ನವದೆಹಲಿ : Goa election result 2022 : ಗೋವಾ ವಿಧಾನಸಭೆಯ ಎಲ್ಲಾ 40 ಸ್ಥಾನಗಳ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಬಹಿರಂಗವಾಗಲಿದೆ (Goa Election Result 202). ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆಯಲ್ಲಿ ಬಿಜೆಪಿ 18 ಹಾಗೂ ಕಾಂಗ್ರೆಸ್ 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಮಟ್ಟಿಗೆ ಇದೊಂದು ಜಿದ್ದಾಜಿದ್ದಿನ ಕಾಳಗದಂತೆ ಕಾಣುತ್ತಿದೆ. ಮತ್ತೊಂದೆಡೆ, ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ (Uthpal parikar) ಅಂಚೆ ಮತಗಳ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಉತ್ಪಲ್ ಪರಿಕ್ಕರ್ ಸ್ವತಂತ್ರ ಅಭ್ಯರ್ಥಿ :
ಬಿಜೆಪಿಯೊಂದಿಗಿನ (BJP) ಅಸಮಾಧಾನದಿಂದಾಗಿ ಉತ್ಪಲ್ ಪರಿಕ್ಕರ್ (Uthpal parikar) ಅವರು ಪಣಜಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಉತ್ಪಲ್ ಪರಿಕ್ಕರ್ ಪನಜಿಯಿಂದ ಕಣಕ್ಕಿಳಿಯಲು ಬಿಜೆಪಿಯಿಂದ ಟಿಕೆಟ್ ಬಯಸಿದ್ದರು, ಆದರೆ ಬಿಜೆಪಿ ಆ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿತು. ಇದಾದ ನಂತರ, ಉತ್ಪಲ್ ಪಣಜಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇದೀಗ ಅವರು ಬಿಜೆಪಿ ಅಭ್ಯರ್ಥಿ ಅಟಾನಾಸಿಯೊ ಮಾನ್ಸೆರೇಟ್ ಮತ್ತು ಕಾಂಗ್ರೆಸ್ನ ಎಲ್ವಿಸ್ ಗೋಮ್ಸ್ ಅವರಿಗಿಂತ ಮುಂದಿದ್ದಾರೆ.
ಇದನ್ನೂ ಓದಿ : ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಗೆಲುವು ಸಾಧಿಸಿದರೆ ರಾಷ್ಟ್ರಪತಿ ಚುನಾವಣೆಗೆ ಸಿಗಲಿದೆ ತಿರುವು
ಕಣದಲ್ಲಿರುವ ಇತರ ನಾಯಕರು :
ಮನೋಹರ್ ಪರಿಕ್ಕರ್ ನಿಧನದ ನಂತರ ಪ್ರಮೋದ್ ಸಾವಂತ್ (BJP), ವಿರೋಧ ಪಕ್ಷದ ನಾಯಕ ದಿಗಂಬರ್ ಕಾಮತ್ (Congress), ಮಾಜಿ ಸಿಎಂ ಚರ್ಚಿಲ್ ಅಲೆಮಾವೊ (TMC), ರವಿ ನಾಯ್ಕ (BJP), ಲಕ್ಷ್ಮೀಕಾಂತ್ ಪರ್ಸೇಕರ್ (independent), ಮಾಜಿ ಉಪ ಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಕೂಡಾ ಕಣದಲ್ಲಿದ್ದಾರೆ.
ಇದನ್ನೂ ಓದಿ : Punjab Election Result 2022: ಪಂಜಾಬ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಆಮ್ ಆದ್ಮಿ ಪಕ್ಷ; ಎಲ್ಲರ ಗಮನ ಸೆಳೆದ ಬ್ಯಾನರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.