Good News: SSLCಯಲ್ಲಿ ಫೇಲಾಗಿದ್ದೀರಾ? ಚಿಂತೆ ಬಿಟ್ಟು ನೈಯ್ಯಾ ಪೈಸೆ ಕೂಡ ಖರ್ಚು ಮಾಡದೆ ಗಿರಿಧಾಮಗಳಿಗೆ ಭೇಟಿ ನೀಡಿ

Free Hill Station Tour - ಈ ವರ್ಷ ನಡೆದ 10 ನೇ ತರಗತಿಯ ಬೋರ್ಡ್ ಎಕ್ಸಾಮ್ ನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಉಚಿತವಾಗಿ ತಮಿಳುನಾಡಿನ ಜನಪ್ರಿಯ ಗಿರಿಧಾಮಗಳಿಗೆ ಭೇಟಿ ನೀಡಬಹುದು. ಈ ಎರಡು ದಿನಗಳ ಪ್ರವಾಸವು ನಿಮಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಆದರೆ ಇದಕ್ಕಾಗಿ ನೀವು ಒಂದು ಪ್ರಮುಖ ದಾಖಲೆಯನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕು.

Written by - Nitin Tabib | Last Updated : Jul 17, 2021, 09:34 PM IST
  • 10ನೇ ತರಗತಿ ಫೇಲಾದ ಮಕ್ಕಳಿಗೆ ಫ್ರೀ ಟೂರ್ ಅವಕಾಶ.
  • ತಮಿಳುನಾಡಿನ ವ್ಯಕ್ತಿಯೋರ್ವನಿಂದ ಅದ್ಭುತ ಕೊಡುಗೆ.
  • ಈ ಪ್ರವಾಸ ಮಕ್ಕಳ ಡಿಪ್ರೆಶೇನ್ ದೂರಗೊಳಿಸಲಿದೆ ಎಂದ ಸುದೇಶ್
Good News: SSLCಯಲ್ಲಿ ಫೇಲಾಗಿದ್ದೀರಾ? ಚಿಂತೆ ಬಿಟ್ಟು ನೈಯ್ಯಾ ಪೈಸೆ ಕೂಡ ಖರ್ಚು ಮಾಡದೆ ಗಿರಿಧಾಮಗಳಿಗೆ ಭೇಟಿ ನೀಡಿ title=
Free Hill Station Tour (File Photo)

ಚೆನ್ನೈ: Free Hill Station Tour - 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ತಮಿಳುನಾಡಿನ ಜನಪ್ರಿಯ ಗಿರಿಧಾಮ ಕೊಡೈಕನಾಲ್ (Kodaikanal)  ಗೆ ತೆರಳಬಹುದು ಎಂದರೆ ನಂಬುತ್ತೀರಾ? ಅದರಲ್ಲೂ ವಿಶೇಷವೆಂದರೆ ಈ ಪ್ರವಾಸದ ಅವಧಿಯಲ್ಲಿ  ನೀವು ಒಂದು ರೂಪಾಯಿ ಕೂಡ ಖರ್ಚು ಮಾಡಬೇಕಾಗಿಲ್ಲ. ಕೇರಳದಲ್ಲಿ ವಾಸಿಸುವ ಸುಧೀಶ್ ಕೆ (Sudheesh K)  ಅವರು ಪ್ರವಾಸದ ಸಮಯದಲ್ಲಿ ನಿಮ್ಮ ಎಲ್ಲಾ ವೆಚ್ಚಗಳನ್ನು ಭರಿಸಲಿದ್ದಾರೆ.

ಈ ಎರಡು ದಿನಗಳ ಪ್ರವಾಸ ಉಚಿತವಾಗಿರಲಿದೆ
ಸಾಮಾನ್ಯವಾಗಿ ಪರೀಕ್ಷೆಗಳಲ್ಲಿ ಪಾಸಾಗಲು ವಿಫಲವಾದ ಮಕ್ಕಳ ಮನೋಸ್ಥೈರ್ಯ ಹಾಳಾಗುತ್ತದೆ ಮತ್ತು ಅವರು ಖಿನ್ನತೆಗೆ ಒಳಗಾಗುತ್ತಾರೆ ಎಂದು ಸುದಿಶ್ ಹೇಳುತ್ತಾರೆ. ಆದರೆ ಈ ವಿಶಿಷ್ಟ ಟ್ರಿಕ್‌ನಿಂದ ಅವರ ಮನಸ್ಥಿತಿ ಬದಲಾಗುವುದಷ್ಟೇ ಅಲ್ಲ, ಅವರಿಗೆ ಸಂಚರಿಸುವ ಅವಕಾಶವೂ ಸಿಗಲಿದೆ. ಅದಕ್ಕಾಗಿಯೇ ಇಂತಹ ವಿದ್ಯಾರ್ಥಿಗಳಿಗೆ ನಾನು ಈ ಕೊಡುಗೆಯನ್ನು ಅನ್ನು ಸಾಮಾಜಿಕ ಮಾಧ್ಯಮದಲ್ಲಿ  (Social Media) ಹಂಚಿಕೊಂಡಿದ್ದೇನೆ. TNIE ವರದಿಯ ಪ್ರಕಾರ, ಈ ವಿದ್ಯಾರ್ಥಿಗಳಿಗೆ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ತಾನು ಬಯಸುತ್ತೇನೆ ಎಂದು ಸುದೀಶ್ ಹೇಳುತ್ತಾರೆ.

