Curfew Extends in Goa : ಗೋವಾದಲ್ಲಿ ಮತ್ತೆ ಒಂದು ವಾರ ವಿಸ್ತರಣೆಗೊಂಡ ಕರ್ಫ್ಯೂ!

ರಾಜ್ಯದಲ್ಲಿ ಕಫ್ರ್ಯೂ ಕಾಲಾವಧಿ ಜೂನ್ 14 ರಂದು ಮುಕ್ತಾಯಗೊಳ್ಳುತ್ತಿತ್ತು

Last Updated : Jun 13, 2021, 04:50 PM IST
  • ಗೋವಾ ಸರ್ಕಾರವು ರಾಜ್ಯಾದ್ಯಂತ ಕರ್ಫ್ಯೂ
  • ಇನ್ನೂ 7 ದಿನಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ
  • ರಾಜ್ಯದಲ್ಲಿ ಕಫ್ರ್ಯೂ ಕಾಲಾವಧಿ ಜೂನ್ 14 ರಂದು ಮುಕ್ತಾಯಗೊಳ್ಳುತ್ತಿತ್ತು
Curfew Extends in Goa : ಗೋವಾದಲ್ಲಿ ಮತ್ತೆ ಒಂದು ವಾರ ವಿಸ್ತರಣೆಗೊಂಡ ಕರ್ಫ್ಯೂ! title=

ಪಣಜಿ : ಗೋವಾ ಸರ್ಕಾರವು ರಾಜ್ಯಾದ್ಯಂತ ಕರ್ಫ್ಯೂ ಕಾಲಾವಧಿಯನ್ನು ಇನ್ನೂ 7 ದಿನಗಳ ಕಾಲ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಮದುವೆ ಸಮಾರಂಭಗಳನ್ನು 50 ಜನರ ಉಪಸ್ಥಿತಿಯಲ್ಲಿ ನಡೆಸಲು ಪರವಾನಗಿ ನೀಡಲಾಗಿದೆ. ಪಂಚಾಯತ್, ಪಾಲಿಕೆ ಮಾರ್ಕೆಟ್ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್(Pramod Sawant) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Viral Video : ಸ್ಟೇಜ್ ಮೇಲೆ ಅಕ್ಕನ ಗಂಡನಿಗೆ Kiss ಕೊಟ್ಟ ತಂಗಿ!

ರಾಜ್ಯದಲ್ಲಿ ಕಫ್ರ್ಯೂ(Curfew) ಕಾಲಾವಧಿ ಜೂನ್ 14 ರಂದು ಮುಕ್ತಾಯಗೊಳ್ಳುತ್ತಿತ್ತು, ಇದನ್ನು ಇದೀಗ ಸರ್ಕಾರವು 7 ದಿನಗಳ ಕಾಲ ವಿಸ್ತರಣೆ ಮಾಡಿದ್ದು, ಕೆಲ ವಿನಾಯತಿಗಳನ್ನು ನೀಡಿದೆ. ರಾಜ್ಯದಲ್ಲಿ ಜೂನ್ 21 ರ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ಇದನ್ನೂ ಓದಿ : Delhi Unlock : ದೆಹಲಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ

ಕಳೆದ ವಾರ ಕರ್ಫ್ಯೂ ವಿಸ್ತರಣೆ(Curfew Extends) ಮಾಡುವಾಗ ಸರ್ಕಾರವು ಮಳೆಗಾಲದ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿತ್ತು. ಇದೀಗ ಪ್ರಸಕ್ತ ಬಾರಿ ಕಫ್ರ್ಯೂ ವಿಸ್ತರಣೆ ಮಾಡುವ ಸಂದರ್ಭದಲ್ಲಿ 50 ಜನರ ಉಪಸ್ಥಿತಿಯಲ್ಲಿ ರಾಜ್ಯದಲ್ಲಿ ಮದುವೆ ಸಮಾರಂಭಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ.

ಇದನ್ನೂ ಓದಿ : Covid-19 ನ ಸಂಭಾವ್ಯ ಮೂರನೇ ಅಲೆ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ, ತಜ್ಞರು ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News