ಉಚಿತವಾಗಿ ಸಿಗುತ್ತಿದೆ Smartphone ಮತ್ತು Tablet, ಎಲ್ಲಿ ಮತ್ತು ಹೇಗೆ ನೊಂದಾಯಿಸಿಕೊಳ್ಳಬೇಕು ಇಲ್ಲಿದೆ ಮಾಹಿತಿ

ಪೋರ್ಟಲ್ ಮೂಲಕ, ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಭವಿಷ್ಯದ ಅಧ್ಯಯನಕ್ಕಾಗಿ ವಿಷಯವನ್ನು ನೀಡಲಾಗುತ್ತದೆ. ಇದಲ್ಲದೆ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ಮತ್ತು ಮೇಲ್ ಐಡಿಗೆ ಕಾಲಕಾಲಕ್ಕೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.  

Written by - Ranjitha R K | Last Updated : Dec 10, 2021, 01:22 PM IST
  • ಯುಪಿ ಸರ್ಕಾರದಿಂದ ಯುವಕರಿಗೆ ಉಚಿತ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌
  • ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಸ್ಕೀಮ್ ವಿತರಣೆಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು
  • ಡಿಸೆಂಬರ್ ಎರಡನೇ ವಾರದಿಂದ ವಿತರಣೆ ನಿರೀಕ್ಷೆ
ಉಚಿತವಾಗಿ ಸಿಗುತ್ತಿದೆ Smartphone ಮತ್ತು Tablet, ಎಲ್ಲಿ ಮತ್ತು ಹೇಗೆ ನೊಂದಾಯಿಸಿಕೊಳ್ಳಬೇಕು ಇಲ್ಲಿದೆ ಮಾಹಿತಿ title=
ಯುಪಿ ಸರ್ಕಾರದಿಂದ ಯುವಕರಿಗೆ ಉಚಿತ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ (file photo)

ನವದೆಹಲಿ :  ರಾಜ್ಯದ ಯುವ ಜನರನ್ನು ತಾಂತ್ರಿಕವಾಗಿ ಅಪ್ ಗ್ರೇಡ್ ಮಾಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (yogi Adityanath) ಉಚಿತವಾಗಿ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ವಿತರಿಸುವುದಾಗಿ (free smartphone tablet distribution) ಘೋಷಿಸಿದೆ. ಯುಪಿಯಲ್ಲಿ ಉಚಿತ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ವಿತರಣೆಯ ದಿನಾಂಕಕ್ಕಾಗಿ ವಿದ್ಯಾರ್ಥಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಡಿಸೆಂಬರ್ ಎರಡನೇ ವಾರದಿಂದ ಉಚಿತ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ವಿತರಣೆ ಪ್ರಾರಂಭವಾಗುವ ನಿರೀಕ್ಷೆಯಿದೆ. 

ಎಲ್ಲಾ ಮಾಹಿತಿಯು ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ :
ಇದಕ್ಕಾಗಿ ಡಿಜಿ ಶಕ್ತಿ ಹೆಸರಿನ ಪೋರ್ಟಲ್ ಅನ್ನು ರಚಿಸಲಾಗಿದೆ. ಈ ಪೋರ್ಟಲ್ ಮೂಲಕ, ಸ್ಮಾರ್ಟ್‌ಫೋನ್‌ಗಳು (Smartphone) ಮತ್ತು ಟ್ಯಾಬ್ಲೆಟ್‌ಗಳ ವಿತರಣೆ (Tablet distribution) ಮತ್ತು ವಿದ್ಯಾರ್ಥಿಗಳಿಗೆ ಭವಿಷ್ಯದ ಅಧ್ಯಯನಕ್ಕಾಗಿ ವಿಷಯವನ್ನು ನೀಡಲಾಗುತ್ತದೆ. ಇದಲ್ಲದೆ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ (mobile number) ಮತ್ತು ಮೇಲ್ ಐಡಿಗೆ ಕಾಲಕಾಲಕ್ಕೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ : ನಿಮಗೆ ಗೊತ್ತಿಲ್ಲದಂತೆ ನಿಮ್ಮ ಫೇಸ್ ಬುಕ್ ಪ್ರೊಫೈಲನ್ನು ಯಾರು ಚೆಕ್ ಮಾಡುತ್ತಿದ್ದಾರೆ ಹೀಗೆ ತಿಳಿಯಿರಿ

ಇಡೀ ಯೋಜನೆಯು ಸಂಪೂರ್ಣವಾಗಿ ಉಚಿತವಾಗಿರಲಿದೆ :
ಉಚಿತ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ನೀಡಲು ಸರ್ಕಾರದಿಂದ ವಿದ್ಯಾರ್ಥಿಗಳಿಗೆ  ರಿಯಾಯಿತಿ ಕೂಡಾ ನೀಡಲಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಎಲ್ಲಿಯೂ ನೋಂದಾಯಿಸಿಕೊಳ್ಳುವ (Regestration) ಅಗತ್ಯವಿಲ್ಲ. ನೋಂದಣಿಯಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ವಿತರಣೆಯವರೆಗೆ, ಸಂಪೂರ್ಣ ವ್ಯವಸ್ಥೆಯು ಉಚಿತವಾಗಿರುತ್ತದೆ. ಕಾಲೇಜುಗಳಿಂದ ವಿದ್ಯಾರ್ಥಿಗಳ ಡೇಟಾವನ್ನು ವಿಶ್ವವಿದ್ಯಾಲಯಕ್ಕೆ ನೀಡಲಾಗುತ್ತದೆ. ವಿಶ್ವವಿದ್ಯಾಲಯದ ಮೂಲಕವೇ ವಿದ್ಯಾರ್ಥಿಗಳ ಡೇಟಾ ಫೀಡಿಂಗ್ ಮಾಡಲಾಗುತ್ತಿದೆ. 

5 ಲಕ್ಷ ಸ್ಮಾರ್ಟ್‌ಫೋನ್‌ಗಳ ವಿತರಣೆ :
ಮೊದಲ ಹಂತದಲ್ಲಿ ಯುಪಿಯಲ್ಲಿ (UP) 2.5 ಲಕ್ಷ ಟ್ಯಾಬ್ಲೆಟ್‌ಗಳು ಮತ್ತು 5 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲಾಗುವುದು. ಕೊರೊನಾ (Coronavirus) ಹಿನ್ನೆಲೆಯಲ್ಲಿ ಆನ್‌ಲೈನ್ ತರಗತಿಗಳು (Online classess) ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ  ಅಗತ್ಯವಿರುವ ವಿದ್ಯಾರ್ಥಿಗಳಿಗೆ ಈ ಗ್ಯಾಜೆಟ್‌ ಪ್ರಯೋಜನಕಾರಿಯಾಗಲಿದೆ.  

ಇದನ್ನೂ ಓದಿ : ಈ ಐದು ರೂಪಾಯಿ ಬದಲಿಸಲಿದೆ ಅದೃಷ್ಟ, ಒಂದು ನಾಣ್ಯದ ಬದಲಿಗೆ ಸಿಗಲಿದೆ 10 ಲಕ್ಷ ರೂಪಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News