ಇದನ್ನೂ ಓದಿ-ಉತ್ತರ ಪ್ರದೇಶ ವಿಧಾನಸಭೆ ಸಚಿವಾಲಯದಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸುವುದಕ್ಕೆ ನಿಷೇಧ

ಜೊತೆಗೆ ಬರುವಾಗ ಈ ದಾಖಲೆ ತರಬೇಕು
ಸುದೇಶ್ ಕೊಡೈಕೆನಾಲ್‌ನ ದಿ ಹಮಾಕ್ ಹೋಂಸ್ಟೇಜ್ (The Hammack Homestage) ಸೇರಿದಂತೆ ಹಲವು ಆಸ್ತಿಗಳನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. 10 ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಎರಡು ದಿನಗಳ ಕಾಲ ಉಳಿಯಬಹುದು. ಇದಕ್ಕಾಗಿ ಅವರು ತಮ್ಮSSLC ಪ್ರಮಾಣಪತ್ರವನ್ನು ಮಾತ್ರ ತೋರಿಸಬೇಕಾಗಿದೆ., ಅದು ಅವರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆಂದು ಎಂಬುದನ್ನು ತಿಳಿಯಪಡಿಸುತ್ತದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸುದೇಶ್, "10 ನೇ ತರಗತಿ ಫಲಿತಾಂಶಗಳನ್ನು ಘೋಷಿಸಿದಾಗಿನಿಂದ, ಸೋಷಿಯಲ್ ಮೀಡಿಯಾದಲ್ಲಿ ಅನೇಕ ಯಶಸ್ಸಿನ ಕಥೆಗಳು ಹರಿದಾಡುತ್ತಿವೆ. ಸಾಮಾನ್ಯವಾಗಿ ನಾವು ಅದರ ಇನ್ನೊಂದು ಬದಿಯನ್ನು ನೋಡುವುದಿಲ್ಲ. ಅದೇನೆಂದರೆ, ಇದರ ಇನ್ನೊಂದು ಭಾಗ ಬಹಿಷ್ಕಾರ ಮತ್ತು ವಿಫಲವಾದ ಕಾರಣ ಅಪಹಾಸ್ಯವನ್ನು ಎದುರಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- Corona ರೋಗಿಗಳಲ್ಲಿ ಹೆಚ್ಚಾದ TB Infection ಕುರಿತು ಅಡ್ವೈಸರಿ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಜುಲೈ ತಿಂಗಳ ಕೊನೆಯವರೆಗೆ ಈ ಅವಕಾಶ ಇರಲಿದೆ
ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳನ್ನು ಉತ್ತಮ ಪ್ರದರ್ಶಕರೊಂದಿಗೆ ಹೋಲಿಸುತ್ತಾರೆ ಎಂದು ಸುದೇಶ್ ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳು ತಮ್ಮ ವೈಫಲ್ಯವನ್ನು ಎದುರಿಸುವುದು ಹೆಚ್ಚು ಕಷ್ಟಕರವಾಗುತ್ತದೆ. ಹೀಗಾಗಿ  ಪರ್ವತಗಳ ಪ್ರಶಾಂತತೆಯ ನಡುವೆ ಮಕ್ಕಳು ಬಹುಶಃ ಶಾಂತಿಯನ್ನು ಕಂಡುಕೊಳ್ಳಲು ಇದರಿಂದ ಸಾಧ್ಯವಾಗಲಿದೆ ಮತ್ತು ಅವರ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಲಿದೆ. ಅಲ್ಲದೆ, ಅವರು ಇಂತಹ ಸಂದರ್ಭಗಳನ್ನು ಉತ್ತಮವಾಗಿ ಎದುರಿಸಲು ಮತ್ತು ನಿರ್ವಹಿಸಲು ಸಾಧ್ಯವಾಗಲಿದೆ. ಸುದೀಶ್ ಒದಗಿಸಿರುವ ಈ ಅವಕಾಶ ಜುಲೈ ಅಂತ್ಯದವರೆಗೆ ಇರಲಿದೆ.

ಇದನ್ನೂ ಓದಿ-2021-22 ರ ಶೈಕ್ಷಣಿಕ ವರ್ಷಕ್ಕೆ ಹೊಸ ಮಾರ್ಗಸೂಚಿಗಳನ್ನು ಘೋಷಿಸಿದ ಯುಜಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News