7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಭಾರೀ ಪ್ರಮಾಣದಲ್ಲಿ ಡಿಎ ಹೆಚ್ಚಳ-ಲೆಕ್ಕಾಚಾರ ಹೀಗಿದೆ

7th Pay Commission: ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳ ಪ್ರಕಾರ, ಈ ಬಾರಿಯೂ ಸರ್ಕಾರವು ತುಟ್ಟಿಭತ್ಯೆಯನ್ನು (ಡಿಎ) 4 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿ ಪ್ರಕಾರ ಜನವರಿಯಲ್ಲೇ ಸರ್ಕಾರ ಡಿಎ ಹೆಚ್ಚಳ ಮಾಡಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

Written by - Bhavishya Shetty | Last Updated : Nov 14, 2022, 03:57 PM IST
    • ಭತ್ಯೆಯನ್ನು ಮತ್ತೊಮ್ಮೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ
    • ಎಐಸಿಪಿಐ ಸೂಚ್ಯಂಕ ದತ್ತಾಂಶದಿಂದ ಈ ಮಾಹಿತಿ ಹೊರಬಿದ್ದಿದೆ
    • 2023ರ ಆರಂಭದಲ್ಲಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಸಿಗಲಿದೆ
7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಭಾರೀ ಪ್ರಮಾಣದಲ್ಲಿ ಡಿಎ ಹೆಚ್ಚಳ-ಲೆಕ್ಕಾಚಾರ ಹೀಗಿದೆ title=
DA Hike

7th Pay Commission: ದೇಶದ ಲಕ್ಷಾಂತರ ಕೇಂದ್ರ ಉದ್ಯೋಗಿಗಳಿಗೆ ಸಂತಸದ ಸುದ್ದಿ ಬಂದಿದೆ. ಭತ್ಯೆಯನ್ನು ಮತ್ತೊಮ್ಮೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಎಐಸಿಪಿಐ ಸೂಚ್ಯಂಕ ದತ್ತಾಂಶದಿಂದ ಈ ಮಾಹಿತಿ ಹೊರಬಿದ್ದಿದೆ. 2023ರ ಆರಂಭದಲ್ಲಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಸಿಗಲಿದೆ.

ಎಐಸಿಪಿಐ ಸೂಚ್ಯಂಕ ಅಂಕಿಅಂಶಗಳ ಪ್ರಕಾರ, ಈ ಬಾರಿಯೂ ಸರ್ಕಾರವು ತುಟ್ಟಿಭತ್ಯೆಯನ್ನು (ಡಿಎ) 4 ಪ್ರತಿಶತದಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಸದ್ಯದ ಪರಿಸ್ಥಿತಿ ಪ್ರಕಾರ ಜನವರಿಯಲ್ಲೇ ಸರ್ಕಾರ ಡಿಎ ಹೆಚ್ಚಳ ಮಾಡಲಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ಇದನ್ನೂ ಓದಿ: Bangalore : ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಕದ್ದು ಪರಾರಿ

2023ರ ಜನವರಿಯಿಂದ ಉದ್ಯೋಗಿಗಳಿಗೆ ಹೆಚ್ಚಿದ ಡಿಎ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮಾರ್ಚ್ 2023ರೊಳಗೆ ಪ್ರಕಟಿಸಲು ಅವಕಾಶವಿದೆ. ಪ್ರಸ್ತುತ ನೌಕರರ ಡಿಎ ಶೇ 38ರಷ್ಟಿದೆ. ಉದ್ಯೋಗಿಗಳ ಡಿಎ ಶೇ.4ರಷ್ಟು ಹೆಚ್ಚಾದರೆ ಅದು ಶೇ.42ಕ್ಕೆ ಏರಿಕೆಯಾಗಲಿದೆ. ಮೂಲ ವೇತನ ಮಾಸಿಕ ರೂ.720ರಿಂದ ರೂ.2276ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಎಐಸಿಪಿಐ ಕಾರ್ಮಿಕ ಸಚಿವಾಲಯದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಕನಿಷ್ಠ ವೇತನ ಮಟ್ಟದಲ್ಲಿ ಲೆಕ್ಕಾಚಾರಗಳು

ಉದ್ಯೋಗಿ ಮೂಲ ವೇತನ - ರೂ.18,000

ಹೊಸ ಡಿಎ (42%)–ಮಾಸಿಕ ರೂ.7,560

ಡಿಎ ಇಲ್ಲಿಯವರೆಗೆ (38%) - ತಿಂಗಳಿಗೆ ರೂ.6,840

ಎಷ್ಟು ಡಿಎ ಹೆಚ್ಚಾಗುತ್ತದೆ - ತಿಂಗಳಿಗೆ 720 ರೂ

ವಾರ್ಷಿಕ ವೇತನದಲ್ಲಿ ಹೆಚ್ಚಳ -720X12= ರೂ.8,640

 

ಗರಿಷ್ಠ ಸಂಬಳ ಮಟ್ಟದಲ್ಲಿ ಈ ರೀತಿ.

ನೌಕರರ ಮೂಲ ವೇತನ-56,900 ರೂ

ಹೊಸ ತುಟ್ಟಿಭತ್ಯೆ (42%)-ರೂ.23,898

ಇದುವರೆಗೆ ತುಟ್ಟಿಭತ್ಯೆ (38%)-ಮಾಸಿಕ ರೂ.21,622

ಎಷ್ಟು ಡಿಎ ಹೆಚ್ಚಾಗುತ್ತದೆ - ತಿಂಗಳಿಗೆ 2276 ರೂ

ವಾರ್ಷಿಕ ವೇತನದಲ್ಲಿ ಹೆಚ್ಚಳ -ರೂ.2276X12=ರೂ.27312

ಇದನ್ನೂ ಓದಿ: ನಂದಿನಿ ಹಾಲಿನ ದರ ಏರಿಕೆ : ಇಂದು ಮಧ್ಯರಾತ್ರಿಯಿಂದ ನೂತನ ದರ ಜಾರಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News