CORONAVIRUSಗೆ ಪರಿಹಾರ ಸೂಚಿಸಿ 1 ಲಕ್ಷ ರೂ.ಬಹುಮಾನ ಗೆಲ್ಲಿ

ಸರ್ಕಾರಕ್ಕೆ ಇಷ್ಟವಾಗುವ ಐಡಿಯಾಗೆ ಒಂದು ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು. ಸರ್ಕಾರ ಇದಕ್ಕಾಗಿ 1.75ಲಕ್ಷ ರೂ.ವರೆಗೆ ಮೂರು ಬಹುಮಾನಗಳನ್ನು ಘೋಷಿಸಿದೆ.

Last Updated : Mar 17, 2020, 07:06 PM IST
CORONAVIRUSಗೆ ಪರಿಹಾರ ಸೂಚಿಸಿ 1 ಲಕ್ಷ ರೂ.ಬಹುಮಾನ ಗೆಲ್ಲಿ title=

ಸದ್ಯ ಇಡೀ ವಿಶ್ವ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿದೆ. ವಿಶ್ವಾದ್ಯಂತ ಸುಮಾರು 6000 ಕ್ಕೂ ಅಧಿಕ ಜನರು ಈ ಮಾರಕ ವೈರಸ್ ದಾಳಿಗೆ ತುತ್ತಾಗಿದ್ದಾರೆ. ಭಾರತದಲ್ಲಿಯೂ ಕೂಡ covid19 ವೈರಸ್ ದಾಳಿಗೆ ಗುರಿಯಾಗಿರುವವರ ಸಂಖ್ಯೆ 150 ಕ್ಕೆ ತಲುಪಿದೆ. ಈ ವೈರಸ್ ನ ದಾಳಿಯಿಂದ ಪಾರಾಗಲು ಜನರು ಮನೆಯಲ್ಲಿಯೇ ಬಂಧಿತರಾಗುತ್ತಿದ್ದಾರೆ. ಈ ಮಧ್ಯೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮುಂದೆ ಬರುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ದೇಶದ ನಾಗರಿಕರಿಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಲಹೆಗಳನ್ನು ನೀಡಲು ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಒಂದು ಅರೋಗ್ಯಪೂರ್ಣ ಗ್ರಹ ನಿರ್ಮಿಸೋಣ, ಹಲವು ಜನರು COVID19ರ ವಿರುದ್ಧ ಹೋರಾಡಲು ತಾಂತ್ರಿಕ ಸಲಹೆಗಳನ್ನು ನೀಡುತ್ತಿದ್ದಾರೆ. ನೀವೂ ಕೂಡ ನಿಮ್ಮ ಸಲಹೆಗಳನ್ನು @mygovindia ಮೇಲೆ ಹಂಚಿಕೊಳ್ಳಿ. ಇದು #IndiaFightsCorona ಅಭಿಯಾನಕ್ಕೆ ಸಹಕರಿಸಲಿದೆ ಎಂದು ಹೇಳಿದ್ದಾರೆ.

ಇದಕ್ಕಾಗಿ ಸರ್ಕಾರ ಸಾಮಾಜಿಕ ಮಾಧ್ಯಮಗಳ ಮೇಲೆ  #IndiaFightsCorona ಹೆಸರಿನಡಿ covid-19ಗೆ ಪರಿಹಾರ ಎಂಬ ಚಾಲೆಂಜ್ ಆರಂಭಿಸಿದೆ. ಇದರಲ್ಲಿ ಭಾವಹಿಸಲು ನೀವೂ ಕೂಡ @mygovindia ಮೇಲೆ ನಿಮ್ಮ ಉಪಾಯಗಳನ್ನು ಹಾಗೂ ವಿಚಾರಗಳನ್ನು ಹಂಚಿಕೊಳ್ಳಬಹುದು.

ನೀವು ಹಂಚಿಕೊಂಡ ವಿಚಾರ ಅಥವಾ ಉಪಾಯ ಸರ್ಕಾರಕ್ಕೆ ಇಷ್ಟವಾದರೆ ನಿಮಗೆ ನಗದು ಬಹುಮಾನ ಕೂಡ ಸಿಗಲಿದೆ. ಸರ್ಕಾರ ಇದಕ್ಕಾಗಿ ರೂ.1.75 ಲಕ್ಷ ಮೊತ್ತದ ಒಟ್ಟು ಮೂರು ಬಹುಮಾನಗಳನ್ನು ಘೋಷಿಸಿದೆ.

ಎಲ್ಲಿ ಹಾಗೂ ಹೇಗೆ ಉಪಾಯಗಳನ್ನು ಹಂಚಿಕೊಳ್ಳಬೇಕು?
ನಿಮ್ಮ ಸಲಹೆ ಹಾಗೂ ಉಪಾಯಗಳನ್ನು ಹಂಚಿಕೊಳ್ಳಲು ಮಾರ್ಚ್ 31ರವರೆಗೆ ಕಾಲಾವಕಾಶ ನೀಡಲಾಗಿದೆ. ನೀವು ನಿಮ್ಮ ವಿಚಾರ ಹಾಗೂ ಸಲಹೆಗಳನ್ನು @mygovindia ಮೇಲೆ ಕಳುಹಿಸಬಹುದು. ಯಾವುದೇ ವ್ಯಕ್ತಿ ಅಥವಾ ಸ್ಟಾರ್ಟ್ ಆಪ್ ಈ ಚಾಲೆಂಜ್ ನಲ್ಲಿ ಭಾಗವಹಿಸಬಹುದು.

ಎಷ್ಟು ಬಹುಮಾನ ಸಿಗಲಿದೆ
ಕೊವಿಡ್-19 ಪರಿಹಾರ ಚಾಲೆಂಜ್ ನಲ್ಲಿ ಒಟ್ಟು 1.75 ಲಕ್ಷ ರೂ. ಮೌಲ್ಯದ ಬಹುಮಾನಗಳನ್ನು ನೀಡಲಾಗುವುದು. ಮೊದಲ ಬಹುಮಾನ 1 ಲಕ್ಷ ರೂ.ಆಗಿದ್ದರೆ. ಎರಡನೇ ಬಹುಮಾನ ಗೆಲ್ಲುವವರಿಗೆ ರೂ.50 ಸಾವಿರ ನೀಡಲಾಗುವುದು ಹಾಗೂ ಮೂರನೇ ಬಹುಮಾನ ಗೆಲ್ಲುವವರಿಗೆ ರೂ.25 ಸಾವಿರ ನಗದು ಬಹುಮಾನ ನೀಡಲಾಗುವುದು.

Trending News