ಸೆಪ್ಟೆಂಬರ್ 30ರಂದು ಹಲವು ವೈಶಿಷ್ಟ್ಯಗಳೊಂದಿಗೆ ಮತ್ತೊಂದು ಜಬರ್ದಸ್ತ್ ಫೋನ್ ಪರಿಚಯಿಸುತ್ತಿದೆ Google

ಈ ಬಾರಿ ಗೂಗಲ್ ದೊಡ್ಡ ಬ್ಯಾಂಗ್‌ನೊಂದಿಗೆ ಎಲೆಕ್ಟ್ರಾನಿಕ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಸೆಪ್ಟೆಂಬರ್ 30 ರಂದು ನಡೆಯುವ ವಾರ್ಷಿಕ ಹಾರ್ಡ್‌ವೇರ್ ಈವೆಂಟ್‌ನಲ್ಲಿ ಇದು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 5, ಕ್ರೋಮ್‌ಕಾಸ್ಟ್ ಮತ್ತು ಸ್ಮಾರ್ಟ್ ಸ್ಪೀಕರ್ ಅನ್ನು ಏಕಕಾಲದಲ್ಲಿ ಬಿಡುಗಡೆ ಮಾಡುತ್ತದೆ.

Written by - Yashaswini V | Last Updated : Sep 17, 2020, 10:30 AM IST
  • ಈ ಬಾರಿ ಗೂಗಲ್ ದೊಡ್ಡ ಬ್ಯಾಂಗ್‌ನೊಂದಿಗೆ ಎಲೆಕ್ಟ್ರಾನಿಕ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
  • ಸೆಪ್ಟೆಂಬರ್ 30 ರಂದು ನಡೆಯುವ ವಾರ್ಷಿಕ ಹಾರ್ಡ್‌ವೇರ್ ಈವೆಂಟ್‌ನಲ್ಲಿ ಇದು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಪಿಕ್ಸೆಲ್ 5, ಕ್ರೋಮ್‌ಕಾಸ್ಟ್ ಮತ್ತು ಸ್ಮಾರ್ಟ್ ಸ್ಪೀಕರ್ ಅನ್ನು ಏಕಕಾಲದಲ್ಲಿ ಬಿಡುಗಡೆ ಮಾಡುತ್ತದೆ.
ಸೆಪ್ಟೆಂಬರ್ 30ರಂದು ಹಲವು ವೈಶಿಷ್ಟ್ಯಗಳೊಂದಿಗೆ ಮತ್ತೊಂದು ಜಬರ್ದಸ್ತ್ ಫೋನ್ ಪರಿಚಯಿಸುತ್ತಿದೆ Google title=

ನವದೆಹಲಿ : ಈ ಬಾರಿ ಗೂಗಲ್ ದೊಡ್ಡ ಬ್ಯಾಂಗ್‌ನೊಂದಿಗೆ ಎಲೆಕ್ಟ್ರಾನಿಕ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಸೆಪ್ಟೆಂಬರ್ 30 ರಂದು ನಡೆಯುವ ವಾರ್ಷಿಕ ಹಾರ್ಡ್‌ವೇರ್ ಈವೆಂಟ್‌ನಲ್ಲಿ ಇದು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ (Smartphone) ಪಿಕ್ಸೆಲ್ 5, ಕ್ರೋಮ್‌ಕಾಸ್ಟ್ ಮತ್ತು ಸ್ಮಾರ್ಟ್ ಸ್ಪೀಕರ್ ಅನ್ನು ಏಕಕಾಲದಲ್ಲಿ ಬಿಡುಗಡೆ ಮಾಡುತ್ತದೆ. ಪಿಕ್ಸೆಲ್ 4 ಎ (Pixel 4A) ಅಧಿಕೃತ ಲಾಂಚ್ ನಲ್ಲಿ ಪಿಕ್ಸೆಲ್ 5 ಅನ್ನು ಘೋಷಿಸಲಾಯಿತು.

ತನ್ನ ನೌಕರರಿಗೆ ವಾರದಲ್ಲಿ 3 ದಿನ ರಜೆ ನೀಡಲು Google ನಿರ್ಧಾರ!

ಜಿಗ್ಮೊಚಿನಾ ಅವರ ವರದಿಯ ಪ್ರಕಾರ ಲಾಂಚ್ ನೈಟ್ ಇನ್ ಎಂಬ ಈ ವರ್ಚುವಲ್ ಲಾಂಚ್ ಈವೆಂಟ್ ಲೈವ್-ಸ್ಟ್ರೀಮಿಂಗ್ ಆಗಿರುತ್ತದೆ. ಪಿಕ್ಸೆಲ್ 5 ಮೊದಲು ಯುಎಸ್, ಕೆನಡಾ, ಯುಕೆ, ಐರ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್, ತೈವಾನ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಾಟವಾಗಲಿದೆ.

ಪಂಚೋಲ್ ಸೆಲ್ಫಿ ಕ್ಯಾಮೆರಾ ಹೊಂದಿದ ಗೂಗಲ್ ಪಿಕ್ಸೆಲ್ 5 $ 800ಕ್ಕೆ ಹತ್ತಿರವಾಗಬಹುದು. ಇದಲ್ಲದೆ ಈ ಸಂದರ್ಭದಲ್ಲಿ ಗೂಗಲ್ ಹೊಚ್ಚ ಹೊಸ ನೆಸ್ಟ್ ಬ್ರಾಂಡ್ ಗೂಗಲ್ ಹೋಮ್ ಸ್ಪೀಕರ್ ಅನ್ನು ಸಹ ಬಿಡುಗಡೆ ಮಾಡುತ್ತದೆ.

ಆಂಡ್ರಾಯ್ಡ್ ಆಧಾರಿತ ಭೂಕಂಪ ಪತ್ತೆ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಿದ ಗೂಗಲ್

ಗೂಗಲ್ (Google) ತನ್ನ ಹೊಸ ಸ್ಮಾರ್ಟ್‌ಫೋನ್ 'ಪಿಕ್ಸೆಲ್ 4 ಎ' (Google Pixel 4A) ಅನ್ನು ಅಕ್ಟೋಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ ಎಂಬುದು ಭಾರತೀಯ ಗ್ರಾಹಕರಿಗೆ ಒಳ್ಳೆಯ ಸುದ್ದಿಯಾಗಿದೆ.

ಗೂಗಲ್‌ನ ಬ್ಲಾಗ್ ಪ್ರಕಾರ ಈ ವರ್ಷ ಪಿಕ್ಸೆಲ್ 4 ಎ ಉತ್ತಮ ಕ್ಯಾಮೆರಾ ಮತ್ತು ಇತರ ಹಲವು ವೈಶಿಷ್ಟ್ಯಗಳನ್ನು ಪಡೆಯಲಿದ್ದು, ಇದು ಕಾಲಾನಂತರದಲ್ಲಿ ಫೋನ್ ವೈಶಿಷ್ಟ್ಯವನ್ನು ಇನ್ನೂ ಸುಧಾರಿಸುತ್ತದೆ. ಅಕ್ಟೋಬರ್‌ನಲ್ಲಿ ಇದನ್ನು ಭಾರತದಲ್ಲಿ ಪರಿಚಯಿಸಲಾಗುವುದು ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಪಿಕ್ಸೆಲ್ 5 ಅನ್ನು ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ನೀಡಲಾಗುವುದು ಮತ್ತು ಪಿಕ್ಸೆಲ್ 4 ಎ 5 ಜಿ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಾಗಲಿದೆ ಎಂದು ಗೂಗಲ್ ಹೇಳಿದೆ.

Trending News