ಗುವಾಹಟಿ: ಸರ್ಕಾರದ ಹಣದಿಂದ ಧಾರ್ಮಿಕ ಶಿಕ್ಷಣವನ್ನು ನಿಲ್ಲಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದ್ದು ಇನ್ನು ಮುಂದೆ ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುವುದಿಲ್ಲ ಎಂದು ಅಸ್ಸಾಂ (Assam) ಸರ್ಕಾರ ಹೇಳುತ್ತದೆ. ಅಸ್ಸಾಂ ಸರ್ಕಾರ ಸಾರ್ವಜನಿಕರ ಹಣದಿಂದ ಧಾರ್ಮಿಕ ಶಿಕ್ಷಣವನ್ನು ಒದಗಿಸುವುದಿಲ್ಲ ಎಂದು ಹೇಳಿದೆ. ಈ ಆದೇಶವು ಅಸ್ಸಾಂನ ಸಂಸ್ಕೃತ ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಅದೇ ಸಮಯದಲ್ಲಿ ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷದ ನಾಯಕ ಪ್ರಶ್ನಿಸಿದ್ದು ನಮ್ಮ ಸರ್ಕಾರ ಬಂದರೆ ನಿರ್ಧಾರ ಹಿಂತಿರುಗಿಸಲಾಗುವುದು ಎಂದು ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.
ಮುಂದಿನ ತಿಂಗಳು ಅಧಿಸೂಚನೆ ಬಿಡುಗಡೆ:
ಅಸ್ಸಾಂ ಸಚಿವ ಹೇಮಂತ ಬಿಸ್ವಾ ಶರ್ಮಾ ಅವರು ರಾಜ್ಯದ ಎಲ್ಲಾ ಸರ್ಕಾರಿ ಮದರಸಾಗಳನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ. ಸಾರ್ವಜನಿಕ ಹಣದಿಂದ ಧಾರ್ಮಿಕ ಶಿಕ್ಷಣವನ್ನು ನೀಡಲು ಯಾವುದೇ ಅವಕಾಶವಿಲ್ಲ. ಆದ್ದರಿಂದ ಸರ್ಕಾರಿ ಮದರಸಾ (Madrasa)ಗಳನ್ನು ಇನ್ನು ಮುಂದೆ ನಡೆಸಲಾಗುವುದಿಲ್ಲ. ಅಲ್ಲದೆ ಸರ್ಕಾರದ ಸಹಾಯದಿಂದ ನಡೆಯುತ್ತಿರುವ ಸಂಸ್ಕೃತ ಶಾಲೆಗಳನ್ನೂ ಮುಚ್ಚಲಾಗುವುದು. ಈ ಸಂಬಂಧ ಅಧಿಸೂಚನೆಗಳನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.
ಮದ್ರಸಾದಲ್ಲಿ ಲೈಂಗಿಕ ಶೋಷಣೆ, 51 ಬಾಲಕಿಯರ ರಕ್ಷಣೆ, ಆರೋಪಿ ಬಂಧನ
ಅಸ್ಸಾಂ ಸರ್ಕಾರದ ಈ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಐಯುಡಿಎಫ್ ಮುಖ್ಯಸ್ಥ ಮತ್ತು ಲೋಕಸಭಾ ಸಂಸದ ಬದ್ರುದ್ದೀನ್ ಅಜ್ಮಲ್, ಬಿಜೆಪಿಯ ರಾಜ್ಯ ಸರ್ಕಾರ ಸರ್ಕಾರಿ ಮದರಸಾಗಳನ್ನು ಮುಚ್ಚಿದರೆ, ನಮ್ಮ ಸರ್ಕಾರ ಅವುಗಳನ್ನು ಮತ್ತೆ ತೆರೆಯುತ್ತದೆ ಎಂದಿದ್ದಾರೆ.
ಗಮನಾರ್ಹವಾಗಿ ಮುಂದಿನ ವರ್ಷ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದನ್ನು ಚುನಾವಣಾ ವಿಷಯವನ್ನಾಗಿ ಮಾಡಲು ಪ್ರತಿಪಕ್ಷಗಳು ಸಜ್ಜಾಗಿವೆ.