಳಲ್ಲಿ ಶಾಲೆಗಳನ್ನು ತೆರೆದ ನಂತರ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಕರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಶಾಲೆಗಳು ಮತ್ತೆ ಮುಚ್ಚಲ್ಪಟ್ಟಿವೆ. ಆದರೆ ಇನ್ನೂ ಕೆಲವು ರಾಜ್ಯಗಳು ಹೊಸ ವರ್ಷದಿಂದ ಶಾಲೆಗಳನ್ನು ತೆರೆಯಲು ನಿರ್ಧರಿಸಿವೆ. ಅಸ್ಸಾಂ (Assam) ಕೂಡ ಜನವರಿ 1 ರಿಂದ ಶಾಲೆ ತೆರೆಯಲು ನಿರ್ಧರಿಸಿದೆ.

ರಾಜ್ಯದಲ್ಲಿ ಕರೋನದ ಪರಿಸ್ಥಿತಿ ನಿಯಂತ್ರಣದಲ್ಲಿದೆ- ಹೇಮಂತ್ ವಿಶ್ವ ಶರ್ಮಾ
ರಾಜ್ಯದಲ್ಲಿ ಕರೋನವೈರಸ್ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಈ ಹಿನ್ನಲೆಯಲ್ಲಿ ಜನವರಿ 1 ರಿಂದ ರಾಜ್ಯದಲ್ಲಿ ಎಲ್ಲಾ ಶಾಲೆಗಳನ್ನು (Schools) ತೆರೆಯಲಾಗುವುದು  ಎಂದು ಅಸ್ಸಾಂ ಶಿಕ್ಷಣ ಸಚಿವ ಹೇಮಂತ ವಿಶ್ವ ಶರ್ಮಾ ಹೇಳಿದರು. 

ಈ ರಾಜ್ಯ ಸರ್ಕಾರದಿಂದ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ವಿತರಣೆ

ಪ್ರಸ್ತುತ ಈ ರಾಜ್ಯದಲ್ಲಿ ಆರನೇ ತರಗತಿಗಿಂತ ಮೇಲ್ವರ್ಗದ ತರಗತಿಗಳ ಮಕ್ಕಳನ್ನು ವಾರಕ್ಕೆ 3 ದಿನ ಅಧ್ಯಯನಕ್ಕೆ ಕರೆಯಲಾಗುತ್ತಿದೆ. ಆದರೆ ಕೆಳಗಿನ ತರಗತಿಗಳ ಮಕ್ಕಳಿಗಾಗಿ ಆನ್‌ಲೈನ್ ತರಗತಿಗಳನ್ನು (Online Class) ನೀಡಲಾಗುತ್ತಿದೆ. ಕೆಲವು ನಿರ್ಬಂಧಗಳೊಂದಿಗೆ ಡಿಸೆಂಬರ್ 15 ರಿಂದ ರಾಜ್ಯದ ಕಾಲೇಜು ಹಾಸ್ಟೆಲ್‌ಗಳನ್ನು ಸಹ ತೆರೆಯಲಾಗುವುದು ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

ಕರೋನಾ ಲಸಿಕೆ ಬರುವವರೆಗೂ ದೆಹಲಿಯಲ್ಲಿ ಶಾಲೆಗಳು ತೆರೆಯುವುದಿಲ್ಲ :
ಏತನ್ಮಧ್ಯೆ ಸದ್ಯಕ್ಕೆ ಶಾಲೆಗಳನ್ನು ಮುಚ್ಚಲು ದೆಹಲಿ ಸರ್ಕಾರ ನಿರ್ಧರಿಸಿದೆ. ಕರೋನವೈರಸ್ ಲಸಿಕೆ (Coronavirus Vaccine) ಮಾರುಕಟ್ಟೆಗೆ ಬರುವವರೆಗೆ ದೆಹಲಿಯಲ್ಲಿ ಶಾಲೆಗಳನ್ನು ತೆರೆಯಲಾಗುವುದಿಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು. ಈ ವಿಷಯದ ಬಗ್ಗೆ ದೆಹಲಿ ಸರ್ಕಾರ ಇತ್ತೀಚೆಗೆ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಸಾಕಷ್ಟು ಮಂದಿ ಪೋಷಕರು ಶಾಲೆ ತೆರೆಯಬಾರದು ಎಂದು ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದರು.

ಸದ್ಯಕ್ಕೆ ಶಾಲೆ ಆರಂಭ ಇಲ್ಲ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಈ ರಾಜ್ಯಗಳಲ್ಲಿ ಶಾಲೆಗಳನ್ನು ಮತ್ತೆ ತೆರೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ:
ಕೊರೊನಾವೈರಸ್ (Coronavirus) ಪ್ರಕರಣಗಳು ಕಡಿಮೆಯಾದ ಕಾರಣ ಹರಿಯಾಣ, ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲಾಯಿತು. ಆದರೆ ಇದ್ದಕ್ಕಿದ್ದಂತೆ ಕರೋನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಶಾಲೆಗಳನ್ನು ಮತ್ತೆ ಮುಚ್ಚಲಾಯಿತು. ಈ ಶಾಲೆಗಳು ಮತ್ತೆ ಯಾವಾಗ ತೆರೆಯುತ್ತವೆ ಎಂಬ ಬಗ್ಗೆ ಸರ್ಕಾರಗಳು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. 

Trending News